ಪುರಂದರರ ಕೃತಿಯ ಹಾಡಾಗಿಸುವವರಿಗೆ ಪ್ರಶಸ್ತಿ ಕೊಡಲು ಚಿಂತನೆ
ಬೆಂಗಳೂರು : ಇನ್ನು 35 ದಿನಗಳ ಕಾಲ ರಾಜ್‌ಕುಮಾರ್ ಭಾರತಿ, ಕೆ.ಜೆ.ಯೇಸುದಾಸ್, ಡಾ. ಎನ್.ರಮಣಿ, ಕುನ್ನಕುಡಿ ಆರ್.ವೈದ್ಯನಾಥನ್, ಯು.ಶ್ರೀನಿವಾಸ್ ಮೊದಲಾದ ಕರ್ನಾಟಕ ಸಂಗೀತಗಾರರು ಕಂಠದೂಟ ಉಣ ಬಡಿಸಲಿದ್ದಾರೆ. ನೀವೂ ಸಂಗೀತ ಪ್ರೇಮಿಗಳಾದರೆ ಚಾಮರಾಜಪೇಟೆಯ ಶ್ರೀರಾಮಸೇವಾ ಮಂಡಳಿಗೆ ಬರಬಹುದು.
ದಾಸರ ಕೃತಿಗೆ ರಾಗ ಕಟ್ಟುವವರಿಗೆ ಪ್ರಶಸ್ತಿ : ಮಂಡಳಿ ಆಯೋಜಿಸಿರುವ 36 ದಿನಗಳ ಸಂಗೀತೋತ್ಸವ ಸೋಮವಾರ ಪ್ರಾರಂಭವಾಯಿತು. ರಾಜ್ಯ ವಾರ್ತಾ ಸಚಿವ ಪ್ರೊ. ಬಿ.ಕೆ.ಚಂದ್ರಶೇಖರ್ ಈ ಸಂಗೀತೋತ್ಸವ ಉದ್ಘಾಟಿಸಿದರು. ತಮಿಳುನಾಡಿನಲ್ಲಿ ತ್ಯಾಗರಾಜರ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿ ಕೊಡುತ್ತಿರುವಂತೆ ಕರ್ನಾಟಕ ಸರ್ಕಾರವೂ ಕೂಡ ಪುರಂದರ ದಾಸರ ಕೃತಿಗಳಿಗೆ ಜೀವ ತುಂಬುವ ಗಾಯಕ(ಕಿ) ಗೆ ಪುರಂದರ ಪ್ರಶಸ್ತಿ ನೀಡುವ ಕುರಿತು ಚಿಂತಿಸುತ್ತಿದೆ ಎಂಬ ಸಿಹಿ ಸುದ್ದಿ ಕೊಟ್ಟರು.
ಉದ್ಘಾಟನಾ ಸಮಾರಂಭದಲ್ಲೇ ಹೊರ ತರಲಾದ ಸ್ಮರಣ ಸಂಚಿಕೆಯನ್ನು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಬಿಡುಗಡೆ ಮಾಡಿದರು. 80 ಲಕ್ಷ ರುಪಾಯಿ ಖರ್ಚು ಮಾಡಿ, ದಾಸ ಸಾಹಿತ್ಯದ ಸಮಗ್ರ ಸಂಪುಟ ತರುವ ಸರ್ಕಾರದ ಹೆಜ್ಜೆಯನ್ನು ಸಚಿವೆ ಪುನರುಚ್ಚರಿಸಿದರು.
ಕಾರ್ಯಕ್ರಮದಲ್ಲಿ ಈ ಎಲ್ಲಕ್ಕಿಂತ ಹೆಚ್ಚಿನ ಗಮನ ಸೆಳೆದದ್ದು ಕದ್ರಿ ಗೋಪಾಲನಾಥ್ ಅವರ ಸಾಕ್ಸೊಫೋನ್. ಜೊತೆಗೆ ಅವರು ಹಾಡಿದ ಕನಕದಾಸರ ‘ನಮ್ಮಮ್ಮ ಶಾರದೆ’. ಏಪ್ರಿಲ್ ಹದಿನೈದನೇ ತಾರೀಖು ಮಾತ್ರ ಈ ಸಂಗೀತೋತ್ಸವಕ್ಕೆ ರಜೆ ಇರುತ್ತದೆ. ಬಿಡುವು ಮಾಡಿಕೊಂಡು ನೀವೂ ಕಾರ್ಯಕ್ರಮ ನೋಡಿಬಂದು, ನಿಮ್ಮ ಅನುಭವವನ್ನು ನಮಗೆ ಬರೆಯಿರಿ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications