Get Updates
Get notified of breaking news, exclusive insights, and must-see stories!

2001-02ರಲ್ಲಿ ಇನ್ಫೋಸಿಸ್‌ಗೆ ಕೇವಲ ಶೇ. 30ರಷ್ಟು ಲಾಭ ಗಿಟ್ಟಲಿದೆ

ನವದೆಹಲಿ : ಅಮೆರಿಕ ಆರ್ಥಿಕ ಕುಸಿತ ಅಂಥಾ ದೊಡ್ಡ ಪೆಟ್ಟೇನೂ ಕೊಟ್ಟಿಲ್ಲ ಎಂದು ಯಾರು ಏನೇ ಜಮಜಾಯಿಷಿ ಕೊಡಬಹುದು. ಆದರೆ ಬುಧವಾರ ಇನ್ಫೋಸಿಸ್‌ ತನ್ನ ವಿತ್ತ ವಾರ್ಷಿಕ ವರದಿ ಹೊರ ಹಾಕಿದ ನಂತರ ಇಡೀ ಮಾಹಿತಿ ತಂತ್ರಜ್ಞಾನ ಕ್ಷೇತ್ರವೇ ದಂಗು ಬಡಿಯುವಂಥ ಸುದ್ದಿಯನ್ನು ಕೊಟ್ಟಿದೆ. ಕಂಪನಿಯ ಅಧ್ಯಕ್ಷ ನಾರಾಯಣ ಮೂರ್ತಿ ಹೇಳುತ್ತಾರೆ- ಕಳೆದ ವಿತ್ತ ವರ್ಷದಲ್ಲಿ ಕಂಪನಿ ಪ್ರತಿಶತ 100ರಷ್ಟು ಲಾಭ ಗಳಿಸಿದೆ. ಆದರೆ 2001- 2002ನೇ ವಿತ್ತ ವರ್ಷದಲ್ಲಿ ಕಂಪನಿಗೆ ಹೆಚ್ಚೆಂದರೆ ಶೇ.30ರಷ್ಟು ಲಾಭ ಮಾತ್ರ ಗಿಟ್ಟಲಿದೆ !

ಷೇರಿನಲ್ಲಿ ಏಕಾಏಕಿ ಕುಸಿತ : ಆರ್ಥಿಕ ಪಂಡಿತರು ಏನೇ ಲೆಕ್ಕಾಚಾರ ಹಾಕಿದರೂ ಭಾರತದ ಐಟಿ ದಿಗ್ಗಜ ಇನ್ಫೋಸಿಸ್‌ ಅಧ್ಯಕ್ಷರ ಮಾತೇ ವಾಸ್ತವ ಎಂಬುದು ಖಾತ್ರಿಯಾಗುತ್ತಿದೆ. ಮತ್ತೊಂದು ಶಾಕ್‌ ಸುದ್ದಿಯೆಂದರೆ, ಬುಧವಾರ ಶೇ.16ರಷ್ಟು ಕುಸಿತ ಕಂಡಿದ ಇನ್ಫೋಸಿಸ್‌ ಷೇರು ಗುರುವಾರ ಇನ್ನೂ 16 ಪ್ರತಿಶತ ಕುಸಿದಿದೆ.

ಬಿಸಿನೆಸ್‌ ಸ್ಟ್ಯಾಂಡರ್ಡ್‌ ಪತ್ರಿಕೆಯ ಹೊಸ ಸಂಚಿಕೆಯ ಸಂಪಾದಕೀಯದ ವಸ್ತು ಇದೇ ವಿಷಯ. ಅಮೆರಿಕೆಯಲ್ಲಿ ದಿಗ್ಗಜ ಐಟಿ ಕಂಪನಿಗಳೇ ಮಂದಿಯನ್ನು ಕೆಲಸದಿಂದ ತೆಗೆಯುತ್ತಿರುವಾಗ ಅದು ಭಾರತದ ಎಲ್ಲಾ ಕಂಪನಿಗಳ ಮೇಲೂ ಪರಿಣಾಮ ಬೀರುತ್ತಿದೆ. ಭಾರತದ ಸಾಫ್ಟ್‌ವೇರ್‌ ಮಾರುಕಟ್ಟೆ ಕೇಂದ್ರ ಅಮೆರಿಕ. ಆರ್ಥಿಕ ಹೊಡೆತದ ಪರಿಣಾಮ ಅಮೆರಿಕ ತನ್ನ ಸಾಫ್ಟ್‌ವೇರ್‌ ಆರ್ಡರ್‌ಗಳ ಬಹುಪಾಲನ್ನು ರದ್ದು ಮಾಡಲಿದೆ.

