ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾದೇವಿ ಅಪರಾಧಿ, ಅಂಕಿತ ಬದಲಿಸುವಹಕ್ಕು ಯಾರಿಗೂ ಇಲ್ಲ

By Staff
|
Google Oneindia Kannada News

ಜಮಖಂಡಿ : ಅಕ್ಕಮಹಾದೇವಿಯ ವಚನಗಳ ಅಂಕಿತವನ್ನು ಬದಲಾಯಿಸಿದ ಮಾತೆ ಮಹಾದೇವಿ ಅವರ ಕೃತ್ಯವನ್ನು ಖಂಡಿಸಿ ಜಮಖಂಡಿಯ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಅಂಕಿತ ಬದಲಾಯಿಸುವ ಮೂಲಕ ಮಾತೆ ಮಹಾದೇವಿ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ದೊಡ್ಡ ಅಪರಾಧವೆಸಗಿದ್ದಾರೆ. ಅಂಕಿತವನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲವಾದ್ದರಿಂದ ಮಾತೆ ಮಹಾದೇವಿಯವರ ಕೃತ್ಯವನ್ನು ಖಂಡನಾರ್ಹ ಎಂದು ಯುಗಮಾನೋತ್ಸವ ನಿರ್ಣಯಿಸಿತು.

ಇದರೊಂದಿಗೆ ವೀರಶೈವರ ತತ್ವನಿಷ್ಠೆಯನ್ನು ಹೆಚ್ಚಿಸಲು ಹನ್ನೊಂದು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಜಗದ್ಗರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆಯ ಅಧ್ಯಕ್ಷ ಬಾಳೆಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ಶಿವಾಚಾರ್ಯರು ಪಂಚಪೀಠಾಧೀಶ್ವರರ ಪರವಾಗಿ ನಿರ್ಣಯ ಪ್ರಕಟಿಸಿದರು.

ಯುಗಮಾನೋತ್ಸವದಲ್ಲಿ ಕೈಗೊಂಡ ಮುಖ್ಯ ನಿರ್ಣಯಗಳು-

  • ವೀರಶೈವ ಸಂಸ್ಕಾರ ಮತ್ತು ವಿಚಾರಗಳನ್ನು ಇಂದಿನ ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಶಿಬಿರಗಳನ್ನು ನಡೆಸುವುದು
  • ವೀರಶೈವ ಧರ್ಮವಾಹಿನಿಯಿಂದ ಶಿವ ಶರಣರನ್ನು ಪ್ರತ್ಯೇಕಿಸುವ ತಂತ್ರವನ್ನು ತಡೆಗಟ್ಟಲು ಕಡ್ಡಾಯವಾಗಿ ಗುರುವಿನಿಂದಲೇ ಶಿವ ದೀಕ್ಷೆ ಪಡೆಯುವುದು
  • ಪ್ರತಿ ವರ್ಷ ಯುಗಾದಿ ಪಾಡ್ಯದಂದು ಎಲ್ಲ ಮಠ ಮಂದಿರಗಳಲ್ಲಿ ಯುಗಮಾನೋತ್ಸವವನ್ನು ಆಚರಿಸುವುದು
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X