Get Updates
Get notified of breaking news, exclusive insights, and must-see stories!

ಟೆಕ್ನಾಲಜಿಕಲ್‌ ಸ್ಟಾರ್ಟ್‌ಅಪ್ಸ್‌ : ಕೆನರಾಬ್ಯಾಂಕ್‌-ಮ್ಯಾನ್‌ಹಠನ್‌ ಒಪ್ಪಂದ

ಬೆಂಗಳೂರು : ಕೆನರಾಬ್ಯಾಂಕ್‌ನ ವೆಂಚರ್‌ ಕ್ಯಾಪಿಟಲ್‌ ವಿಭಾಗವು ಭಾರತದಲ್ಲಿ ಟೆಕ್ನಾಲಜಿಕಲ್‌ ಸ್ಟಾರ್ಟ್‌ಅಪ್ಸ್‌ಗಳಿಗೆ ಅರ್ಥಿಕ ನೆರವು ನೀಡುವ 25 ದಶಲಕ್ಷ ಡಾಲರ್‌ ಉದ್ದೇಶಿತ ಯೋಜನೆಗೆ ಅಮೆರಿಕದ ಚೇಸ್‌ ಮ್ಯಾನ್‌ಹಠನ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಈ ಹಿಂದಿನ ಮೂರು ಆರ್ಥಿಕ ನೆರವು ಯೋಜನೆಗಳೂ ಯಶಸ್ವಿಯಾಗಿದ್ದು, ನಾಲ್ಕನೇ ಹಂತದ ಯೋಜನೆಗೆ ಪ್ರೋತ್ಸಾಹ ನೀಡಿದೆ. ಈ ವಿಷಯವನ್ನು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಆರ್‌.ಜೆ. ಕಾಮತ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬ್ಯಾಂಕ್‌ ಕಳೆದ ವರ್ಷ 11 ಸಾವಿರ ಕೋಟಿ ರುಪಾಯಿಗಳ ಠೇವಣಿ ಸಂಗ್ರಹಿಸಿ ಶೇ. 23ರಷ್ಟು ಪ್ರಗತಿ ಸಾಧಿಸಿದೆ ಎಂದೂ ಅವರು ಹೇಳಿದರು.

ಬ್ಯಾಂಕಿನ 95 ವರ್ಷಗಳ ಸುದೀರ್ಘ ಇತಿಹಾಸದಲ್ಲಿಯೇ ಅತಿ ಹೆಚ್ಚು ಠೇವಣಿ ಸಂಗ್ರಹ ಇದಾಗಿದೆ ಎಂದು ಅವರು ಹೇಳಿದರು. ಮಾರ್ಚ್‌ 31ಕ್ಕೆ ಕೊನೆಗೊಂಡ ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ ಒಟ್ಟು 87 ಸಾವಿರ ಕೋಟಿ ರುಪಾಯಿ ವಹಿವಾಟು ನಡೆಸಿ, ಶೇ. 21ರಷ್ಟು ಪ್ರಗತಿ ಸಾಧಿಸಿದೆ. ಬ್ಯಾಂಕ್‌ನ ವಿದೇಶೀ ವ್ಯವಹಾರ ಮಾರ್ಚ್‌ ಅಂತ್ಯಕ್ಕೆ 60 ಸಾವಿರ ಕೋಟಿ ರುಪಾಯಿಗಳಾಗಿತ್ತು ಎಂದೂ ಕಾಮತ್‌ ತಿಳಿಸಿದರು.

ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ 4 ಸಾವಿರದ 500 ಕೋಟಿ ರುಪಾಯಿ ಸಾಲ ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಸ್ವಯಂ ನಿವೃತ್ತಿ ಯೋಜನೆಯ ಅಡಿಯಲ್ಲಿ 8000 ಬ್ಯಾಂಕ್‌ ನೌಕರರು ನಿವೃತ್ತರಾಗುತ್ತಿದ್ದಾರೆ. ಬ್ಯಾಂಕ್‌ 2,404 ಶಾಖೆಗಳನ್ನು ಹೊಂದಿದ್ದು, ಇದರಲ್ಲಿ 173 ವಿಶೇಷ ಬ್ರಾಂಚ್‌ಗಳಿವೆ ಎಂದೂ ಅವರು ಹೇಳಿದರು.

ನೂರು ಕೋಟಿ ರುಪಾಯಿ ಸಂಗ್ರಹದ ಉದ್ದೇಶದೊಂದಿಗೆ ಬ್ಯಾಂಕ್‌ ಬರುವ ನವೆಂಬರ್‌ 15ರೊಳಗೆ ಷೇರು ಮಾರುಕಟ್ಟೆ ಪ್ರವೇಶಿಸಲಿದೆ ಎಂದೂ ಅವರು ಹೇಳಿದರು. (ಯು.ಎನ್‌.ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+