ಎಲ್ಲಕ್ಕೂ ಕಾರಣ ಅಮೆರಿಕಾ ಅಮೆರಿಕಾ : ಇನ್ಫೋಸಿಸ್‌ ಹಾಗೂ ಸತ್ಯಂ ಕಳೆದೈದು ವರ್ಷಗಳಿಂದ ಸಾಫ್ಟ್‌ವೇರ್‌ ಉದ್ದಿಮೆಯಲ್ಲಿ ಗಗನದೆತ್ತರಕ್ಕೆ ಬೆಳೆದಿರುವ ಸಂಸ್ಥೆಗಳು. ಇನ್ಫೋಸಿಸ್‌ ಕಡಿಮೆಯೆಂದರೆ ಶೇ. 90ರಷ್ಟು ಲಾಭ ದಾಖಲಿಸುತ್ತಿದ್ದ ಸಂಸ್ಥೆ. ಆದರೆ ಮುಂದಿನ ದುಸ್ಥಿತಿ ಎದುರಿಸಲು ಇನ್ಫೋಸಿಸ್‌ ಅಧ್ಯಕ್ಷರೇ ಸಿದ್ಧರಾಗಿದ್ದಾರೆ. ಪ್ರಸ್ತುತ ವಿತ್ತ ವರ್ಷದ ಮೊದಲ ಮೂರು ತಿಂಗಳು ಭಾರತದ ಐಟಿ ಆರ್ಥಿಕ ಪೆಂಡ್ಯುಲಮ್‌ನ ಆವರ್ತನೆ ಎಷ್ಟರ ಮಟ್ಟಿಗೆ ಕಡಿಮೆ ಆಗಲಿದೆ ಎಂಬುದನ್ನು ನಿರ್ಧರಿಸಲಿದೆ. ಇಂಥಾ ಹಠಾತ್‌ ಹೊಡೆತ ಇಡೀ ಐಟಿ ಉದ್ದಿಮೆಯನ್ನು ಚಿಂತೆಗೀಡು ಮಾಡಿರುವುದು ನಿಜ ಎನ್ನುತ್ತಾರೆ ಐಸಿಐಸಿಐ ಸೆಕ್ಯುರಿಟೀಸ್‌ನ ಪರಿಶೀಲಕ ಸುಜಯ್‌ ಘೋಷ್‌.

ಈಗ ಸಾಫ್ಟ್‌ವೇರ್‌ ಉತ್ಪನ್ನಗಳ ಮಾರುವ ದಲ್ಲಾಳಿಗಳೂ ಗ್ರಾಹಕರಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಉತ್ಪನ್ನಗಳನ್ನು ಕೊಳ್ಳಲು ಮನಸ್ಸು ಮಾಡಿರುವ ಎಷ್ಟೋ ಸ್ಥಳೀಯ ಕಂಪನಿಗಳು ಹೆಜ್ಜೆಯನ್ನು ಹಿಂದಿಕ್ಕಿವೆ. ಕಳೆದ ಕೆಲ ತಿಂಗಳಿಂದ ಸಾಫ್ಟ್‌ವೇರ್‌ ರಫ್ತಿನಲ್ಲಾಗಲೀ, ಸ್ಥಳೀಯ ಮಾರುಕಟ್ಟೆಯಲ್ಲಾಗಲೀ ಗಣನೀಯ ಕುಸಿತ ಕಂಡುಬಂದಿದೆ.

ಎಲ್ಲಕ್ಕೂ ಪ್ರತ್ಯಕ್ಷ ಕಾರಣ ಅಮೆರಿಕಾ..ಅಮೆರಿಕಾ. ಪರಿಸ್ಥಿತಿ ಸುಧಾರಿಸಿಕೊಳ್ಳಲು ಇರುವ ಏಕೈಕ ದಾರಿ- ಸ್ಥಳೀಯ ಮಾರುಕಟ್ಟೆಯಲ್ಲಿ ಐಟಿ ಉತ್ಪನ್ನಗಳಿಗೆ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವುದು. ವಿದೇಶೀ ಮಾರುಕಟ್ಟೆಯಾಂದನ್ನೇ ಅವಲಂಬಿಸೋದು ಬಿಟ್ಟು ನಮ್ಮಲ್ಲೇ ಏನು ಮಾಡಬಹುದು ಎಂಬುದನ್ನು ಚಿಂತಿಸೋದು ಒಳಿತು. ಇದು ಬಿಸಿನೆಸ್‌ ಸ್ಟ್ಯಾಂಡರ್ಡ್‌ ಹಾಗೂ ಎಕಾನಮಿಕ್‌ ಟೈಮ್ಸ್‌ನ ಹೊಸ ಸಂಚಿಕೆಗಳ ತಿರುಳು. ಸಲಾಮು ಗಿಟ್ಟಿಸಿಕೊಳ್ಳುತ್ತಿದ್ದ ಐಟಿ ಮಂದಿ ಈಗ ಬಿಸಿಬಿಸಿಯಾಗಿದ್ದಾರೆ.

(ಎಎಫ್‌ಪಿ)

ವಾರ್ತಾಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+