ಹುಟ್ಟೂರು ಹೊಸೂರಿಗೆ ಹೂವು ತಂದ ಎಚ್. ನರಸಿಂಹಯ್ಯ
ಗೌರಿಬಿದನೂರು : ಹಿರಿಯ ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ ಅವರ ಹುಟ್ಟೂರೀಗ ಅಭಿವೃದ್ಧಿಯ ಪಥದಲ್ಲಿ ಕಾಲಿರಿಸಿದೆ. ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹೊಸೂರು ಎಚ್ಚೆನ್ ಅವರ ಹುಟ್ಟೂರು. ರಾಜ್ಯದಲ್ಲಿ ಭೂಕಂಪಮಾಪನ ಕೇಂದ್ರವನ್ನು ಹೊಂದಿರುವ ಅಗ್ಗಳಿಕೆಯ ಈ ಊರಿನಲ್ಲಿ ಎದ್ದು ಕಾಣುವ ಮತ್ತೊಂದು ಕಟ್ಟಡ ಎಚ್ಚೆನ್ ಸ್ಥಾಪಿಸಿದ ನ್ಯಾಷನಲ್ ಕಾಲೇಜು. ಉಳಿದಂತೆ, ಅದೇ ಬೆಂದ ನೆಲ, ಕಣ್ಣು ಹಾಯಿಸಿದಷ್ಟು ಜಾಲಿಗಿಡಗಳು, ಆಕಾಶ ನೋಡುವ ರೈತರು.
ಹುಟ್ಟಿ ಬೆಳೆದ ಊರಿಗಾಗಿ ಏನನ್ನಾದರೂ ಮಾಡುವ ಹಂಬಲ ಬೆಂಗಳೂರಿನಲ್ಲಿರುವ ಎಚ್ಚೆನ್ಗೆ. ಆ ಕಾರಣಕ್ಕಾಗಿಯೇ, ಹೊಸೂರಿನ ಅಭಿವೃದ್ಧಿಗಾಗಿ ಅವರು ಟೊಂಕ ಕಟ್ಟಿದ್ದಾರೆ. ಸರ್ಕಾರದ ಸ್ವಸ್ತಿ ಗ್ರಾಮ ಯೋಜನೆಯಲ್ಲಿ ಹೊಸೂರು ಸಿಂಗರಗೊಳ್ಳಲಿದೆ. ಶುಕ್ರವಾರದಿಂದ ಯೋಜನೆಗೆ ಚಾಲನೆ. ಅಂದಹಾಗೆ, ಸ್ವಸ್ತಿಗ್ರಾಮ ಯೋಜನೆಗೆ ಆಯ್ಕೆಯಾಗಿರುವ ರಾಜ್ಯದ ಪ್ರಥಮ ಗ್ರಾಮ ಹೊಸೂರು.
ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ಹೊಸೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಸಂಸದರಾದ ರಾಮಕೃಷ್ಣ ಹೆಗಡೆ, ಜಾಲಪ್ಪ , ರೆಹಮಾನ್ ಖಾನ್ ಮುಂತಾದವರ ನಿಧಿಯಿಂದ 50 ಲಕ್ಷ ರುಪಾಯಿಗಳನ್ನು ಗ್ರಾಮದ ಅಭಿವೃದ್ಧಿಗಾಗಿ ಸಂಗ್ರಹಿಸಲಾಗಿದೆ. ಉಳಿದ 50 ಲಕ್ಷ ರುಪಾಯಿಗಳನ್ನು ಜಿಲ್ಲಾ ಪಂಚಾಯಿತಿ ಭರಿಸಲಿದೆ. ಇದರಿಂದಾಗಿ ಗ್ರಾಮ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಹೊಂದಲಿದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications