Get Updates
Get notified of breaking news, exclusive insights, and must-see stories!

ಆಂಗ್ಲ ಕಾದಂಬರಿಕಾರ ಆರ್‌.ಕೆ. ನಾರಾಯಣ್‌ ದೇಹಸ್ಥಿತಿ ಗಂಭೀರ

ಚೆನ್ನೈ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಭಾರತದ ಪ್ರಸಿದ್ಧ ಆಂಗ್ಲ ಕಾದಂಬರಿಕಾರ ಆರ್‌. ಕೆ. ನಾರಾಯಣ್‌ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

94 ವರ್ಷದ ನಾರಾಯಣ್‌ ಅವರು ಕೃತಕ ಉಸಿರಾಟ ವ್ಯವಸ್ಥೆಯನ್ನು ಅವಲಂಬಿಸಿದ್ದರೂ, ಪ್ರಜ್ಞಾವಸ್ಥೆಯಲ್ಲಿದ್ದಾರೆ ಎಂದು ಅವರ ಚಿಕಿತ್ಸೆಯ ಹೊಣೆ ಹೊತ್ತ ವೈದ್ಯರು ತಿಳಿಸಿದ್ದಾರೆ. ಅವರನ್ನು ಏಪ್ರಿಲ್‌ 27ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು.

ಖ್ಯಾತ ವ್ಯಂಗ್ಯ ಚಿತ್ರಕಾರ ಆರ್‌. ಕೆ. ಲಕ್ಷ್ಮಣ್‌ ಅವರ ಸಹೋದರರಾಗಿರುವ ನಾರಾಯಣ್‌ ಅವರು ಸರಳ ಶೈಲಿಯ ಆಂಗ್ಲ ಕಾದಂಬರಿಗಳನ್ನು ಬರೆದು ಪ್ರಸಿದ್ಧರಾಗಿದ್ದರು. ಜನಪ್ರಿಯ ಟೀವಿ ಸೀರಿಯಲ್‌ ಮಾಲ್ಗುಡಿ ಡೇಸ್‌ನ ಕತೆಗಾರನಾಗಿ ಅವರು ಜನಸಾಮಾನ್ಯರನ್ನೂ ತಲುಪಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+