ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮ ಅಳಲೇನಪ್ಪಾ ? ಯಾಕೆ ದುಃಖಿಸುತ್ತಿರುವುದು ಎಂಬುದನ್ನು ಹೇಳಲೂ ಕಷ್ಟವೇ ? ಇನ್ನೆರಡುವ ವಾರ ಕಳೆದರೆ ಕೈಗೆ ಕಾಸು ಬರುತ್ತದೆ. ತಲೆ ಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ.ವೃಷಭ : ನಿಮ್ಮ ಮೊಂಡು ಬುದ್ಧಿಯನ್ನು ನೋಡಿ ಸ್ನೇಹಿತರೆಲ್ಲಾ ಮಜಾ ಮಾಡುತ್ತಾರೆ. ಅಷ್ಟೆ. ನಿಜ ಹೇಳಬೇಕೆಂದರೆ ಅಂಥಾ ಚಿಂತೆಯೇನೂ ಇಲ್ಲದಿದ್ದರೂ ಪರ್ವತ ತಲೆ ಮೇಲಿದ್ದವರಂತೆ ಯಾಕೆ ವರ್ತಿಸುತ್ತೀರಿ?
ಮಿಥುನ : ಹಕ್ಕಿ, ಚುಕ್ಕಿ, ಮೋಡಗಳೊಂದಿಗೆ ಮೈ ಮರೆತರೆ ಅವು ನಿಮ್ಮನ್ನೆಂದೂ ಕಾಪಾಡುವುದು ಕಾಣೆ. ಸ್ನೇಹಿತರೊಂದಿಗೆ ಕಚ್ಚಾಡಲು ಸದ್ಯಕ್ಕೆ ಅವಕಾಶಗಳು ವಿರಳವಾಗಿರುತ್ತವೆ.
ಕಟಕ : ಇವತ್ತು ಕೈಗೆ ಬಂದ ಶೇರುಗಳ ದೆಸೆ ಉತ್ತಮವಾಗಿರುತ್ತವೆ. ನಿಮ್ಮ ಎಲ್ಲ ವ್ಯವಹಾರಗಳಿಗೆ ನಿಮ್ಮ ಮನೆಯವರೇ ಪಾಲುದಾರರು ಆದ್ದರಿಂದ ಅವರನ್ನು ದೂರ ಇಡುವುದು ಸಲ್ಲ.
ಸಿಂಹ : ಎಲ್ಲ ಕೆಲಸಗಳನ್ನು ಒಬ್ಬರೇ ಮೈ ಮೇಲೆ ಹಾಕಿಕೊಂಡರೆ, ತಕ್ಷಣವೇ ಸುಸ್ತಾಗುತ್ತೀರಿ. ಮುಖ್ಯ ವಿಷಯಗಳಲ್ಲಿ ಆಸಕ್ತಿ ಎಲ್ಲಾ ಕಳೆದುಕೊಳ್ಳಬೇಡಿ.
ಕನ್ಯಾ : ನಿಮ್ಮ ಸಂಗಾತಿ ಆಸೆ ಪಟ್ಟು ಹೇಳಬೇಕೆಂದುಕೊಂಡದ್ದನ್ನು ದೂರದಲ್ಲಿಯೇ ಹಿಡಿದು ನಿಲ್ಲಿಸಿದರೆ ಬೇಸರ ನಿರಾಸೆಗಳು ಬರುವುದು ನಿಮ್ಮಿಬ್ಬರ ಮಧ್ಯೆ ತಾನೇ?
ತುಲಾ : ಆಫೀಸು ಕೆಲಸಗಳ ಹಣೆಬರಹವೇ ಹೀಗೆ ಎಂದು ಕೈ ಚೆಲ್ಲಿ ಕೂರಬಾರದು. ಈಗಿನ ಶ್ರಮ ಎಲ್ಲ ನಿಮಗೆ ಫಲ ನೀಡುವುದರಲ್ಲಿ ಎರಡು ಮಾತಿಲ್ಲ.
ವೃಶ್ಚಿಕ : ಸುಳ್ಳು ಹೇಳುವುದನ್ನು ಕಲಿಯುವುದು ಸುಲಭ. ಆದರೆ ಆ ಸುಳ್ಳುಗಳನ್ನು ಪೋಷಿಸುವುದು ನಿಮ್ಮ ಕೈಲಾಗದು. ಆದ್ದರಿಂದ ವ್ಯರ್ಥ ಪ್ರಯತ್ನ ಬೇಡ.
ಧನಸ್ಸು : ದೇವ ಕಾರ್ಯಗಳನ್ನು ನಡೆಸುವುದಿದ್ದರೆ ಇದೇ ಸುಸಮಯ. ಬೇರೆ ಎಲ್ಲಾ ಕೆಲಸಗಳನ್ನು ಪಕ್ಕಕ್ಕೆ ಇಟ್ಟು ಮನೆಯವರೊಂದಿಗೆ ಕೈ ಜೋಡಿಸಿ.
ಮಕರ : ಎಲ್ಲಾ ಸರಿಯಾಗಿದೆ ಎನ್ನುವಾಗ ಏನೋ ಒಂದು ಎಡವಟ್ಟಾಗುವುದರಿಂದ ನೀವು ಮೂಡ್‌ನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವ ಹಾಗೆ ಕಾಣುವುದಿಲ್ಲ.
ಕುಂಭ : ಹಣದ ಮುಗ್ಗಟ್ಟಿನಿಂದ ನರಳುತ್ತಿದ್ದರೆ, ಅದಕ್ಕೆ ಕೀಳರಿಮೆ ಇರಬಾರದು. ಸದ್ಯಕ್ಕೆ ಈ ಪರಿಸ್ಥಿತಿಯನ್ನು ನೀವು ಈಜಿ ಮುಂದೆ ಬಂದರೆ ಮತ್ತೆಲ್ಲಾ ಸುಗಮವಾಗುತ್ತದೆ.
ಮೀನ : ಕೆಲಸದ ಹೊರೆಯಿಂದ ಸುಮ್ಮನೇ ಸುಸ್ತು ಮಾಡಿಕೊಳ್ಳುತ್ತೀರಿ. ಆಮಿಶ, ಲಂಚಗಳ ಆಹ್ವಾನ ಬರಬಹುದು. ಆದ್ದರಿಂದ ಸಿದ್ಧರಾಗಿರಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications