ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಹೈಟೆಕ್‌ ರಫ್ತಿಗೆ ಹಠಾತ್‌ಲಗಾಮು - ವಿಶ್ವ ಬ್ಯಾಂಕ್‌ ವರದಿ

By Staff
|
Google Oneindia Kannada News

* ವಸಂತ ಅರೋರಾ

ವಾಷಿಂಗ್ಟನ್‌ : ಸಾಫ್ಟ್‌ವೇರ್‌ ಸೇರಿದಂತೆ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉತ್ಪನ್ನಗಳ ರಫ್ತಿನಲ್ಲಿ ಇಳಿಮುಖ ಆಗಿರುವುದನ್ನು ವಿಶ್ವಬ್ಯಾಂಕ್‌ ಮನಗಂಡಿದೆ.

ವಿಶ್ವ ಬ್ಯಾಂಕ್‌ನ ಈಚಿಗಿನ ವರದಿ ಹೇಳುತ್ತದೆ- ಭಾರತದ ರಫ್ತಿನಲ್ಲಿ ಹಿಂದೆಂದಿಗಿತಲೂ ಹೆಚ್ಚು ಪ್ರಮಾಣದ ಇಳಿಕೆಯ ದಿನಗಳು ಸನ್ನಿಹಿತವಾಗುತ್ತಿವೆ. ವಿದೇಶೀ ವಿನಿಮಯದಲ್ಲಿ ಸುರಕ್ಷಾ ಹಂತದಲ್ಲೇ ಇರುವುದು ಸಮಾಧಾನಕರ ಸಂಗತಿಯಾಗಿದೆ.

ವರದಿಯ ಇನ್ನಷ್ಟು ಅಂಶಗಳು ಇಂತಿವೆ-

  • ಉತ್ಪನ್ನ, ಸೇವಾ ಸೌಕರ್ಯಗಳು, ನಿರ್ಮಾಣ ಮತ್ತು ಆರ್ಥಿಕತೆ ಹಾಗೂ ವಿಮೆ, ಸ್ಥಿರಾಸ್ತಿ ಮೊದಲಾದ ಕ್ಷೇತ್ರಗಳಲ್ಲಿ 2000 ವರ್ಷದ ನಂತರ ಪ್ರತಿಶತ 6ರ ಪ್ರಮಾಣದಲ್ಲಿ ಭಾರತ ಅಭಿವೃದ್ಧಿ ಸಾಧಿಸಿದೆ
  • ದೇಶದ ಉದ್ದಿಮೆ ಆಡಳಿತದಲ್ಲಿ ಭಾರತ ಇನ್ನಷ್ಟು ಉದಾರಿಯಾಗಿರುವುದು ಸ್ವಾಗತಾರ್ಹ. ರಫ್ತು ಹಾಗೂ ಆಮದು ನೀತಿಗಳ ಎಡರುಗಳು ಇದರಿಂದ ನಿವಾರಣೆಯಾಗಲಿವೆ
  • ಭಾರತದ ದೊಡ್ಡ ಪ್ರಮಾಣದ ಏಳಿಗೆಗೆ ಇರುವ ತೊಡರು ದೇಶದ ಖೋತಾ ಬಜೆಟ್‌. ಪ್ರಸ್ತುತ ಒಟ್ಟು ಸ್ಥಳೀಯ ಉತ್ಪಾದನೆ (ಜಿಡಿಪಿ) ಪ್ರತಿಶತ 10ರಷ್ಟಿದೆ
  • ದಕ್ಷಿಣ ಏಷ್ಯಾವನ್ನು ಇಡಿಯಾಗಿ ಗಮನಿಸಿದಲ್ಲಿ, ಕೈಗಾರಿಕಾ ದೇಶಗಳ ಪ್ರಗತಿಯ ಗತಿ ಕ್ಷೀಣಿಸುವಿಕೆ ಹಾಗೂ ಅಗತ್ಯ ವಸ್ತುಗಳ ದರವನ್ನು ಅಗ್ಗವಾಗಿಸುವಿಕೆ ಆರ್ಥಿಕವಾಗಿ ದೇಶಕ್ಕೆ ಹೊಡೆತ ನೀಡಲಿವೆ. ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ನೇಪಾಳಕ್ಕೆ ಇದರ ದೊಡ್ಡ ಪೆಟ್ಟು ಬೀಳಲಿದೆ
  • ಅಭಿವೃದ್ಧಿಯ ಹಾದಿಯಲ್ಲಿ ದಾಪುಗಾಲಿಡುತ್ತಿದ್ದ ದಕ್ಷಿಣ ಏಷ್ಯಾದ ರಾಷ್ಟ್ರಗಳು ವಿಶ್ವ ತೈಲ ಬೆಲೆಯ ಕುಸಿತದಿಂದ ಭಾರೀ ಹೊಡೆತ ತಿಂದಿವೆ. ಇದರ ಪರಿಣಾಮ 2000ನೇ ಸಾಲಿನಲ್ಲಿ 2.2 (14 ಬಿಲಿಯನ್‌ ಡಾಲರ್‌) ಜಿಡಿಪಿಯಷ್ಟು ಖೋತಾ ಉಂಟಾಗಿದ್ದು, 1989ರಿಂದ ಇಂಥಾ ನಷ್ಟ ಆಗಿರಲಿಲ್ಲ
  • ಈಗಿನ ಲೆಕ್ಕಾಚಾರದ ಅಸಮತೋಲನ ಇನ್ನು 2 ವರ್ಷಗಳಲ್ಲಿ ಪ್ರತಿಶತ 2.4ರಷ್ಟು ಹೆಚ್ಚಲಿದೆ

    (ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X