Get Updates
Get notified of breaking news, exclusive insights, and must-see stories!

ಲಾಯರ್ಸ್‌ ಇಂಟರ್‌ನೆಟ್‌ ಸೊಸೈಟಿ ಬುಧವಾರ ಉದ್ಘಾಟನೆ

ಬೆಂಗಳೂರು : ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಅಶೋಕ್‌ ಭಾನ್‌ ಅವರು ಲಾಯರ್ಸ್‌ ಇಂಟರ್‌ನೆಟ್‌ ಸೊಸೈಟಿ ಹಾಗೂ ಅದರ ಡೈಜೆಸ್ಟ್‌ 2000 ಫ್ಲಾಪಿಯನ್ನು ಔಪಚಾರಿಕವಾಗಿ ಬುಧವಾರ ಉದ್ಘಾಟಿಸಲಿದ್ದಾರೆ.

ಡೈಜೆಸ್ಟ್‌ 2000 ಫ್ಲಾಪಿಯು ಇಂಡಿಯನ್‌ ಲಾ ರಿಪೋರ್ಟ್‌ (ಕರ್ನಾಟಕ)ದಲ್ಲಿ ವರದಿಯಾಗಿರುವ ಕೇಸ್‌ ಲಾಗಳನ್ನು ಒಳಗೊಂಡಿದೆ. ಈ ವಿಷಯವನ್ನು ವಕೀಲರ ಸಂಘದ ಪತ್ರಿಕಾ ಪ್ರಕಟಣೆ ತಿಳಿಸಿದೆ. ವಕೀಲರಲ್ಲಿ ಕಂಪ್ಯೂಟರ್‌ ಬಗ್ಗೆ ಅರಿವು ಮೂಡಿಸುವ ಹಾಗೂ ಕಂಪ್ಯೂಟರ್‌ ಮಹತ್ವ, ಅಗತ್ಯವನ್ನು ತಿಳಿಸುವ ಕಾರ್ಯವನ್ನು ಲಾಯರ್ಸ್‌ ಇಂಟರ್‌ನೆಟ್‌ ಸೊಸೈಟಿ ಮಾಡಲಿದೆ.

ಮೊದಲ ಹಂತದಲ್ಲಿ ಲಾಯರ್ಸ್‌ ಇಂಟರ್‌ನೆಟ್‌ ಸೊಸೈಟಿ ಕೈಗೊಂಡಿರುವ ಟ್ರಾನ್ಸ್‌ಕ್ರಿಪ್ಷನ್‌ ಕಾರ್ಯಯೋಜನೆಯು 1990-2000 ಅವಧಿಯ ಐಎಲ್‌ಆರ್‌ (ಕರ್ನಾಟಕ) ದ ಎಲ್ಲ ವಿಭಾಗಗಳಲ್ಲಿ ವರದಿಯಾಗಿರುವ ತೀರ್ಪುಗಳನ್ನೂ ಒಳಗೊಂಡಿರುತ್ತದೆ ಎಂದೂ ಪ್ರಕಟಣೆ ತಿಳಿಸಿದೆ. ಈ ಫ್ಲಾಪಿ ಸೆಟ್‌ಗೆ 5,000 ರು. ಆಗಲಿದ್ದು, ಜೂನ್‌ 2001ರೊಳಗೆ ಮಾರುಕಟ್ಟೆಗೆ ಬರಲಿದೆ. (ಯು.ಎನ್‌.ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+