Get Updates
Get notified of breaking news, exclusive insights, and must-see stories!

ವೇತನದಾರರಿಗೆ ಸಿಹಿ ಸುದ್ದಿ : ವರಮಾನ ತೆರಿಗೆ ಸ್ಟಾಂಡರ್ಡ್‌ ಡಿಡಕ್ಷನ್‌ ಏರಿಕೆ

Finance Minister Yashwanth Sinhaನವದೆಹಲಿ : ವೇತನದಾರರ ಮೂರು ಲಕ್ಷ ರುಪಾಯಿ ಆದಾಯದವರೆಗೆ ಪ್ರಮಾಣ ಕಡಿತ (ಸ್ಟಾಂಡರ್ಡ್‌ ಡಿಡಕ್ಷನ್‌) ದಲ್ಲಿ 5 ಸಾವಿರ ರುಪಾಯಿಯಷ್ಟು ಏರಿಕೆ ಸೇರಿದಂತೆ ಸುಂಕ ಪಾವತಿಯ ಪ್ರಮಾಣದಲ್ಲಿ ಇಳಿಕೆ ಮಾಡಿ, ಕೇಂದ್ರ ವಿತ್ತ ಸಚಿವ ಯಶವಂತ ಸಿನ್ಹ ತೆರಿಗೆ ಸುಧಾರಣಾ ವಿತ್ತ ಮಸೂದೆ ಹೊರಡಿಸಿದ್ದಾರೆ.

ಬುಧವಾರ ಲೋಕಸಭೆಯಲ್ಲಿ ವಿತ್ತ ಮಸೂದೆಯನ್ನು ಮಂಡಿಸಿದ ಸಚಿವರು ತೆರಿಗೆ ಪಾವತಿದಾರಿಗೆ ಈ ಸಿಹಿ ಸುದ್ದಿ ಇತ್ತರು. ಸರ್ಕಾರದ ಈ ನಿರ್ಧಾರದಿಂದ ಬೊಕ್ಕಸ 1 ಸಾವಿರ ಕೋಟಿ ರುಪಾಯಿ ನಷ್ಟ ಅನುಭವಿಸಲಿದೆ. ಪರೋಕ್ಷ ಸುಂಕದಲ್ಲೂ ಕಡಿತ ಮಾಡಲಾಗಿದ್ದು, ಇದರಿಂದ ಬೊಕ್ಕಸಕ್ಕೇನೂ ನಷ್ಟವಿಲ್ಲ.

ವಾರ್ಷಿಕ 1 ಲಕ್ಷ ರುಪಾಯಿ ವರಮಾನ ಗಳಿಸುವ ವೇತನದಾರರಿಗೆ ನೀಡಲಾಗುತ್ತಿದ್ದ 25 ಸಾವಿರ ರುಪಾಯಿ ಪ್ರಮಾಣ ಕಡಿತವನ್ನು 30 ಸಾವಿರ ರುಪಾಯಿಗೆ ಏರಿಸಲಾಗಿದೆ. ಈ ಬದಲಾವಣೆ ವಾರ್ಷಿಕ ಒಂದೂವರೆ ಲಕ್ಷ ರುಪಾಯಿ ಸಂಪಾದಿಸುವ ಮಂದಿಗೂ ಅನ್ವಯಿಸಲಿದೆ. ಒಂದೂವರೆ ಲಕ್ಷ ರುಪಾಯಿಯಿಂದ 3 ಲಕ್ಷ ರುಪಾಯಿ ವಾರ್ಷಿಕ ಆದಾಯ ಇರುವ ವೇತನದಾರರ ಪ್ರಮಾಣ ಕಡಿತವನ್ನು 20 ಸಾವಿರದಿಂದ 25 ಸಾವಿರ ರುಪಾಯಿಗೆ ಹೆಚ್ಚಿಸಲಾಗಿದೆ. 3 ರಿಂದ 5 ಲಕ್ಷ ರುಪಾಯಿ ವರಮಾನ ಇರುವವರಿಗೆ ಈಗಿರುವ 20 ಸಾವಿರ ರುಪಾಯಿಗಳ ಪ್ರಮಾಣ ಕಡಿತವೇ ಮುಂದುವರಿಯುತ್ತದೆ ಎಂದು ಸಿನ್ಹ ವಿವರಿಸಿದರು.

ಬಡ್ಡಿ ತೆರಿಗೆ ಮೇಲಿನ ಆದಾಯ ತೆರಿಗೆ ಮಿತಿ ಕಡಿತ (ಟಿಡಿಎಸ್‌) ವನ್ನು 5 ಸಾವಿರಕ್ಕೇರಿಸುವ ಮೂಲಕ ಕಡಿತವನ್ನು ದ್ವಿಗುಣಗೊಳಿಸಲಾಗಿದೆ. ಒಟ್ಟಾರೆ ವೇತನದಾರರಿಗೆ ತೆರಿಗೆ ಪಾವತಿ ಪ್ರಮಾಣದಲ್ಲಿ ಕಡಿತ ಉಂಟಾಗಲಿದ್ದು, ಸಂತಸ ತರುವ ವಿಷಯವಾಗಿದೆ.

ಇತರೆ ಜವಳಿ ಉತ್ಪನ್ನಗಳಿಗೂ ಸುಂಕ : ಬ್ರಾಂಡೆಡ್‌ ಸಿದ್ಧ ಉಡುಪುಗಳ ಮೇಲೆ ಮಾತ್ರ ವಿಧಿಸಲಾಗಿದ್ದ 16 ಪ್ರತಿಶತ ಅಬಕಾರಿ ಸುಂಕವನ್ನು ರೈನ್‌ಕೋಟ್ಸ್‌, ಒಳ ಉಡುಪುಗಳು ಮೊದಲಾದ ಜವಳಿ ಉತ್ಪನ್ನಗಳಿಗೂ ವಿಸ್ತರಿಸಲಾಗಿದೆ . ಮೇ 1ರಿಂದ ಈ ಬದಲಾವಣೆ ಜಾರಿಗೆ ಬರಲಿದೆ ಎಂದು ಸಿನ್ಹ ತಿಳಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+