ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದಲ್ಲಿ ಒಳಾಂಗಣ ಕ್ರಿಕೆಟ್‌ ಆಡಲು ಬಿಸಿಸಿಐ ಒಪ್ಪಿಗೆ

By Staff
|
Google Oneindia Kannada News

ಮುಂಬಯಿ : ಸೆಪ್ಟೆಂಬರ್‌ 10 ರಿಂದ 14 ರವರೆಗೆ ಮೆಲ್ಬೋರ್ನ್‌ನ ಕೊಲೋನಿಯಲ್‌ ಒಳಾಂಗಣ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಕ್ರಿಕೆಟ್‌ ಆಡಲಿದೆ.

ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ನೀಡಿದ ಬುಲಾವನ್ನು ನಾವು ಒಪ್ಪಿಕೊಂಡಿದ್ದೇವೆ. ಮುಂದೆ ಆಸ್ಟ್ರೇಲಿಯಾ ಮತ್ತೆ ಭಾರತಕ್ಕೆ ಬಂದು ಆಡಬೇಕೆಂದು ನಾವು ಕೋರಿದ್ದು, ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಅದಕ್ಕೆ ಒಪ್ಪಿದೆ. ಕಾರಣ ನಾವೂ ಆಡಲು ಒಪ್ಪಿದ್ದೇವೆ. ಇದೊಂದು ರೀತಿ ಕೊಡುಕೊಳ್ಳು ಕ್ರಿಕೆಟ್‌ ಒಪ್ಪಂದ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯವಂತ ಲೆಲೆ ಬರೋಡದಿಂದ ಫೋನಿನ ಮೂಲಕ ಸುದ್ದಿಸಂಸ್ಥೆಯಾಂದಕ್ಕೆ ಹೇಳಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ನಡೆದ ಭಾರತ- ಆಸ್ಟ್ರೇಲಿಯಾ ನಡುವಣ ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ 2-1ರಿಂದ ಗೆದ್ದರೆ, ನಿಯಮಿತ ಓವರ್‌ ಸರಣಿಯನ್ನು ಆಸ್ಟ್ರೇಲಿಯಾ 3-2ರಲ್ಲಿ ಗೆದ್ದುಕೊಂಡಿತ್ತು. ಭಾರತ ಪ್ರವಾಸದ ನಂತರ ಒಳಾಂಗಣ ಕ್ರಿಕೆಟ್‌ ಆಡಲು ಆಸ್ಟ್ರೇಲಿಯಾ ಭಾರತ ತಂಡಕ್ಕೆ ಬುಲಾವು ನೀಡಿತ್ತು. ಒಳಾಂಗಣ ಕ್ರಿಕೆಟ್‌ ಆಡಲು ಆಮಂತ್ರಣ ಪಡೆದಿರುವ 2ನೇ ತಂಡ ಭಾರತ. ಕಳೆದ ವರ್ಷ ದಕ್ಷಿಣ ಆಫ್ರಿಕದವರಿಗೆ ಕಾಂಗರೂಗಳಿಂದ ಆಮಂತ್ರಣ ಸಿಕ್ಕಿತ್ತು.

ಈ ಒಳಾಂಗಣ ಕ್ರಿಕೆಟ್‌ನಲ್ಲಿ ಭಾರತ ಆಡುವುದೋ ಇಲ್ಲವೋ ಎಂಬ ಬಗೆಗಿನ ಅನುಮಾನಗಳಿಗೆ ಲೆಲೆ ಅವರ ಈ ಹೇಳಿಕೆಯಿಂದ ತೆರೆ ಬಿದ್ದಿದೆ. ಸೆಪ್ಟೆಂಬರ್‌ 2ಕ್ಕೆ ಶ್ರೀಲಂಕಾ ಪ್ರವಾಸ ಮುಗಿದ ನಂತರ ಭಾರತ ಆಸ್ಟ್ರೇಲಿಯಾಗೆ ಹಾರಲಿದೆ. ಅಕ್ಟೋಬರ್‌ 1ರಿಂದ ದಕ್ಷಿಣ ಆಫ್ರಿಕಕ್ಕೆ ಭಾರತ ಕ್ರಿಕೆಟ್‌ ತಂಡ ಪ್ರಯಾಣ ಬೆಳೆಸಲಿದೆ. ಇವೆಲ್ಲಕ್ಕೂ ಮುನ್ನ ಇನ್ನೇನು ಜಿಂಬಾಬ್ವೆ ಪ್ರವಾಸಕ್ಕೆ ತಂಡ ಅಣಿಯಾಗಿದೆ. ಕ್ರಿಕೆಟ್‌ ಅಭಿಮಾನಿಗಳಿಗೆ 2001ರ ವರ್ಷಪೂರ್ತಿ ಸುಗ್ಗಿ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X