Get Updates
Get notified of breaking news, exclusive insights, and must-see stories!

ಸೋಮವಾರದಿಂದ ಬಜೆಟ್‌ ಅಧಿವೇಶನ, ಕಟ್ಟೆಚ್ಚರದಲ್ಲಿ ಭದ್ರತಾ ಸಿಬ್ಬಂದಿ

ನವದೆಹಲಿ : ಪ್ರಸಕ್ತ ಸಾಲಿನ ಆಯವ್ಯಯ ಹಾಗೂ ರೈಲ್ವೆ ಆಯವ್ಯಯಗಳ ಮೇಲಿನ ಚರ್ಚೆಯ ಬಜೆಟ್‌ ಅಧಿವೇಶನ ಸೋಮವಾರದಿಂದ ಪುನಃ ಪ್ರಾರಂಭವಾಗಲಿದ್ದು , ತೆಹಲ್ಕಾ ಹಗರಣದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಮತ್ತೊಮ್ಮೆ ಕಲಾಪಕ್ಕೆ ಅಡ್ಡಿ ಉಂಟು ಮಾಡುವ ಪ್ರಶ್ನೆಗಳು ಒಂದೆಡೆ ಉದ್ಭವವಾಗಿದ್ದರೆ, ಮತ್ತೊಂದೆಡೆ ದೆಹಲಿ ಪೊಲೀಸರು ನಿದ್ದೆ ಕೆಡಿಸಿಕೊಂಡಿದ್ದಾರೆ.

ಕುತೂಹಲಕಾರಿ ಬಜೆಟ್‌ ಅಧಿವೇಶನದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಕಚೇರಿ, ಸಂಸತ್‌ಭವನ , ದೇಶೀ ಹಾಗೂ ವಿದೇಶಿ ಗಣ್ಯರ ನಿವಾಸಗಳಿಗೆ ಕಟ್ಟುನಿಟ್ಟಿನ ಭದ್ರತೆ ಏರ್ಪಡಿಸಲಾಗಿದೆ. ಏಪ್ರಿಲ್‌ 10 ರಂದು ಪಾರ್ಲಿಮೆಂಟ್‌ ಭವನಕ್ಕೆ ಸಮೀಪದ ನಾರ್ತ್‌ ಬ್ಲಾಕ್‌ ಸಮೀಪ 4 ಕಿಲೋ ತೂಕದ ಶಕ್ತಿಶಾಲಿ ಸ್ಫೋಟಕ ಪತ್ತೆಯಾದ ಕಾರಣ ಹಾಗೂ ವಿವಿಧ ಪ್ರತಿಭಟನಾ ರ್ಯಾಲಿಗಳ ಆಯೋಜನೆಯ ಹಿನ್ನೆಲೆಯಲ್ಲಿ ಸುಮಾರು 57 ಸಾವಿರ ಭದ್ರತಾ ಸಿಬ್ಬಂದಿ ಕಟ್ಟೆಚ್ಚರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭದ್ರತಾ ಕಾರ್ಯಗಳಿಗಾಗಿ 9 ಸಾವಿರ ಹೋಂಗಾರ್ಡ್‌ಗಳ ಸೇವೆಯನ್ನೂ ಪಡೆಯಲಾಗಿದೆ.

ಕಾರ್ಯತಂತ್ರ ಗುಟ್ಟು ಬಿಟ್ಟಕೊಡದ ಪ್ರತಿ ಪಕ್ಷಗಳು

ಸೋಮವಾರದಿಂದ ಪ್ರಾರಂಭವಾಗುವ ಬಜೆಟ್‌ ಅಧಿವೇಶನದಲ್ಲಿ ಪಾಲ್ಗೊಳ್ಳುವ ಅಥವಾ ಬಹಿಷ್ಕರಿಸುವ ಕುರಿತಂತೆ ಯಾವುದೇ ನಿರ್ಧಾರವನ್ನು ಪ್ರಮುಖ ಪ್ರತಿಪಕ್ಷಗಳು ಈವರೆಗೆ ಪ್ರಕಟಿಸಿಲ್ಲ . ಸರ್ಕಾರ ತಪ್ಪು ಮಾಡಿದಾಗ ಅದನ್ನು ಯಾರೂ ಪ್ರಶ್ನಿಸುತ್ತಿಲ್ಲ , ಪ್ರತಿ ಪಕ್ಷಗಳು ಪ್ರಶ್ನಿಸಿದರೆ ಅದನ್ನು ಕಲಾಪ ಬಹಿಷ್ಕಾರವೆಂದು ಮಾಧ್ಯಮಗಳು ಕರೆಯುತ್ತವೆ ಎಂದು ಕಾಂಗ್ರೆಸ್‌ ಪ್ರಮುಖ ಆಸ್ಕರ್‌ ಫರ್ನಾಂಡಿಸ್‌ ಮುಗುಮ್ಮಾಗಿ ಹೇಳಿದ್ದಾರೆ.

ಮತ್ತೊಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್‌ ಯಾದವ್‌, ಕಲಾಪ ಬಹಿಷ್ಕಾರ ನಮ್ಮ ಉದ್ದೇಶವಲ್ಲ , ಆದರೆ ಪ್ರತಿಪಕ್ಷಗಳು ಕೆರಳದಂತೆ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ಹೇಳಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+