ಅಮೆರಿಕಕ್ಕೆ ಹಣದುಬ್ಬರದ ಸಮಸ್ಯೆ ಇಲ್ಲ - ಜರ್ಮನಿಯ ಅಧ್ಯಯನ
ಬರ್ಲಿನ್ : ಅಮೆರಿಕ ಆರ್ಥಿಕವಾಗಿ ತೊಂದರೆಗೆ ಸಿಲುಕಿಲ್ಲ . ಇವತ್ತಿಗೂ ಅದು ಜಾಗತಿಕ ವ್ಯಾಪಾರಿ ಕಾಶಿಯಾಗೇ ಉಳಿದಿದೆ ಎಂದು ಜರ್ಮನಿಯ 6 ಪ್ರಮುಖ ಸಂಶೋಧನಾ ಸಂಸ್ಥೆಗಳು ಮಂಗಳವಾರ ಹೊರಡಿಸಿದ ವಾರ್ಷಿಕ ವರದಿಯಲ್ಲಿ ಸ್ಪಷ್ಟಪಡಿಸಿವೆ.
2001--02 ರಲ್ಲಿ ಶೇ. 4 ಲಾಭ ಅಂದಾಜು : ಈಗ ಅಮೆರಿಕ ಆರ್ಥಿಕವಾಗಿ ಸಣ್ಣ ಪೆಟ್ಟು ತಿಂದಿರಬಹುದು. ಆದರೆ ಪ್ರಸ್ತುತ ವಿತ್ತ ವರ್ಷದ ದ್ವಿತೀಯಾರ್ಧದಲ್ಲಿ ದೇಶ ಮತ್ತೆ ಮೈಕೊಡವಿಕೊಂಡು ಏಳಲಿದೆ. ಈಗಿನ ವಿತ್ತ ವರ್ಷದ 2001ರ ಸಾಲಿನಲ್ಲಿ ಒಟ್ಟಾರೆ 1.5 ಪ್ರತಿಶತ ಹಾಗೂ 2002ರಲ್ಲಿ ಶೇ. 2.5 ರಷ್ಟು ಲಾಭ ದೇಶದ ಬೊಕ್ಕಸಕ್ಕೆ ದಕ್ಕಲಿದೆ ಎಂದು ಈ ಸಂಸ್ಥೆಗಳು ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.
ಅಮೆರಿಕದ ಆರ್ಥಿಕ ಅಭಿವೃದ್ಧಿ ಮಂದಗತಿಯಲ್ಲಾಗಲಿದೆಯೇ ಹೊರತು ಅದು ಹಣದುಬ್ಬರದ ಸಮಸ್ಯೆ ಎದುರಿಸುವ ಸಂದರ್ಭ ಬರದು. 2000 ಸಾಲಿನಲ್ಲಿ ದೇಶದ ಒಟ್ಟು ಸ್ಥಳೀಯ ಆದಾಯ (ಜಿಡಿಪಿ) ದಲ್ಲಿ ಶೇ.5ರಷ್ಟು ಹೆಚ್ಚಳವಾಗಿತ್ತು. ಒಟ್ಟಾರೆ ಸ್ಥಿತಿಯನ್ನು ಸೂಕ್ಷ್ಮವಾಗಿ ವಿವೇಚಿಸಿ ನೋಡಿದಲ್ಲಿ ಅಮೆರಿಕ ಅಂಥಾ ತೊಂದರೆಯಲ್ಲೇನೂ ಸಿಲುಕಿಲ್ಲ.
ಆರ್ಥಿಕ ದುಸ್ಥಿತಿಯಲ್ಲಿ ಜಪಾನ್ : ಆದರೆ, ಜಪಾನಿನ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳೂ ಕಂಡುಬರುತ್ತಿಲ್ಲ . ಪ್ರಸ್ತುತ ವಿತ್ತ ವರ್ಷದಲ್ಲಿ 2001ರಲ್ಲಿ 0.8 ಪ್ರತಿಶತ ಹಾಗೂ 2002ರಲ್ಲಿ 1.4 ಪ್ರತಿಶತ ಪ್ರಗತಿಯನ್ನು ಮಾತ್ರ ದೇಶ ಕಾಣಲಿದೆ.
ಈ ಅಧ್ಯಯನ ನಡೆಸಿರುವ ಜರ್ಮನಿಯ ಸಂಸ್ಥೆಗಳಾವುವೆಂದರೆ- ಜರ್ಮನ್ ಇನ್‌ಸ್ಟಿಟ್ಯೂಟ್ ಫಾರ್ ಎಕಾನಮಿಕ್ ರಿಸರ್ಚ್ (ಡಿಐಡಬ್ಯ್ಲು), ದಿ ಹ್ಯಾಂಬರ್ಗ್ ವರ್ಲ್ಡ್ ಎಕಾನಮಿಕ್ ಆರ್ಕೈವ್ (ಎಚ್‌ಡಬ್ಲ್ಯುಡಬ್ಲ್ಯುಎ), ದಿ ಐಎಫ್‌ಓ ಇನ್ಸ್‌ಟಿಟ್ಯೂಟ್ ಫಾರ್ ಎಕಾನಮಿಕ್ ರಿಸರ್ಚ್, ದಿ ಇನ್ಸ್‌ಟಿಟ್ಯೂಟ್ ಫಾರ್ ದಿ ವರ್ಲ್ಡ್ ಎಕಾನಮಿ ಹಾಗೂ ರೇನಿಸ್- ವೆಸ್ಟ್‌ಫ್ಯಾಲಿಯನ್ ಇನ್ಸ್‌ಟಿಟ್ಯೂಟ್ ಫಾರ್ ಎಕಾನಮಿಕ್ ರಿಸರ್ಚ್.
(ಡಿಪಿಎ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications