ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮೂರ ಐಟಿ ಸಂತೆ ಮುಗಿಯಿತೇ ಕತೆ?

By Staff
|
Google Oneindia Kannada News

*ಇಮ್ರಾನ್‌ ಖುರೇಷಿಬೆಂಗಳೂರು : ಸದ್ದು ಉಡುಗಿದೆ. ನಾಗಾಲೋಟದಲ್ಲಿ ಬೆಳೆದು, ದಿಕ್ಕು ದಿಕ್ಕಲ್ಲೂ ಹೆಸರು ಮಾಡಿದ ಮಾಹಿತಿ ತಂತ್ರಜ್ಞಾನ ಮುಗುಮ್ಮಾಗಿದೆ. ಮೊದಲ ಅಬ್ಬರಗಳಿಲ್ಲ. ಇದು ಕೇವಲ ಅಮೆರಿಕದಲ್ಲಲ್ಲ ; ಸಾಫ್ಟ್‌ವೇರ್‌ ರಫ್ತಿನ ದಿಗ್ಗಜ ಭಾರತದಲ್ಲೂ.

ಐಟಿ ಕಂಪನಿಗಳಾಗಲೀ, ಅದರ ಶ್ರೇಯೋಭಿವೃದ್ಧಿಗೆ ಹಗಲು- ರಾತ್ರಿ ದುಡಿದ ಕಾರ್ಮಿಕನಾಗಲೀ ಐಟಿ ಕ್ಯಾಪಿಟಲ್‌ ಬಗ್ಗೆ ಒಂದು ಪಿಸುಮಾತನ್ನೂ ಆಡುತ್ತಿಲ್ಲ . ಕಂಪನಿಗಳ ಗೆಲ್ಲು- ಗೆಲ್ಲು ಎಂಬ ಬೀಜಮಂತ್ರದ ನಡುವೆ ಅಸಮಾನತೆ ಹಾಗೂ ತೂಗುಯ್ಯಾಲೆಯ ಭವಿತವ್ಯದ ಕೊಡುಗೆ ಸಲ್ಲಲಿರುವುದು ಬ್ಲೂಕಾಲರ್‌ಗಳಿಗೆ.

ಬೇರೆ ಕೆಲಸ ಹುಡುಕಿಕೊಳ್ಳಿ, ಕಂಪನಿಯಿಂದ ಹೊರಹೋಗಿ

ಕಾರ್ಮಿಕರು ಇವತ್ತಿಗೂ ನಿರಾಳವಾಗಿರಲು ಒಂದೇ ಕಾರಣವೆಂದರೆ, ಅವರು ಕೆಲಸ ಮಾಡುತ್ತಿರುವ ಕಂಪನಿಗಳು ಒಮ್ಮಿಂದೊಮ್ಮೆಗೇ ಮನೆಗೆ ಹೋಗಿ ಅನ್ನದಿರುವುದು. ಆದರೆ ಕಂಪನಿಗಳು ಪರ್ಮನೆಂಟಾಗಿ ಇಟ್ಟುಕೊಳ್ಳುವ ಭರವಸೆಯನ್ನೂ ಕೊಟ್ಟಿಲ್ಲ . ಅಸಂಖ್ಯಾತ ಕಾರ್ಮಿಕರಿಗೆ ಅವು ಹೇಳಿರುವುದು- ಬೇರೆ ಕೆಲಸ ಸಿಕ್ಕ ನಂತರವಷ್ಟೆ ನೀವು ಕೆಲಸ ಬಿಡಿ. ಕಂಪನಿಯಿಂದ ಮನೆಗೆ ಹೋಗುವ ಹಾದಿಯಲ್ಲಿ ಒಬ್ಬ ಐಟಿ ನೌಕರ ಯಾರಿಗೂ ಹೇಳಬೇಡಿ ಅಂತ ಈ ವಿಷಯ ಪಿಸುಗುಟ್ಟುತ್ತಾನೆ.

