ಜೂನ್ ಎರಡನೇ ವಾರದಲ್ಲಿ ಪಿಯುಸಿ ಫಲಿತಾಂಶ ಪ್ರಕಟ
ಬೆಂಗಳೂರು : ಏಪ್ರಿಲ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಜೂನ್ ತಿಂಗಳ ಎರಡನೇ ವಾರದಲ್ಲಿ ಪ್ರಕಟವಾಗುವ ಸಂಭವವಿದೆ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕ ಬಿ.ಎಸ್. ರಾಮಪ್ರಸಾದ್ ಹೇಳಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮೇ 25 ಕ್ಕೆ ಕೊನೆಗೊಳ್ಳಲಿದ್ದು , ಆನಂತರ ಕಂಪ್ಯೂಟರ್‌ನಲ್ಲಿ ಅಂಕಗಳನ್ನು ದಾಖಲಿಸಲು 15 ದಿನ ಬೇಕಾಗುತ್ತದೆ. ಈಗಾಗಲೇ ನಿಗದಿಪಡಿಸಿರುವಂತೆ ಸಿಇಟಿ ಫಲಿತಾಂಶ ಜೂನ್ 10 ರಂದು ಪ್ರಕಟವಾಗಲಿದೆ. ಸಿಇಟಿ ಫಲಿತಾಂಶದ ಆಜುಬಾಜಿನಲ್ಲೇ ಪಿಯುಸಿ ಫಲಿತಾಂಶವೂ ಪ್ರಕಟವಾಗಲಿದೆ ಎಂದು ರಾಮಪ್ರಸಾದ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications