ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ಅಪಹರಣದ ಸತ್ಯಾಂಶಗಳೇನು ? ನಿರೀಕ್ಷಿಸಿಅಬ್ದುಲ್‌ ಕರೀಂ ಪುಸ್ತಕ

By Staff
|
Google Oneindia Kannada News

ಬೆಂಗಳೂರು : ರಾಜ್‌ ಅಪಹರಣ ಪ್ರಕರಣದ ಬಿಸಿ ಆರಿ ತಿಂಗಳುಗಳಾಗಿದ್ದರೂ ಇಬ್ಬರು ನಿವೃತ್ತ ಪೊಲೀಸ್‌ ಅಧಿಕಾರಿಗಳು ಅಪಹರಣ ಪ್ರಕರಣದ ಹಿಂದಿರುವ ಸತ್ಯವನ್ನು ಬಯಲು ಮಾಡಲು ಪಣ ತೊಟ್ಟಿರುವಂತಿದೆ. ಮಾಜಿ ಪೊಲೀಸ್‌ ಮಹಾ ನಿರ್ದೇಶಕ ಸಿ. ದಿನಕರ್‌ ಅವರು, ರಾಜ್‌ ಅಪಹರಣದ ಸತ್ಯಗಳನ್ನು ಜನರಿಗೆ ತಿಳಿಸಲು ಪುಸ್ತಕವೊಂದನ್ನು ಬರೆಯುತ್ತಿದ್ದರೆ, ಇತ್ತ ಮೃತ ಪೊಲೀಸ್‌ ಇನ್‌ಸ್ಪೆಕ್ಟರ್‌ ಶಕೀಲ್‌ ಅಹ್ಮದ್‌ ತಂದೆ, ಮಾಜಿ ಪೊಲೀಸ್‌ ಮಹಾ ನಿರೀಕ್ಷಕ ಅಬ್ದುಲ್‌ ಕರೀಂ ಕೂಡ ರಾಜ್‌ ಅಪಹರಣಕ್ಕೆ ಸಂಬಂಧಿಸಿದಂತೆ ವೀರಪ್ಪನ್‌ ಬಗ್ಗೆ ಪುಸ್ತಕವನ್ನು ಬರೆಯುತ್ತಿದ್ದಾರೆ.

ವೀರಪ್ಪನ್‌, ಟಾಡಾದಡಿ ಬಂಧಿತರಾಗಿದ್ದ ಮೈಸೂರು ಜೈಲಿನ ಕೈದಿಗಳ ಬಿಡುಗಡೆಯ ಬೇಡಿಕೆಯನ್ನಿಟ್ಟಾಗ ಅಬ್ದುಲ್‌ ಕರೀಂ ಅವರು ತೀವ್ರವಾಗಿ ಪ್ರತಿಭಟಿಸಿ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಕೆಳ ನ್ಯಾಯಾಲಯಗಳಲ್ಲಿ ಗೆಲುವು ಕಾಣದ ಅವರು ಸವೋಚ್ಛ ನ್ಯಾಯಾಲಯದ ಮೆಟ್ಟಿಲೇರಿ ಜಯ ಕಂಡಿದ್ದರು.
ಪ್ರಸ್ತುತ, ಅಬ್ದುಲ್‌ ಕರೀಂ ಅವರು ಬರೆಯುವ ಪುಸ್ತಕದಲ್ಲಿ ವೀರಪ್ಪನ್‌ ಪರವಾಗಿ ನಡೆದಿರುವ ಲಾಬಿ, ಗಂಧದ ಕಳ್ಳ ಸಾಗಾಣಿಕೆ, ಕಲ್ಲು ಗಣಿ ಗುತ್ತಿಗೆದಾರರು ಮತ್ತು ರಾಜ್‌ಕುಮಾರ್‌ ಅಭಿಮಾನಿ ಬಳಗ ಅಲ್ಲದೆ ತಮಿಳು ಉಗ್ರಗಾಮಿಗಳ ಕುರಿತು ಬೆಳಕು ಚೆಲ್ಲಲಿದ್ದಾರೆ.

ಅಬ್ದುಲ್‌ ಕರೀಂ ಅವರ ಪುಸ್ತಕ ಈ ಬಾರಿಯ ಸ್ವಾತಂತ್ರೋತ್ಸವದ ಮುನ್ನಾ ದಿನ ಬಿಡುಗಡೆಯಾಗಲಿದೆ. ಅಂದಿಗೆ ಅವರ ಪುತ್ರ ಶಕೀಲ್‌ , ವೀರಪ್ಪನ್‌ ಗುಂಡಿಗೆ ಬಲಿಯಾದ ದುರಂತಕ್ಕೆ 8 ವರ್ಷ ತುಂಬುತ್ತದೆ. ರಾಜ್‌ ಅಪಹರಣ ಪ್ರಕರಣದ ಎಲ್ಲ ಘಟನೆಗಳು ಅನುಕ್ರಮವಾಗಿ ಪುಸ್ತಕದಲ್ಲಿ ಉಲ್ಲೇಖವಾಗಿರುತ್ತವೆ. ಅಪಹರಣ, ವೀರಪ್ಪನ್‌ ಬೇಡಿಕೆಗಳು, ಸರಕಾರದ ಪ್ರತಿಕ್ರಿಯೆ , ಟಾಡಾ ಬಂಧಿಗಳ ಬಿಡುಗಡೆಯ ನಿರ್ಧಾರಕ್ಕೆ ಬಂದ ಪ್ರತಿಕ್ರಿಯೆಗಳು... ಹೀಗೆ ಸಾಗುತ್ತದೆ ಪುಸ್ತಕ. ಪುಸ್ತಕ ಒಂದು ದಾಖಲೆಯಾಗಿರುತ್ತದೆ ಎಂದು 78ರ ಹುಮ್ಮಸ್ಸಿನ ಕರೀಂ ಹೇಳುತ್ತಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X