ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳಸ, ಬೆಳಗಾವಿಗಳಿಗೆ ಮಳೆಯ ಸಿಂಚನ

By Staff
|
Google Oneindia Kannada News

ಕಳಸ, ಬೆಳಗಾವಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಮಂಗಳವಾರ ಮೊದಲ ಮಳೆಯ ರೋಮಾಂಚನ. ಸೋಮವಾರವಷ್ಟೆ ರಾಜ್ಯದ ಕೆಲವು ಭಾಗಗಳಲ್ಲಿ ಎರ್ರಾಬಿರ್ರಿ ಹೊಯ್ದಿದ್ದ ಮಳೆ ಮಂಗಳವಾರ ಬಿರುಸು ಹಾಗೂ ವ್ಯಾಪ್ತಿ ಕಳಕೊಂಡಿತ್ತು . ಮೂರೂ ಊರುಗಳಲ್ಲಿ ಬಿದ್ದ ಮಳೆ 1 ಸೆಂಮೀ ಪ್ರಮಾಣದ್ದು ಮಾತ್ರ. ಆದರೆ, ಈಗ ಬೇಸಗೆ ಕಾಲವಾದ್ದರಿಂದ, ಈ 1 ಸೆಂಮೀ ಮಳೆಗೆ ಇನ್ನಿಲ್ಲದ ತೂಕ.

ಗುಲ್ಬರ್ಗಾ ಮಾತ್ರ ಯಥಾಪ್ರಕಾರ, ಸುಡುಬಿಸಿಲಿಗೆ ತುತ್ತಾಗಿದೆ. ಮಂಗಳವಾರ ರಾಜ್ಯದ ಗರಿಷ್ಠ ತಾಪಮಾನ 42.9 ಡಿಗ್ರಿ ಸೆಲ್ಷಿಯಸ್‌ ಗುಲ್ಬರ್ಗಾದಲ್ಲಿ ದಾಖಲಾಗಿತ್ತು . ಉಳಿದಂತೆ ದಿನದ ಗರಿಷ್ಠ ತಾಪಮಾನ, ಉತ್ತರ ಕರ್ನಾಟಕದ ಒಳಭಾಗ, ದಕ್ಷಿಣ ಕನ್ನಡದ ಒಳಭಾಗ ಸೇರಿದಂತೆ ವಿವಿಧೆಡೆ ಕುಸಿತ ಕಂಡಿತ್ತು .

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕರಾವಳಿ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡದ ಒಳಭಾಗಗಳ ಕೆಲವು ಪ್ರದೇಶಗಳಲ್ಲಿ ಬುಧವಾರ ಚದುರಿದಂತೆ ಮಳೆ ಬೀಳುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು , ಸಂಜೆ ಅಥವಾ ರಾತ್ರಿ ಮಳೆ ಬೀಳಬಹುದು. ದಿನದ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಷಿಯಸ್‌ ಆಸುಪಾಸಿನಲ್ಲಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X