ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆಗೆ ಸಮಗ್ರ ಕಾರ್ಯ ಯೋಜನೆ: ಬರಗೂರು

ಬೆಂಗಳೂರು : ವಿಶ್ವಾದ್ಯಂತ ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಬಳಸಲು ಹಾಗೂ ರಾಜ್ಯದ ಆಡಳಿತದಲ್ಲಿ ಕನ್ನಡದ ಸಂಪೂರ್ಣ ಬಳಕೆಗೆ ಅನುಕೂಲವಾಗುವಂತೆ ಸಮಗ್ರ ಕಾರ್ಯಯೋಜನೆಯಾಂದನ್ನು ರೂಪಿಸಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರು ಬುಧವಾರ ತಿಳಿಸಿದ್ದಾರೆ.

ಈ ಸಮಗ್ರ ಯೋಜನೆಯನ್ನು ರೂಪಿಸುವಾಗ ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆ, ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಶಿಕ್ಷಣ ಇಲಾಖೆಯ ನೆರವು ಪಡೆಯಲಾಗುವುದು ಎಂದೂ ಅವರು ಹೇಳಿದರು.

ಏಕರೂಪದ ಕನ್ನಡ ತಂತ್ರಾಂಶವನ್ನು ಎಲ್ಲ ಇಲಾಖೆಗಳಲ್ಲಿ ಬಳಸಲು ಅನುಕೂಲವಾಗುವಂತೆ ಮಾದರಿ ತಂತ್ರಾಂಶವೊಂದನ್ನು ಒಪ್ಪಿಕೊಳ್ಳಲಾಗಿದೆ. ಕೇಂದ್ರದ ನ್ಯಾಷನಲ್‌ ಇನ್‌ಫರ್‌ಮ್ಯಾಟಿಕ್ಸ್‌ ಸೆಂಟರ್‌ (ನಿಕ್‌) ಕನ್ನಡ ಪದಗಳಿಗೆ ಸೂಕ್ತ ಭಾಷಾಂತರ ಒದಗಿಸಲಿದೆ ಎಂದೂ ಅವರು ಹೇಳಿದರು.

ಆರ್ಥಿಕ ಹಾಗೂ ಆಡಳಿತ ಸಿಬ್ಬಂದಿ ಸುಧಾರಣೆ ಇಲಾಖೆಗಳಲ್ಲಿ ನೂರಕ್ಕೆ ನೂರರಷ್ಟು ಕನ್ನಡ ಬಳಸುವ ಬಗ್ಗೆ ಅಧ್ಯಯನ ನಡೆಸಲು ಮೂವರು ನಿವೃತ್ತ ಸರಕಾರಿ ಅಧಿಕಾರಿಗಳೂ ಹಾಗೂ ತಜ್ಞರಾದ ವಾಸುದೇವ್‌, ಆನಂದಮೂರ್ತಿ ಹಾಗೂ ಹಿರಣ್ಣಯ್ಯ ಅವರನ್ನು ನಿಯೋಜಿಸಲಾಗಿದೆ ಎಂದೂ ಬರಗೂರು ರಾಮಚಂದ್ರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+