ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ದಾಖಲೆಯ ಮಳೆ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರಲ್ಲಿ ನಾಲ್ಕು ದಶಕಗಳ ದಾಖಲೆ ಮುರಿದಿದ್ದ ಏಪ್ರಿಲ್‌ ಮಳೆ ಈಗ 70 ವರ್ಷಗಳ ದಾಖಲೆಯನ್ನೂ ಅಳಿಸಿಹಾಕಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಬೆಂಗಳೂರಲ್ಲಿ 108.6 ಮಿ.ಮೀಟರ್‌ ಅಂದರೆ 11 ಸೆಂಟಿ ಮೀಟರ್‌ ಮಳೆಯ ದಾಖಲೆ ಸ್ಥಾಪಿಸಿದೆ. ಈ ಹಿಂದೆ 1930ರಲ್ಲಿ ಬಿದ್ದಿದ್ದ ಮಳೆಯೇ ಏಪ್ರಿಲ್‌ ತಿಂಗಳ ಅತ್ಯಧಿಕ ದಾಖಲೆಯಾಗಿತ್ತು.

ಈ ಮಧ್ಯೆ ರಾಜ್ಯದ ಅಲ್ಲಲ್ಲಿ ಕೂಡ ಸಾಕಷ್ಟು ಮಳೆ ಆಗಿದೆ. ನುಗ್ಗೇಹಳ್ಳಿಯಲ್ಲಿ 5 ಸೆಂಟಿ ಮೀಟರ್‌, ಬಾಳೆ ಹೊನ್ನೂರಿನಲ್ಲಿ 3 ಸೆಂಟಿ ಮೀಟರ್‌ ಮಳೆ ಸುರಿದಿದೆ. ರಾಜ್ಯದ ಗರಿಷ್ಠ ಉಷ್ಣಾಂಶ ರಾಯಚೂರಲ್ಲಿ 38 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಆಗುಂಬೆಯಲ್ಲಿ 16 ಡಿಗ್ಸಿ ಸೆಲ್ಸಿಯಸ್‌ ದಾಖಲಾಗಿದೆ.

ಮುನ್ಸೂಚನೆಯ ರೀತ್ಯ ಮುಂದಿನ 24 ಗಂಟೆಗಳ ಅವಧಿಯಲ್ಲಿ ಕೂಡ ರಾಜ್ಯದ ದಕ್ಷಿಣ ಒಳನಾಡಿನ ಅನೇಕ ಕಡೆ ಮಳೆ ಬೀಳುವ ಸಾಧ್ಯತೆ ಇದೆ. ಬೆಂಗಳೂರು ಹಾಗೂ ಸುತ್ತಮುತ್ತ ಭಾಗಶಃ ಮೋಡ ಇದ್ದು, ಸಂಜೆ ಅಥವಾ ರಾತ್ರಿ ಮಳೆ ಆಗುವ ಸಾಧ್ಯತೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X