Get Updates
Get notified of breaking news, exclusive insights, and must-see stories!

ಪಾಠ ಹೇಳೋ ಮೇಡಂಗಳ ವೆಬ್‌ಸೈಟಿನಲ್ಲಿ ಬೆತ್ತಲೆಯಾಗಿಸಿದ ಶಿಷ್ಯ ವೃಂದ

ನವದೆಹಲಿ : ‘ತಾಯೆ ಶಾರದೆ ಲೋಕ ಪೂಜಿತೆ.. ಒಳ್ಳೆ ಮಾತುಗಳಾಡಿಸು’ ಎಂದು ಪ್ರಾರ್ಥನೆ ಮಾಡಬೇಕಾದ ಹುಡುಗರು ಪಾಠ ಹೇಳುವ ಗುರುಗಳ, ಸಹಪಾಠಿ ಹುಡುಗಿಯರ ಬಗ್ಗೆ ಅಶ್ಲೀಲವಾಗಿ ಬರೆದು, ವೆಬ್‌ಸೈಟಿಗೆ ತುಂಬಿರುವ ಘಟನೆ ದೇಶದಲ್ಲೇ ಪ್ರಪ್ರಥಮವಾಗಿ ರಾಜಧಾನಿಯಲ್ಲಿ ನಡೆದಿದೆ.

ಏರ್‌ಫೋರ್ಸ್‌ ಬಾಲ್‌ ಭಾರತಿ ಎಂಬುದು ಹೆಸರಾಂತ ಶಾಲೆ. ಇಲ್ಲಿನ ಪ್ರೌಢಶಾಲೆಯ ಹುಡುಗರ ತುಂಟತನ ಎಲ್ಲೆ ಮೀರಿದೆ. ಪಾಠ ಹೇಳುವ ಶಿಕ್ಷಕಿಯರ ಹಾಗೂ ಸಹಪಾಠಿ ವಿದ್ಯಾರ್ಥಿನಿಯರ ಬಗ್ಗೆ ಹೀನಾಮಾನ, ಸೊಂಟದ ಕೆಳಗಿನ ಭಾಷೆಯಲ್ಲಿ ಮಾಹಿತಿ ಕೆತ್ತಿ, ಅದನ್ನು ವೆಬ್‌ಸೈಟೊಂದಕ್ಕೆ ತುಂಬಿ, ಜಗಜ್ಜಾಹೀರು ಮಾಡಿದ್ದಾರೆ. ಈ ಬಗ್ಗೆ ತರಗತಿಯ ವಿದ್ಯಾರ್ಥಿನಿಯಾಬ್ಬಳು ಪೊಲೀಸರಿಗೆ ದೂರಿತ್ತಿದ್ದಾಳೆ. ಅಪರಾಧಿ ವಿಭಾಗದ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಶಾಲೆಯ ಸುಮಾರು 20 ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಬುಧವಾರ ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗಿದ್ದು, ದೇಶದಲ್ಲಿ ಇದೇ ಪ್ರಥಮ ಬಾರಿಗೆ ಶಾಲಾ ಮಕ್ಕಳು ಇಂಥಾ ಹೀನಾಯ ಪ್ರಕರಣದಲ್ಲಿ ಪೊಲೀಸರ ವಿಚಾರಣೆಗೆ ಒಳಗಾಗಿದ್ದಾರೆ ಎಂದು ಬರೆಯಲಾಗಿದೆ. ವಿಚಾರಣೆ ನಡೆಸಿರುವ ಅಪರಾಧಿ ವಿಭಾಗದ ಪೊಲೀಸ್‌ ಹೀಗೆಂದಿದ್ದಾರೆ- ಇದೊಂದು ಹೇಯಕರ ಸಂಗತಿ. ದೇಶದಲ್ಲೇ ಇಂಥಾ ಪ್ರಕರಣ ಬೆಳಕಿಗೆ ಬರುತ್ತಿರುವುದು ಇದೇ ಮೊದಲು. ಈಗಾಗಲೇ 20 ಅನುಮಾನಾಸ್ಪದ ವಿದ್ಯಾರ್ಥಿಗಳ ವಿಚಾರಣೆ ಮಾಡಿದ್ದೇವೆ. ಕಳೆದ ಅಕ್ಟೋಬರ್‌ನಲ್ಲಿ ಸಂಸತ್ತು ಅನುಮೋದಿಸಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ವಯ, ಸೈಬರ್‌ ಅಶ್ಲೀಲತೆಯಲ್ಲಿ ಭಾಗಿಯಾಗಿರುವವರಿಗೆ 3 ತಿಂಗಳು ಕಾಲ ಜೈಲು ವಾಸ ಹಾಗೂ 3 ಲಕ್ಷ ರುಪಾಯಿವರೆಗೆ ದಂಡ ವಿಧಿಸಬಹುದಾಗಿದೆ.

ಅಂದಹಾಗೆ, ವಿದ್ಯಾರ್ಥಿಗಳು ತಮ್ಮ ಮಿತಿ ಮೀರಿದ ತುಂಟಾಟವ ಜಗಜ್ಜಾಹೀರು ಮಾಡಿದ್ದು www.amazing-gents.8m.net ಎಂಬ ವೆಬ್‌ಸೈಟಿನಲ್ಲಿ.

(ಎಎಫ್‌ಪಿ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+