ಬರಲಿದೆ ನಿರ್ಧಾರಕ ಜೂನ್‌ : ಈಗ ಐಟಿ ವಲಯಗಳಲ್ಲಿ ಅಡ್ಡಾಡುತ್ತಿರುವ ವಿಷಯ ಕೆಲಸ ಹೋಗುತ್ತಿದೆ ಎಂಬುದಲ್ಲ ; ಬೇರೆ ಕೆಲಸ ಸಿಕ್ಕಾಗ ಬಿಡಿ ಎಂಬ ತಾಕೀತಿಗೆ ಗರಿಷ್ಠ ಡೆಡ್‌ಲೈನ್‌ ಎಷ್ಟಿರಬಹುದು- 9 ತಿಂಗಳು, ಒಂದೂವರೆ ವರ್ಷ... ಎಂಬುದು. ಈ ಬಗ್ಗೆ ಈಗ ಏನೂ ಹೇಳಲಾಗದು. ಪ್ರಸ್ತುತ ವಿತ್ತ ವರ್ಷದ ಮೊದಲ ತ್ರೆೃಮಾಸಿಕ ಜೂನ್‌ ತಿಂಗಳಲ್ಲಿ ಕೊನೆಗೊಳ್ಳಲಿದೆ. ಆಗ ಭಾರತದ ಐಟಿ ಟೊಳ್ಳೋ, ಗಟ್ಟಿಯೋ ಎಂಬುದು ಬಹುತೇಕ ನಿರ್ಧಾರಿತವಾಗಲಿದೆ ಎನ್ನುತ್ತಾರೆ ಒಬ್ಬ ಕೈಗಾರಿಕಾ ವಿಶ್ಲೇಷಕ.

ಬರುವ ಕ್ರಿಸ್‌ಮಸ್‌ ಹೊತ್ತಿಗೆ ನಮ್ಮ ಬಲವಾದ ಗ್ರಾಹಕ ಅಮೆರಿಕ ಈಗಿನ ಆರ್ಥಿಕ ಹಿನ್ನಡೆಯ ಧೂಳು ಕೆಡವಿಕೊಂಡು ಮೇಲೇಳುವನೋ, ಇಲ್ಲ ಅದರಲ್ಲೇ ಉಸಿರುಗಟ್ಟಿ ಪ್ರಾಣ ಕಳೆದುಕೊಳ್ಳುವನೋ ಎಂಬುದರ ಮೇಲೆ ಭಾರತದ ಐಟಿ ಭವಿಷ್ಯ ನಿಂತಿದೆ. ಐಟಿ ವಿಷಯದಲ್ಲಿ ಭಾರತ ಎತ್ತುವ ಮೊದಲ ಸೊಲ್ಲು ಅಮೆರಿಕ. ಇದನ್ನು ಯೂರೋಪ್‌ ರಾಷ್ಟ್ರಗಳತ್ತ ಹರಿಬಿಟ್ಟು, ಕುಸಿಯದಂತೆ ನೋಡಿಕೊಳ್ಳಲು ಸಾಧ್ಯವಿದೆ. ಅಮೆರಿಕದಲ್ಲಿ ಜನವರಿಯಿಂದ ಈವರೆಗೆ ಸುಮಾರು 5 ಲಕ್ಷ ಐಟಿ ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಇದರ ಕಹಿ ಅನುಭವಿಸಿರುವ ಎನ್‌ಆರ್‌ಐ ಒಬ್ಬರು ಹೇಳುತ್ತಾರೆ.

ಈಗ ಕೆಲವು ಕಂಪನಿಗಳು ಮುಗಿದ ಅಧ್ಯಾಯ. ಇನ್ನು ಕೆಲವು ಕಂಪನಿಗಳು ಬಾಗಿಲು ಮುಚ್ಚುವ ಪ್ರಕ್ರಿಯೆಯಲ್ಲಿ ತೊಡಗಿವೆ. ಮತ್ತೆ ಕೆಲವು ಕಂಪನಿಗಳು ಸುಧಾರಣೆ ಆಗುತ್ತೇವೆಂಬ ಅಚಲವಾದ ನಂಬುಗೆಯಿಂದ ಇರುವ ಬಜೆಟ್ಟಿನಲ್ಲೇ ತೊಳಲುತ್ತಾ ಸಾಗಿವೆ. ವಿತ್ತ ವರ್ಷದ ಮೊದಲ ತ್ರೆೃಮಾಸಿಕ ಜೂನ್‌ ಈ ಎಲ್ಲಾ ಅನಿಶ್ಚಿತತೆಗಳಿಗೆ ಉತ್ತರ ಕೊಡಲಿದೆ. ಅದು ಸಿಹಿಯೋ, ಕಹಿಯೋ ಮುಷ್ಠಿ ಬಿಗಿ ಹಿಡಿದು ಕಾಯಬೇಕು ಎಂಬುದು ಫೀಡ್‌ಬ್ಯಾಕ್‌ ಸರ್ವೀಸಸ್‌ ಎಂಬ ಮಾರ್ಕೆಟಿಂಗ್‌ ರಿಸರ್ಚ್‌ ಕಂಪನಿಯ ಅಧಿಕಾರಿ ರವಿ ಚಂದರ್‌ ಅಭಿಪ್ರಾಯ. ಅವರ ಈ ಮಾತುಗಳ ಹಿಂದೆ ಸಣ್ಣದೊಂದು ಅಧ್ಯಯನವೂ ಅಡಗಿದೆ.

ಸುಧಾರಣೆಗೆ 18 ತಿಂಗಳು ಸಾಕು : ಅಮೆರಿಕದಲ್ಲಿ ಆಗಿರುವುದು ಆರ್ಥಿಕ ಕುಸಿತ ಅಲ್ಲ ; ಹಿನ್ನಡೆ ಅಷ್ಟೆ . ಇಂಥಾ ಸನ್ನಿವೇಶಗಳನ್ನು ಎದುರಿಸಲೇ ಬೇಕು. ಅಬ್ಬಬ್ಬಾ ಅಂದರೆ ಇನ್ನು 18 ತಿಂಗಳು. ಆಮೇಲೆ ಎಲ್ಲಾ ಸರಿ ಹೋಗುತ್ತೆ. ಆತಂಕ ಎದುರಿಸಲಾರದ ಕೆಲವರು ಸುಮ್ಮನೆ ಇಲ್ಲ ಸಲ್ಲದ ಪುಕಾರುಗಳನ್ನು ಎಬ್ಬಿಸುತ್ತಿದ್ದಾರಷ್ಟೆ ಎನ್ನುತ್ತಾರೆ ಕಂಪನಿಯಾಂದರ ಮುಖ್ಯ ವ್ಯವಸ್ಥಾಪಕ ಅಧಿಕಾರಿ.

ಶಾಕ್‌... ಶಾಕ್‌ : ಪರವಾಗಿಲ್ಲಪ್ಪಾ, ಒಳ್ಳೆ ಕಾಲ ಬರುತ್ತೆ ಅನ್ನೋ ಸಣ್ಣ ಭರವಸೆಗೆ ಇದೋ ಸಿಡಿದಿದೆ ತಣ್ಣೀರು : ಜಾಗತಿಕ ಸಾಫ್ಟ್‌ವೇರ್‌ ಮೇಜರ್‌ ಹೆವ್‌ಲೆಟ್‌ ಪ್ಯಾಕಾರ್ಡ್‌ನ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಕಾರ್ಲಿ ಫಯೋರಿನಾ ಹೇಳುತ್ತಾರೆ- It is 2002end for the upturn.

(ಐಎಎನ್‌ಎಸ್‌)

ವಾರ್ತಾಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X