Get Updates
Get notified of breaking news, exclusive insights, and must-see stories!

ನಿಮ್ಮ ತಲೆ ಮೇಲೆ 11, 539 ರುಪಾಯಿ ಸಾಲ ಇದೆ ಗೊತ್ತಾ ?

ನವದೆಹಲಿ : ನೀವು ಯಾರ ಬಳಿಯಾದರೂ ಸಾಲ ಮಾಡಿದ್ದೀರಾ? ಮಾಡಿದ ಸಾಲ ತೀರಿಸಿಯಾಗಿದೆಯೇ? ಇಲ್ಲ ... ಇಲ್ಲ .. ನಾನು ಯಾರ ಬಳಿಯೂ ಒಂದು ಚಿಕ್ಕಾಸೂ ಸಾಲ ಪಡೆದಿಲ್ಲ , ನನಗೆ ಸಾಲದ ಹೊರೆ ಇಲ್ಲ ಎಂದು ಮಾತ್ರ ಹೇಳಬೇಡಿ. ಕಳೆದ ವರ್ಷದ ಮಾರ್ಚ್‌ ಅಂತ್ಯಕ್ಕೇ ನಿಮ್ಮ ತಲೆ ಮೇಲೆ ಒಟ್ಟು 11,539 ರುಪಾಯಿ (ಪರೋಕ್ಷ) ಸಾಲ ಇದೆ. ಇದು ಈ ಹೊತ್ತಿಗೆ ಇನ್ನೂ ಹೆಚ್ಚಾಗಿದೆ.

ಭಾರತ ನೈಸರ್ಗಿಕ ಸಂಪತ್ತಿನಿಂದ ತುಂಬಿತುಳುಕುತ್ತಿರುವ ಸಿರಿವಂತ ರಾಷ್ಟ್ರ. ಆದರೆ, ಭಾರತೀಯರು ಮಾತ್ರ ಬಡವರು. ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಹಲವು ಭಾರತೀಯರೂ ಇರಬಹುದು. ಅವರೂ ಈ ಪರೋಕ್ಷ ಸಾಲದ ಹೊರೆ ಹೊತ್ತಿದ್ದಾರೆ!

ಅವರ ತಲೆಯ ಮೇಲೂ ನಿಮ್ಮ ಮೇಲಿರುವಷ್ಟೇ ಸಾಲದ ಹೊರೆ ಇದೆ. ಭಾರತದ ಜನಸಂಖ್ಯೆ 100 ಕೋಟಿ ದಾಟಿದೆ. ಈ ಎಲ್ಲ 100 ಕೋಟಿ ಜನರ ತಲೆಯ ಮೇಲೂ 11,539 ರುಪಾಯಿ ಸಾಲದ ಹೊರೆ ಇದೆ. ಇಂದು ಹುಟ್ಟುವ ಮಗು ಕೂಡ ತನ್ನ ತಲೆ ಮೇಲೆ ಸಾಲದ ಹೊರೆ ಹೊತ್ತೇ ಭೂಸ್ಪರ್ಶ ಮಾಡುತ್ತದೆ.

ಆಶ್ಚರ್ಯಪಡಬೇಡಿ. ಇದು ಕಟು ಸತ್ಯ. ಕಳೆದ ವರ್ಷದ ಮಾರ್ಚ್‌ 31ರವರೆಗಿನ ಲೆಕ್ಕಾಚಾರದಂತೆ ಭಾರತದ ಪ್ರತಿಯಾಬ್ಬ ಪ್ರಜೆಯ ತಲೆಯ ಮೇಲೂ 4,332 ರುಪಾಯಿ ವಿದೇಶಿ ಸಾಲ ಹಾಗೂ 7,207 ರುಪಾಯಿ ದೇಶೀಯ (ಆಂತರಿಕ) ಸಾಲದ ಹೊರೆ ಇದೆ. ಈ ವಿಷಯವನ್ನು ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಬಾಳಾ ಸಾಹೇಬ್‌ ವಿಖೆ ಪಾಟೀಲ್‌ ಸಂಸತ್ತಿನಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ನಾನು ಮೇಲು, ನೀನು ಕೀಳು ಎಂಬುದು ಇಲ್ಲಿಲ್ಲ. ಸಾಲದ ವಿಷಯದಲ್ಲಿ ಎಲ್ಲರೂ ಸಮಾನರೇ, ಏನಂತೀರಿ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+