ಶುಭ ಶುಕ್ರವಾರಕ್ಕೆ ತುಂತುರು ತೋರಣ
ರಾಜ್ಯದಲ್ಲಿ ಮಳೆ ಮತ್ತೆ ಚುರುಕಾಗಿದೆ. ಉಪ್ಪಿನಂಗಡಿಯಲ್ಲಿ 11 ಸೆಂಮೀ, ಕಾರ್ಕಳದಲ್ಲಿ 7, ಗದಗ, ಆಳಂದ, ಸಿದ್ಧಾಪುರಗಳಲ್ಲಿ ತಲಾ 6, ಬೆಳ್ತಂಗಡಿ, ಮೂಲ್ಕಿ, ಧರ್ಮಸ್ಥಳ, ಮಾಗಡಿ ಬಸರಾಳುಗಳಲ್ಲಿ ತಲಾ 5, ಬಂಟ್ವಾಳ, ಮಾಣಿ, ಮಂಗಳೂರು, ಕೋಟಾ, ಬೀದರ್, ಬಂಡೀಪುರ, ಕೋಣನೂರು, ಚಿಂತಾಮಣಿ, ಮಂಡ್ಯ, ಯಳಂದೂರುಗಳಲ್ಲಿ ತಲಾ 3 ಸೆಂಮೀ ಮಳೆ ಬಿದ್ದಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ತುಂತುರು ಮಳೆ ಬೀಳುತ್ತಿದ್ದು , ದಿನದ ತಾಪಮಾನದಲ್ಲಿ ಕುಸಿತ ಉಂಟಾಗಿದೆ. ದಿನದ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಷಿಯಸ್ ರಾಯಚೂರಿನಲ್ಲಿ ದಾಖಲಾಗಿತ್ತು . ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಶನಿವಾರದವರೆಗೆ ಮಳೆ- ಮೋಡದ ಕಣ್ಣಾ ಮುಚ್ಚಾಲೆ ಮುಂದುವರಿಯಲಿದೆ.
ಬೆಂಗಳೂರಿಗೂ ಬಂತು : ಬಂತಿದೋ .. ಅನ್ನುವ ಭ್ರಮೆ ಮೂಡಿಸಿ ಮರೀಚಿಕೆಯಾಗಿದ್ದ ಮಳೆ, ಅಂತೂ ಇಂತೂ ಬೆಂಗಳೂರಿಗೆ ಒಲಿದಿದೆ. ಬುಧವಾರ ಹಾಗೂ ಗುರುವಾರ ಮಳೆ ಬಂತು ಮಳೆ ಅನ್ನುವ ಸುದ್ದಿ ನಗರದ ಬಹುತೇಕ ಬಡಾವಣೆಗಳಲ್ಲಿ . ಪರಿಣಾಮ, ತಾಪಮಾನದಲ್ಲಿ 1 ಡಿಗ್ರಿ ಸೆಲ್ಷಿಯಸ್ ಕುಸಿತ. ನಗರದ ಜನರಿಗೆ ತಂಪುಹವೆಯ ಹಿತ.
34.6 ರಷ್ಟಿದ್ದ ದಿನದ ಗರಿಷ್ಠ ತಾಪಮಾನ 33.5 ಡಿಗ್ರಿ ಸೆಲ್ಷಿಯಸ್ಗೆ ಕುಸಿದಿದೆ.
ಶುಕ್ರವಾರ ತಾಪಮಾನದಲ್ಲಿ ಇನ್ನಷ್ಟು ಕುಸಿತ ಕಾಣುವ ನಿರೀಕ್ಷೆಯಿದ್ದು , ದಿನದ ಗರಿಷ್ಠ ಉಷ್ಣಾಂಶ 30 ಡಿಗ್ರಿ ಆಸುಪಾಸಿನಲ್ಲಿರುತ್ತದೆ. ಯಲಹಂಕ ಪ್ರದೇಶದಲ್ಲಿ 9 ಮಿಮೀ ಮಳೆ ಸುರಿದಿದ್ದರೆ, ವಿಮಾನ ನಿಲ್ದಾಣದಲ್ಲಿ 3.9 ಮಿಮೀ, ಉಳಿದಂತೆ ಸಾಮಾನ್ಯವಾಗಿ 0.2 ಮಿಮೀ ಮಳೆ ಸುರಿದಿದೆ. ಕೆಲವೆಡೆ ರಸ್ತೆಗಳು ಕೊಚ್ಚೆಗುಂಡಿಗಳಂತೆ ಬೇಸಗೆಯಲ್ಲೇ ಪರಿವರ್ತನೆಯಾಗಿವೆ. ಇದು ಈ ಹೊತ್ತಿನ ಬೆಂಗಳೂರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications