Get Updates
Get notified of breaking news, exclusive insights, and must-see stories!

ಕಲಾಪ ಮುಳುಗಿಸಿದ ಕಾಂಗ್ರೆಸ್‌ : ಉಭಯ ಸದನ ಮುಂದೂಡಿಕೆ

ನವದೆಹಲಿ : ತೆಹಲ್ಕಾ ಬಯಲು ಮಾಡಿರುವ ರಕ್ಷಣಾ ಹಗರಣಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕೆನ್ನುವ ಒತ್ತಾಯವನ್ನು ಪ್ರಧಾನಿ ವಾಜಪೇಯಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ , ಕಾಂಗ್ರೆಸ್‌ ಸದಸ್ಯರು ಎಬ್ಬಿಸಿದ ಭಾರೀ ಕೋಲಾಹಲದ ಕಾರಣ ಉಭಯ ಸದನಗಳು ಬುಧವಾರಕ್ಕೆ ಮುಂದೂಡಿವೆ.

ತೆಹಲ್ಕಾದ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕೆನ್ನುವ ಕಾಂಗ್ರೆಸ್‌ನ ಒತ್ತಾಯವನ್ನು ಪ್ರಧಾನಿ ವಾಜಪೇಯಿ ಸಾರಾಸಗಟಾಗಿ ತಿರಸ್ಕರಿದಾಗ, ರೊಚ್ಚಿಗೆದ್ದ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗೆ ಧುಮುಕಿ ಪ್ರತಿಭಟನೆ ನಡೆಸಿದರು. ಸಭಾನಾಯಕ ಜಿಎಂಸಿ ಬಾಲಯೋಗಿ ಅವರಿಗೆ ಕಲಾಪವನ್ನು ಮುಂದೂಡದೆ ಅನ್ಯ ಮಾರ್ಗವಿರಲಿಲ್ಲ . ಆದರೆ, ಕಲಾಪವನ್ನು ಬಹಿಷ್ಕರಿಸುವ ಕಾಂಗ್ರೆಸ್‌ನ ಉತ್ಸಾಹ ಎಡಪಕ್ಷಗಳಿಗೆ ಹಾಗೂ ಸಮಾಜವಾದಿ ಪಕ್ಷದ ಸದಸ್ಯರಿಗೆ ಇಷ್ಟವಿದ್ದಂತಿರಲಿಲ್ಲ . ಅವರು ಸದನದಲ್ಲಿ ಚರ್ಚೆಗೆ ಸಿದ್ಧರಾಗಿದ್ದರು.

ರಾಜ್ಯಸಭೆ ಆರಂಭಗೊಂಡ 45 ನಿಮಿಷಗಳಲ್ಲೇ ಕೋಲಾಹಲದ ನಡುವೆ ಬುಧವಾರಕ್ಕೆ ಮುಂದೆ ಹೋಯಿತು. ಇದಕ್ಕೂ ಮುನ್ನ, ನ್ಯಾಯಾಂಗ ತನಿಖೆಗಾಗಿ ಸರ್ಕಾರ ಮುಂದಾಗಿದೆ ಹಾಗೂ ಸದನದಲ್ಲಿ ಎಲ್ಲಾ ರೀತಿಯ ಚರ್ಚೆಗಾಗಿ ನಾವು ಸಿದ್ಧರಿದ್ದೇವೆ ಎಂದು ವಿದೇಶಾಂಗ ಸಚಿವ ಜಸ್ವಂತ್‌ಸಿಂಗ್‌ ಪ್ರಕಟಿಸಿದರು. ತಪ್ಪು ಮಾಡಿದವರನ್ನು ಶಿಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಆದರೆ, ಸದಸ್ಯರು ಸಂಸದೀಯ ಸಮಿತಿಯ ತನಿಖೆಗೇ ಪಟ್ಟು ಹಿಡಿದು ಗಲಭೆ ಮಾಡಿದ್ದರಿಂದ ಸಭಾನಾಯಕ ಕೃಷ್ಣಕಾಂತ್‌ ಸದನವನ್ನು ಮುಂದೂಡಿದರು.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+