ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಕಲ್ಪನೆ ಮತ್ತು ಚೈತನ್ಯದ ಒರತೆಗಳು ಈ ದಿನ ಕ್ರಿಯಾಶೀಲವಾಗಿವೆ. ನಿಮ್ಮ ಕೆಲಸವನ್ನು ಇತರರು ಗುರ್ತಿಸಬೇಕೆಂದು ಬಯಸುತ್ತಿದ್ದೀರಿ. ಆ ಹೊತ್ತೂ ಹತ್ತಿರದಲ್ಲೇ ಇದೆ.ವೃಷಭ : ಮಾದಕ ವಸ್ತುಗಳಿಂದ ಈ ದಿನ ದೂರವಿದ್ದರೆ ಒಳಿತು. ಈ ದಿನ ನಡೆಯುವ ಘಟನೆಯಾಂದು ನಿಮ್ಮನ್ನು ಭಾವನಾತ್ಮಕವಾಗಿ ನೋಯಿಸಲಿದೆ. ಧ್ಯಾನದಲ್ಲಿ ತೊಡಗುವುದರಿಂದ ನೆಮ್ಮದಿ ದೊರೆಯುತ್ತದೆ.
ಮಿಥುನ : ನಿಮ್ಮ ಭಾವನೆಗಳಿಗೆ ನೀವೇ ಜವಾಬ್ದಾರರು, ಹಕ್ಕುದಾರರು ಎನ್ನುವುದು ನಿಜವಾದರೂ, ಇತರರ ಭಾವನೆಗಳಿಗೂ ನೀವು ಬೆಲೆ ಕೊಡುವುದು ಅನಿವಾರ್ಯ. ಸಂತೋಷದ ಲಹರಿ ಮುಂದುವರಿಯುತ್ತದೆ.
ಕಟಕ : ಇಷ್ಟಪಾತ್ರರು ಸುಳ್ಳು ಹೇಳುತ್ತಿದ್ದಾರೆ ಎಂದು ಶಂಕಿಸುತ್ತಿದ್ದೀರಿ. ಆ ಸುಳ್ಳು ನಿಮ್ಮ ಒಳ್ಳೆಯದಕ್ಕೇ ಆಗಿರುವುದರಿಂದ ವಿಷಾದ ಬೇಡ. ಸತ್ಯ ನಿಮಗೆ ಸದ್ಯದಲ್ಲೇ ತಿಳಿಯಲಿದ್ದು , ಪರಿಸ್ಥಿತಿ ತಿಳಿಯಾಗಲಿದೆ.
ಸಿಂಹ : ಸಮಾಜಮುಖಿಯಾದ ಪ್ರೇಮ ಮನೋಭಾವ ನಿಮ್ಮಲ್ಲಿ ಹೆಚ್ಚುತ್ತಿದೆ. ಇದಿರಂದಾಗಿ ಕುಟುಂಬದಲ್ಲಿ ವೈಮನಸ್ಸು ಉಂಟಾಗಬಹುದು. ಈ ದಿನ ಸಾಕಷ್ಟು ಹಣ ಕಳಕೊಳ್ಳುವ ಅಪಾಯವೂ ಇದೆ.
ಕನ್ಯಾ : ನೀವು ಬಹು ದಿನಗಳಿಂದ ನಿರೀಕ್ಷಿಸುತ್ತಿರುವ ಭಿನ್ನ ಲಿಂಗಿಗಳ ಪ್ರೇಮ ಹಣ್ಣಾಗುವ ಹೊತ್ತು ಹೊಸಿತಿಲಲ್ಲೇ ಇದೆ. ಮೋಡ ಮುಸುಕಿದ ಮಧ್ಯಾಹ್ನದಲ್ಲಿ ಹೊಸತೊಂದು ಉಲ್ಲಾಸ ಮನಸ್ಸು ತುಂಬಲಿದೆ.
ತುಲಾ : ಶುಭ ಶುಕ್ರವಾರದ ಪಾರ್ಟಿಯಲ್ಲಿ ನೀವೇ ಕೇಂದ್ರಬಿಂದು. ಗೆಳೆಯರ ಹೊಗಳಿಕೆಗೆ ಪಾತ್ರರಾಗುತ್ತೀರಿ. ಸೃಜನಶೀಲ ಕೆಲಸಗಳಲ್ಲೂ ಭಾರೀ ಯಶಸ್ಸು ನಿಮ್ಮ ಪಾಲಿಗಿದೆ.
ವೃಶ್ಚಿಕ : ನೀವೀಗ ಹಾರೈಸುವ ಸ್ಥಾನದಲ್ಲಿದ್ದೀರಿ. ಆ ಕಾರಣದಿಂದಾಗಿ ಬೇಜಾರನ್ನು ಬೈಗುಳಗಳನ್ನಾಗಿ ಬದಲಿಸುವ ಸಣ್ಣತನ ಬೇಡ. ಸಂಜೆ ಒಂಟಿತನ ಮತ್ತಷ್ಟು ಕಾಡುತ್ತದೆ.
ಧನಸ್ಸು : ತುಂಬಾ ಇಬ್ಬಂದಿಯ ಪರಿಸ್ಥಿತಿಯಲ್ಲಿದ್ದೀರಿ. ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿದೆಯೆಂದರೆ, ನಿಮ್ಮ ಪ್ರತಿ ಹೆಜ್ಜೆಯನ್ನೂ ಪಕ್ಕದವರು ಗಮನಿಸುತ್ತಿದ್ದಾರೆ. ಕುಲದೇವರ ಅನುಗ್ರಹದಿಂದ ಗೆಲ್ಲುತ್ತೀರಿ.
ಮಕರ : ಗೂಡು ಸೇರಿದ ಹಕ್ಕಿಯ ಸಂಭ್ರಮ, ಹಿತ, ಸುರಕ್ಷತೆ ಅನುಭವಿಸುತ್ತಿದ್ದೀರಿ. ಈ ಬೆಚ್ಚನೆ ಅನುಭವದಲ್ಲಿ ವ್ಯಾಸಂಗವನ್ನು ನಿರ್ಲಕ್ಷಿಸಿದರೆ, ಇಕ್ಕಟ್ಟಿಗೆ ಸಿಲುಕುತ್ತೀರಿ. ಸುಂದರ ನಾಳೆ, ನಾಳಿದ್ದೂ ನಿಮಗಿವೆ.
ಕುಂಭ : ಮಧ್ಯಸ್ಥಿಕೆ ವಹಿಸಲಿದು ಸಕಾಲ. ಇದರಿಂದಾಗಿ ನಿಮ್ಮ ಸ್ಥಾನಮಾನ ಸುಧಾರಿಸುವುದಲ್ಲದೆ ಮಾನಸಿಕವಾಗಿ ನೀವೂ ಗಟ್ಟಿಯಾಗುತ್ತೀರಿ. ಹೊಸ ಅವಕಾಶಗಳು ಬಂದಲ್ಲಿ ಒಪ್ಪಿಕೊಂಡು ಬಿಡಿ.
ಮೀನ : ಅನಾರೋಗ್ಯ ನಿಮಿತ್ತ ಕೀಲುವೈದ್ಯರ ಸಲಹೆ ಪಡೆಯಬೇಕಾದೀತು. ಕುಟುಂಬದವರೊಂದಿಗಿನ ಒಡನಾಟ ಸಂಜೆಯನ್ನು ಮನೋಹರವಾಗಿಸುತ್ತದೆ. ಉನ್ನತ ವ್ಯಾಸಂಗದಲ್ಲಿ ಯಶಸ್ಸಿದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications