Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಷೇರು ವ್ಯವಹಾರಗಳಲ್ಲಿ ಇವತ್ತು ತುಸು ಪ್ರಗತಿ ಕಾಣುತ್ತೀರಿ. ನಾಳಿನ ಅಡಿಪಾಯ ಇವತ್ತೇ ಹಾಕಿದರೆ ಉತ್ತಮವೆನಿಸುತ್ತದೆ.

ವೃಷಭ : ನಿಮ್ಮನೆ ಕೆಟ್ಟ ಪರಿಸ್ಥಿತಿಗಳನ್ನು ಇತರರಿಗೆ ತೋರ್ಪಡಿಸುವುದು ನಿಮಗಿಷ್ಟವಾಗುವುದಿಲ್ಲ. ಸ್ನೇಹಿತರ ವರ್ತನೆಯಿಂದ ಬೇಸರವಾದರೆ ಸಹಿಸಿಕೊಳ್ಳಬೇಕು.

ಮಿಥುನ : ಧನಾತ್ಮಕವಾಗಲಿ, ಋಣಾತ್ಮಕವಾಗಲೀ, ನಿರೀಕ್ಷೆಗಳು ನಿಜವಾದಾಗ ಖುಷಿ ಪಡಬೇಕು ತಾನೇ ? ಹದಗೆಟ್ಟಿರುವ ಆರೋಗ್ಯದತ್ತ ಹೆಚ್ಚಿನ ಗಮನ ಅಗತ್ಯ.

ಕಟಕ : ನಿಮಗೆ ಬಂದಿರುವ ಕಾಸಿನ ಬೆಂಬಲಕ್ಕೆ ಮನೆಯವರೆಲ್ಲರೂ ಸಂತೋಷ ಪಡುತ್ತಾರೆ. ಮನೋಲ್ಲಾಸದಿಂದ ಹೊಸ ವಿಷಯಗಳತ್ತ ಹೆಚ್ಚು ಗಮನ ಹರಿಸುತ್ತೀರಿ.

ಸಿಂಹ : ಹತ್ತಿರದ ಸ್ನೇಹಿತರಿಗೆ ನೋವಾದಾಗ ಮನಸ್ಸು ಮುದುಡಿಕೊಳ್ಳುವುದು ಸಹಜ. ಆದರೆ ಇವೆಲ್ಲ ತಾತ್ಕಾಲಿಕ ಅನ್ನುವುದನ್ನು ಮರೆಯಬಾರದು.

ಕನ್ಯಾ : ಮನಸ್ಸಿಗೆ ತುಂಬು ನೆಮ್ಮದಿ ಸಿಗುವುದರಿಂದ ಕೆಲಸ ಕಾರ್ಯಗಳು ಸಸೂತ್ರವಾಗಿ ನಡೆಯುತ್ತವೆ. ವ್ಯಾಪಾರ ವ್ಯವಹಾರಗಳಲ್ಲೂ ಪ್ರಗತಿ ಕಾಣಲಿರುವಿರಿ.

ತುಲಾ : ಸ್ನೇಹಿತರನ್ನು ಕಳೆದುಕೊಂಡ ದುಃಖದಿಂದ ನರಳುತ್ತಿದ್ದೀರಿ. ಆದರೆ, ನಿಮ್ಮ ಸ್ನೇಹಿತರು ಆಸಕ್ತಿಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದ್ದಾರೆ.

ವೃಶ್ಚಿಕ : ಅಪರೂಪದ ಜನರ ಭೇಟಿಯಿಂದಾದ ಪುಳಕದಿಂದ ಹೊಸ ಕನಸುಗಳು ಹುಟ್ಟಿಕೊಳ್ಳಬಹುದು. ಶಾಪಿಂಗ್‌ ಉಸಾಬರಿ ಇವತ್ತು ಕೈ ಬಿಡಿ.

ಧನಸ್ಸು : ಅನಾವಶ್ಯಕವಾಗಿ ಅವಸರ ಮಾಡಿಕೊಂಡು ಗೊಂದಲಕ್ಕೆ ಸಿಲುಕಿಕೊಳ್ಳುತ್ತೀರಿ. ವ್ಯಾಪಾರದಲ್ಲಿ ಇದೆಲ್ಲ ಒಳ್ಳೇ ಲಕ್ಷಣಗಳಲ್ಲ ಅಲ್ವೇ ?

ಮಕರ : ಸೃಜನ ಶೀಲ ಕೆಲಸಗಳು ನಿಮಗೆ ಒಗ್ಗುವುದಿಲ್ಲವಾದ್ದರಿಂದ, ಬೇರೆ ಕೆಲಸಗಳತ್ತ ಗಮನ ಹರಿಸಿ. ಇದು ನಿಮಗೆ ಹಿತ ತರುವಂತಹುದಲ್ಲ.

ಕುಂಭ : ಮನೆ ಕೆಲಸಗಳ ಅಸೈನ್‌ಮೆಂಟ್‌ಗಳು ನಿಮಗೆ ಹೆಚ್ಚು ಅಂತ ಅನಿಸಿದರೂ, ಒಟ್ಟಿನಲ್ಲಿ ನಿಮ್ಮ ಪರವಾಗಿಯೇ ಅವು ದುಡಿಯುತ್ತವೆ.

ಮೀನ : ಅಪರೂಪದ ಜನರ ಭೇಟಿಯನ್ನು ಗೋಲ್‌ಮಾಲ್‌ ಆಗಿ ಪರಿವರ್ತಿಸಬೇಡಿ. ಕೆಲಸ ಕಾರ್ಯಗಳ ಪ್ರಗತಿ ನಿಮಗೆ ಖುಷಿ ನೀಡುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+