ಆಪ್ಟಿಕ್ ಫೈಬರ್ ಕೇಬಲ್ ಜೋಡಣೆ ವಿಳಂಬ : ಕ್ಷಮೆ ಕೋರಿದ ಕೃಷ್ಣ
ಬೆಂಗಳೂರು : ಆಪ್ಟಿಕ್ ಫೈಬರ್ ಕೇಬಲ್ ಜೋಡಣೆಯಿಂದ ಇಂಟರ್‌ನೆಟ್ ಸೇವೆ ಸುಲಭವಾಗಿ ಸಾರ್ವಜನಿಕರಿಗೆ ದೊರಕುತ್ತದೆ. ಮಾಹಿತಿ ತಂತ್ರಜ್ಞಾನ ಹಿರಿಮೆಯ ಗರಿಹೊತ್ತ ಬೆಂಗಳೂರಿಗರಿಗೆ ಒಂದರ್ಥದಲ್ಲಿ ವರವಾಗಲಿದೆ. ಆದರೆ, ಸದ್ಯಕ್ಕಂತೂ ಇದು ಶಾಪವಾಗಿ ಪರಿಣಮಿಸಿದೆ.
ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರೇ ಸ್ವತಃ ಬೆಂಗಳೂರಿಗರ ಕ್ಷಮೆ ಕೋರುವಂತೆ ಮಾಡಿದೆ. ನಿಗದಿತ ಕಾಲಾವಧಿಯಲ್ಲಿ ಈ ಕೇಬಲ್‌ಗಳ ಜೋಡಣೆ ಆಗದೆ, ಬೆಂಗಳೂರು ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನು ಒಪ್ಪಿಕೊಂಡ ಮುಖ್ಯಮಂತ್ರಿಗಳು ಭಾನುವಾರ ಬಹಿರಂಗವಾಗಿ ಕ್ಷಮೆ ಕೋರಿದರು.
ಹೊಸದಾಗಿ 15 ದಿನಗಳ ಗಡುವು ವಿಧಿಸಿದ ಅವರು, ಮೇ ತಿಂಗಳ ಅಂತ್ಯದೊಳಗೆ ಗುತ್ತಿಗೆದಾರರು ಕಾಮಗಾರಿ ಮುಗಿಸಲಿದ್ದಾರೆ, ತಪ್ಪಿದರೆ, ಉಗ್ರಕ್ರಮಕ್ಕೆ ಒಳಗಾಗುವರು ಎಂದು ಎಚ್ಚರಿಸಿದರು.
ನಗರದ ಎಲ್ಲ ರಸ್ತೆಗಳನ್ನೂ ಅಗೆದಿರುವುದರಿಂದ ಹಿರಿಯ ನಾಗರಿಕರು, ಪಾದಚಾರಿಗಳು ಹಾಗೂ ಮಕ್ಕಳು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಆದರೆ, ಈ ಕೇಬಲ್ ಅಳವಡಿಸುವುದರಿಂದ ದೀರ್ಘಾವಧಿ ಪ್ರಯೋಜನ ಇದೆ. ಹೀಗಾಗಿ ಮಳೆಗಾಲ ಆರಂಭಕ್ಕೆ ಮೊದಲು ಈ ಕಾಮಗಾರಿ ಕೈಗೊಳ್ಳಲಾಗಿದೆ. ಬೆಂಗಳೂರಿಗರು ಸಹಕರಿಸಬೇಕು ಎಂದು ಕೋರಿದರು.
ಸದಾಶಿವನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಅಭಿವೃದ್ಧಿಪಡಿಸಿ, ನಿರ್ವಹಿಸುತ್ತಿರುವ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರವನ್ನು ಹಸಿರಾಗಿ ಹಾಗೂ ಸ್ವಚ್ಛವಾಗಿಡುವಲ್ಲಿ ಪ್ರತಿಯಾಬ್ಬ ನಾಗರಿಕನ ಜವಾಬ್ದಾರಿಯೂ ಇದೆ. ಸರಕಾರದೊಂದಿಗೆ ನಾಗರಿಕರು ಸಹಕರಿಸಿದಾಗ ಮಾತ್ರ ಇಂತಹ ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನೇರ ವಿಮಾನ : ನಗರಕ್ಕೆ ನೇರ ವಿದೇಶ ವಿಮಾನಯಾನ ಸೌಲಭ್ಯವಿಲ್ಲದಿರುವುದೂ ಮಾಹಿತಿ ತಂತ್ರಜ್ಞಾನ ಉದ್ದಿಮೆ ಚಟುವಟಿಕೆಯ ಪ್ರಗತಿಗೆ ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯ ಪಾಲುದಾರಿಕೆ ಬಗ್ಗೆ ಜೂನ್ ತಿಂಗಳೊಳಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಓಪನ್ ಸ್ಕೈ ಪಾಲಿಸಿ ಅಡಿಯಲ್ಲಿ ಕಳೆದವಾರ ಮಲೇಷಿಯಾ ಸರಕಾರ ಬೆಂಗಳೂರು - ಕೌಲಾಲಂಪುರ ನಡುವೆ ನೇರ ವಿಮಾನಯಾನ ಆರಂಭಿಸಿದೆ, ಲುಫ್ತಾನ್ಸಾ ಏರ್‌ವೇಸ್ ಮುಂದಿನ ತಿಂಗಳು ಬೆಂಗಳೂರು - ಫ್ರಾಂಕ್‌ಫರ್ಟ್ ನಡುವೆ ನೇರ ವಿಮಾನ ಸಂಚಾರ ಆರಂಭಿಸಲಿದೆ. ಇದಲ್ಲದೆ ಬೆಂಗಳೂರಿನಿಂದ ನೇರ ವಿಮಾನ ಸಂಚಾರ ಆರಂಭಿಸಲು ಅರಬ್ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದೂ ಕೃಷ್ಣ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಭಾಗವಹಿಸಿದ್ದರು.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications