Get Updates
Get notified of breaking news, exclusive insights, and must-see stories!

ಜಯಾ ಅಮ್ಮಾವ್ರಿಗೆ ರಾಜ್ಯಪಾಲರ ಬುಲಾವು,ಸಂಜೆ ಪ್ರಮಾಣ ವಚನ

ಚೆನ್ನೈ: ತಮಿಳುನಾಡಿನ ರಾಜ್ಯಪಾಲೆ ಎಂ.ಫಾತಿಮ ಬೀವಿ ಅವರು ಅಣ್ಣಾ ಡಿಎಂಕೆ ನಾಯಕಿ ಜಯಲಲಿತಾ ಅವರಿಗೆ ಸರ್ಕಾರ ರಚಿಸಲು ಸೋಮವಾರ ಆಹ್ವಾನ ನೀಡಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿಯಾಗುವ ನಿಟ್ಟಿನಲ್ಲಿ ಜಯಲಲಿತಾ ಅವರ ಹಾದಿ ಸುಗಮವಾಗಿದ್ದು, ಸಂಜೆ ಅವರು ಪ್ರಮಾಣವಚನ ಸ್ವೀಕರಿಸುವರೆಂದು ಪಕ್ಷದ ಮೂಲಗಳು ತಿಳಿಸಿವೆ.

ಸೋಮವಾರ ಬೆಳಿಗ್ಗೆ ಸೇರಿದ ಅಣ್ಣಾಡಿಎಂಕೆ ಚುನಾಯಿತ ಶಾಸಕರ ಸಭೆಯು ತಮ್ಮ ನಾಯಕಿಯನ್ನಾಗಿ ಜಯಲಲಿತಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿತು. ಆನಂತರ ರಾಜಭವನಕ್ಕೆ ತೆರಳಿದ ಜಯಲಲಿತಾ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ತಾವು ಆಯ್ಕೆಯಾಗಿರುವ ಪತ್ರದ ಪ್ರತಿಯನ್ನು ರಾಜ್ಯಪಾಲರಿಗೆ ತಲುಪಿಸಿದ ಸ್ವಲ್ಪ ಹೊತ್ತಿನಲ್ಲೇ ಸರ್ಕಾರ ರಚಿಸುವಂತೆ ಜಯಾ ಅವರನ್ನು ರಾಜ್ಯಪಾಲರು ಆಹ್ವಾನಿಸಿದರು.

ಸಂಚಿವ ಸಂಪುಟದ ಸದಸ್ಯರ ಹೆಸರುಗಳನ್ನು ಕಳುಹಿಸುವಂತೆ ಫಾತಿಮಾ ಅವರು ಜಯಲಲಿತಾರಿಗೆ ಸೂಚನೆ ಕಳುಹಿಸಿದ್ದಾರೆ ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ. ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವ ಜಯಲಲಿತಾ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಚುನಾವಣಾ ಆಯೋಗ ನಿರಾಕರಿಸಿತ್ತು . ಆದರೆ, ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ಶಾಸಕಿಯಾಗಿ ಆಯ್ಕೆಯಾಗಲು ಕಾನೂನು ಪ್ರಕಾರ ಅವರಿಗೆ ಆರು ತಿಂಗಳ ಅವಕಾಶವಿದೆ.

ಜಯಾ ನರಹಂತಕ ವೀರಪ್ಪನ್‌ನ ಬಂಧಿಸುತ್ತಾರೆ

ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ ಅಧಿಕಾರಕ್ಕೆ ಮರಳಿರುವುದರಿಂದ, ವೀರಪ್ಪನ್‌ ಬಂಧನ ಜಯಲಲಿತಾ ಅವರಿಂದ ಸಾಧ್ಯವಾಗುತ್ತದೆನ್ನುವ ವಿಶ್ವಾಸವನ್ನು ಅಣ್ಣಾಡಿಎಂಕೆಯ ಕರ್ನಾಟಕ ಘಟಕ ವ್ಯಕ್ತಪಡಿಸಿದೆ.

ಕರುಣಾನಿಧಿ ಇಷ್ಟು ವರ್ಷಗಳ ಕಾಲ ನರಹಂತಕನನ್ನು ಕಾಡಿನಲ್ಲಿ ಬಿಟ್ಟಿದ್ದಾರೆ. ಆದರೆ, ಅಮ್ಮಾವ್ರು ವೀರಪ್ಪನ್‌ ಹಾಗೂ ಮಾರನ್‌ರನ್ನು ಬಂಧಿಸುವುದು ಖಚಿತ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕರ್ನಾಟಕ ಎಐಡಿಎಂಕೆ ಸಹ ಕಾರ್ಯದರ್ಶಿ ಕೆ.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಜಯಲಲಿತಾ ಹಾಗೂ ಕರ್ನಾಟಕ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ನಡುವೆ ಸೌಹಾರ್ದಯುತ ಸಂಬಂಧವಿರುವುದರಿಂದ ಕಾರ್ಯಾಚರಣೆ ಸುಲಭವಾಗಬಹುದೆನ್ನುವ ವಿಶ್ವಾಸ ಅವರದು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+