Get Updates
Get notified of breaking news, exclusive insights, and must-see stories!

ದೇಶದ ಪ್ರಗತಿಗೆ ಶ್ರಮಿಸಿದ ದೇವಾಂಗ್‌ ಮೆಹ್ತಾ - ನಾರಾಯಣಮೂರ್ತಿ

ನವದೆಹಲಿ : ಭಾರತದ ಮಾಹಿತಿ ತಂತ್ರಜ್ಞಾನದ ಕಾರಣಪುರುಷರೆಂದೇ ಪ್ರಸಿದ್ಧರಾಗಿದ್ದ ದಿವಂಗತ ದೇವಾಂಗ್‌ ಮೆಹ್ತಾ ಅವರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ಲೋಧಿ ರಸ್ತೆಯ ಚಿತಾಗಾರದಲ್ಲಿ ನಡೆಯಿತು.

ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ , ಮಾಹಿತಿ ತಂತ್ರಜ್ಞಾನ ಸಚಿವ ಪ್ರಮೋದ್‌ ಮಹಾಜನ್‌ ಹಾಗೂ ಇನ್ಫೋಸಿಸ್‌ ಅಧ್ಯಕ್ಷ ನಾರಾಯಣಮೂರ್ತಿ ಮೃತರ ಅಂತಿಮ ಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಗುರುವಾರ ಬೆಳಿಗ್ಗೆ ಮೆಹ್ತಾ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಶನಿವಾರ ಅವರ ದೇಹವನ್ನು ಭಾರತಕ್ಕೆ ತರಲಾಗಿತ್ತು .

ಭಾರತವನ್ನು ಪ್ರಗತಿ ಪಥದತ್ತ ಒಯ್ಯಲು ಮೆಹ್ತಾ ಶ್ರಮಿಸುತ್ತಿದ್ದರು, ನಾವು ಅವರನ್ನು ಕಳೆದುಕೊಂಡಿದ್ದೇವೆ, ಎಂದು ನಾರಾಯಣಮೂರ್ತಿ ಮೆಹ್ತಾ ಅವರ ಸಾವಿಗೆ ಶೋಕ ವ್ಯಕ್ತ ಪಡಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+