Get Updates
Get notified of breaking news, exclusive insights, and must-see stories!

ನರ್ಮದೆಯ ಮಗಳು ಮೇಧಾ ಪಾಟ್ಕರ್‌ಗೆಬಸವ ಶ್ರೀ ಪ್ರಶಸ್ತಿ

ಚಿತ್ರದುರ್ಗ : ಪ್ರಸಿದ್ಧ ಪರಿಸರವಾದಿ ಹಾಗೂ ನರ್ಮದಾ ಬಚಾವ್‌ ಆಂದೋಲನದ ನಾಯಕಿ ಮೇಧಾ ಪಾಟ್ಕರ್‌ ಅವರನ್ನು ಮುರುಘರಾಜೇಂದ್ರ ಬೃಹನ್ಮಠ ನೀಡುವ ಪ್ರತಿಷ್ಠಿತ ಬಸವ ಶ್ರೀ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ.

ಮುರುಘ ರಾಜೇಂದ್ರ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘರಾಜೇಂದ್ರ ಶರಣರ ಅಧ್ಯಕ್ಷತೆಯ ಬಸವ ಶ್ರೀ ಪ್ರಶಸ್ತಿ ಆಯ್ಕೆ ಸಮಿತಿ, ಈ ವರ್ಷದ ಪ್ರಶಸ್ತಿಗಾಗಿ ಮೇಧಾ ಪಾಟ್ಕರ್‌ ಅವರನ್ನು ಆಯ್ಕೆ ಮಾಡಿದೆ. ಮೇ 5 ರಂದು ಪ್ರಶಸ್ತಿ ಪ್ರದಾನ ಸಮಾರಂಭ, ಚಿತ್ರದುರ್ಗದ ಮುರುಘಾ ವನದಲ್ಲಿ ನಡೆಯುವುದು ಎಂದು ಮುರುಘರಾಜೇಂದ್ರ ಶರಣರು ತಿಳಿಸಿದ್ದಾರೆ.

ಪ್ರಶಸ್ತಿಯು, ಒಂದು ಲಕ್ಷ ರೂಪಾಯಿ ನಗದು ಮತ್ತು ತಾಮ್ರ ಪತ್ರವನ್ನೊಳಗೊಂಡಿರುತ್ತದೆ. ಮೇಧಾ ಪಾಟ್ಕರ್‌ ಅವರು ನರ್ಮದಾ ಬಚಾವ್‌ ಜನಾಂದೋಲನದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ತಮ್ಮ ಒಡನಾಡಿಗಳೊಂದಿಗೆ ಈ ಪ್ರಶಸ್ತಿಯನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ.

ಕಳೆದ ಒಂದುವರೆ ದಶಕದಿಂದ ನರ್ಮದಾ ಅಟೆಕಟ್ಟು ಕಾಮಗಾರಿಯಿಂದಾಗಿ ನಿರ್ವಸಿತರಾಗಿರುವ ಆದಿವಾಸಿಗಳ ಪುನರ್ವಸತಿಗಾಗಿ ಮೇಧಾ ಹೋರಾಡುತ್ತಿದ್ದಾರೆ. ಮೂರು ರಾಜ್ಯಗಳ ಮೂಲಕ ಹಾದು ಹೋಗುವ ನರ್ಮದಾ ನದಿಗೆ ಸುಮಾರು 30 ಬೃಹತ್‌ ಅಣೆಕಟ್ಟು, 135 ಮಧ್ಯಮ ಅಟೆಕಟ್ಟು ಹಾಗೂ 3000ಕ್ಕೂ ಹೆಚ್ಚು ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುವ ಯೋಜನೆಯಿಂದಾಗಿ 245 ಹಳ್ಳಿಗಳು ನೆಲೆ ಕಳೆದುಕೊಳ್ಳುತ್ತವೆ. ನಿರ್ವಸಿತರ ಪರವಾಗಿ ಹೋರಾಡಿದ ಮೇಧಾ ಪಾಟ್ಕರ್‌ಗೆ ಈ ಬಾರಿಯ ಬಸವ ಶ್ರೀ ಪ್ರಶಸ್ತಿ ನೀಡುವುದು ಸೂಕ್ತ ಎಂದು ಆಯ್ಕೆ ಸಮಿತಿ ನಿರ್ಧರಿಸಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+