Get Updates
Get notified of breaking news, exclusive insights, and must-see stories!

ಸರ್‌.ಎಂ.ವಿ. ಹುಟ್ಟೂರಾದ ಮುದ್ದೇನಹಳ್ಳಿ ಆಗಲಿದೆ ಸ್ವಚ್ಛಗ್ರಾಮ

ಕೋಲಾರ : ಕರ್ನಾಟಕದ ಹೆಮ್ಮೆಯ ಪುತ್ರ ವಿಶ್ವವಿಖ್ಯಾತ ಎಂಜಿನಿಯರ್‌ ಸರ್‌.ಎಂ.ವಿಶ್ವೇಶ್ವರಯ್ಯನವರ ಹುಟ್ಟೂರಾದ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯನ್ನು ಸ್ವಚ್ಛಗ್ರಾಮವನ್ನಾಗಿ ಮಾಡಲು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ ಒಂದು ಲಕ್ಷ ರುಪಾಯಿಗಳ ಆರಂಭಿಕ ವಂತಿಗೆ ನೀಡಿದೆ.

ಕನ್ನಂಬಾಡಿ ಕಟ್ಟೆಯನ್ನು ಕಟ್ಟಿ, ಕರ್ನಾಟಕವನ್ನು ಕೈಗಾರಿಕಾ ನಾಡನ್ನಾಗಿ ಮಾಡಿದ ಭಾರತ ರತ್ನ ಮೊಕ್ಷಗೊಂಡಂ ವಿಶ್ವೇಶ್ವರಯ್ಯನರು ಬಾಳಿ ಬುದಕಿದ ಮನೆ, ಅವರ ಸಮಾಧಿಯೂ ಸೇರಿದಂತೆ ಇಡೀ ಊರೇ ಗಲೀಜಿನ ಆಗರವಾಗಿದೆ. ಈ ವಿಷಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲೂ ಮಾರ್ದನಿಸಿತ್ತು.

ನಿರ್ಲಕ್ಷ್ಯಕ್ಕೊಳಗಾಗಿರುವ ಈ ಗ್ರಾಮವನ್ನು ಸ್ವಚ್ಛಗ್ರಾಮವನ್ನಾಗಿ ಮಾಡಲು ಮುಂದೆ ಬಂದಿರುವ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ ಒಂದು ಲಕ್ಷ ರುಪಾಯಿಗಳ ವಂತಿಗೆಯನ್ನು ತಾಲೂಕು ಪಂಚಾಯಿತಿಗೆ ನೀಡಿದೆ. ಟ್ರಸ್ಟ್‌ನ ಕಾರ್ಯದರ್ಶಿ ಬಿ. ನಾರಾಯಣರಾವ್‌ ಅವರು ಪಂಚಾಯ್ತಿ ಅಧ್ಯಕ್ಷ ಎಚ್‌.ವಿ. ಚಿಕ್ಕಗೆರಿರೆಡ್ಡಿ ಅವರಿಗೆ ಈ ಹಣವನ್ನು ನೀಡಿದರು.

ಜಿಲ್ಲಾ ಪಂಚಾಯಿತಿಯು ಮುದ್ದೇನಹಳ್ಳಿಯನ್ನು ಸ್ವಚ್ಛಗ್ರಾಮವನ್ನಾಗಿ ಮಾಡಲು 20 ಲಕ್ಷ ರುಪಾಯಿ ವೆಚ್ಚ ಮಾಡುತ್ತಿದ್ದು, ಸರ್‌.ಎಂ.ವಿ. ಅವರ ಸಮಾಧಿ ಸ್ಥಳವನ್ನೂ ಶುಚಿಯಾಗಿಡಲು ನಿರ್ಧರಿಸಿದೆ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+