ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್‌ 10ರಿಂದ ಗಲಗಲಿ ಚಂದ್ರಗಿರಿ ದೇವಿ ಜಾತ್ರೆ

By Staff
|
Google Oneindia Kannada News

ಬಿಜಾಪುರ : ಏಪ್ರಿಲ್‌ 10 ಹಾಗೂ 11ರಂದು ಗಲಗಲಿಯ ಚಂದ್ರಗಿರಿ ದೇವಿಯ ಜಾತ್ರೆ ಜರುಗಲಿದೆ. ಮಂಗಳವಾರ ಬೆಳಗ್ಗಿನಿಂದಲೇ ಪ್ರಥಮಪೂಜೆ, ಕಳಶ ಪೂಜೆ, ಅಭಿಷೇಕವೇ ಮೊದಲಾದ ಧಾರ್ಮಿಕ ವಿಧಿಗಳು ನಡೆಯುತ್ತಿದ್ದು, ಸಂಜೆ ರಥೋತ್ಸವ ನಡೆಯಲಿದೆ. ರಥೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.

ಸಂಜೆಯ ರಥೋತ್ಸವದ ನಂತರ ನಾಟಕ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಬುಧವಾರ ಬೆಳಗ್ಗೆ ಹಲಗೆ ಮಜಲು, ಗುರುವಾರ ನೇಗಿಲು ಜಗ್ಗುವ ಸ್ಪರ್ಧೆಗಳನ್ನೂ ಶುಕ್ರವಾರ ಎತ್ತಿನ ಗಾಡಿಗಳ ಓಟದ ಸ್ಪರ್ಧೆ ಹಾಗೂ ಶನಿವಾರ ಕಲ್ಲುಜಗ್ಗುವ ಸ್ಪರ್ಧೆ ನಡೆಯಲಿದೆ.

ಹಲವು ಜಾನಪದ ತಂಡಗಳು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿವೆ. ಅಪರೂಪವಾಗುತ್ತಿರುವ ಡೊಳ್ಳಿನ ಪದಗಳ ಕಾರ್ಯಕ್ರಮನೂ ಈ ಸಂದರ್ಭದಲ್ಲಿ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ಹೊಸೂರ ಜಾತ್ರೆ ಮುಂದಕ್ಕೆ : ಏಪ್ರಿಲ್‌ ತಿಂಗಳಿನಲ್ಲಿ ನಡೆಯಬೇಕಿದ್ದ ಸವದತ್ತಿ ತಾಲೂಕಿನ ಗುರ್ಲಹೊಸೂರ ಗ್ರಾಮದ ಗ್ರಾಮದೇವತೆಯ ಜಾತ್ರೆಯು ಮೇ ತಿಂಗಳಲ್ಲಿ ನಡೆಯಲಿದೆ. ಪುರಸಭೆಯ ಚುನಾವಣೆಗಳ ಹಿನ್ನೆಲೆಯಲ್ಲಿ ಏಪ್ರಿಲ್‌ 30ರಿಂದ ಆರಂಭವಾಗಬೇಕಿದ್ದ ಜಾತ್ರೆಯನ್ನು ಮೇ 6ರಿಂದ 14ರವರೆಗೆ ನಡೆಸಲು ನಿರ್ಧರಿಸಲಾಗಿದೆ.

ಈಗಾಗಲೇ ನಿಗದಿಯಾಗಿರುವ ಎಲ್ಲ ಕಾರ್ಯಕ್ರಮಗಳೂ ಮೇ ತಿಂಗಳಿನಲ್ಲಿ ನಡೆಯಲಿದ್ದು, ಕಲಾವಿದರು, ಕ್ರೀಡಾಪಟುಗಳು ಹಾಗೂ ನಾಗರಿಕರು ಸಹಕರಿಸಬೇಕು ಎಂದು ಜಾತ್ರಾ ಮಹೋತ್ಸವ ಕಮಿಟಿಯ ಅಧ್ಯಕ್ಷರಾದ ಬಸವರಾಜ ಕಾರದಗಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

(ಬಿಜಾಪುರ ಪ್ರತಿನಿಧಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X