ತೆರೆದ ದೇಶೀ ಮಾರುಕಟ್ಟೆಯ ದಿಡ್ಡಿ ಬಾಗಿಲು, ಮುಕ್ತ ಆಮದಿಗೆ ಅಸ್ತು
ನವದೆಹಲಿ : ವಿಶ್ವ ವಾಣಿಜ್ಯ ನಿಯಮದನುಸಾರ ವಿದೇಶಿ ವಸ್ತುಗಳಿಗೆ ಭಾರತದ ಮಾರುಕಟ್ಟೆಯನ್ನು ಮತ್ತಷ್ಟು ಮುಕ್ತಗೊಳಿಸುವ ಪ್ರಕ್ರಿಯೆಗೆ ವಾಜಪೇಯಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಮುಂದಾಗಿದ್ದು , ಏಪ್ರಿಲ್ 1 ರ ಭಾನುವಾರದಿಂದ 715 ವಸ್ತುಗಳ ಮೇಲಿನ ಎಲ್ಲಾ ರೀತಿಯ ಆಮದು ನಿರ್ಬಂಧಗಳನ್ನು ಕಿತ್ತು ಹಾಕಿದೆ.
ಭಾನುವಾರದಿಂದಲೇ ಹೊಸ ಆಮದು ನೀತಿ ಜಾರಿಗೆ ಬರುತ್ತಿದೆ. ಇದರಿಂದಾಗಿ ಭಾರತ ಕೋಟಾ ರಾಜ್ ಸಂಸ್ಕೃತಿಗೆ ವಿದಾಯ ಹೇಳುತ್ತಿದ್ದು , ಮುಕ್ತ ಆಮದು ನೀತಿಯನ್ನು ಸ್ವಾಗತಿಸುತ್ತಿದೆ ಹಾಗೂ ಇತರ ಪ್ರಮುಖ ರಾಷ್ಟ್ರಗಳ ಸಾಲಿಗೆ ದೇಶ ಸೇರುತ್ತಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಮುರಸೋಳಿ ಮಾರನ್ ಶನಿವಾರ ಪ್ರಕಟಿಸಿದ್ದಾರೆ.
ಹೊಸ ನೀತಿಯ ಅನ್ವಯ ಆಲೂಗೆಡ್ಡೆ , ತೆಂಗಿನಕಾಯಿ, ಹಣ್ಣು - ತರಕಾರಿ, ಟಿ.ವಿ, ಕಾರ್ಪೆಟ್, ಸಿದ್ಧ ಉಡುಪು, ಕಾರುಗಳು ಸೇರಿದಂತೆ ಸಾಮಾನ್ಯನಿಂದ ಶ್ರೀಮಂತರವರೆಗಿನ ಬಳಕೆಯ ವಸ್ತುಗಳು ದೇಶೀಯ ಮಾರುಕಟ್ಟೆಯನ್ನು ಅಪ್ಪಳಿಸಿವೆ. ಆದರೆ, ದೇಶೀ ಮಾರುಕಟ್ಟೆ ಹಾಗೂ ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳಿಗೆ ಮುಕ್ತ ಆಮದು ನೀತಿಯಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಮಾರನ್ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಪ್ರಕಟಿಸಿರುವ ಆಮದು ನೀತಿ ದೇಶೀಯ ಉತ್ಪನ್ನಗಳ ರಫ್ತಿಗೂ ಅನುಕೂಲಕಾರಿಯಾಗಿದೆ. 2005 ರ ಹೊತ್ತಿಗೆ ಕೃಷಿ, ಆರ್ಥಿಕ ವಲಯಗಳನ್ನು ಸೃಷ್ಟಿಸುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಶೇ. 1 ರ ಪಾಲನ್ನು ಭಾರತ ಹೊಂದುವುದು ಇದರಿಂದ ಸಾಧ್ಯವಾಗಲಿದೆ ಎಂದು ಮಾರನ್ ಪ್ರತಿಪಾದಿಸಿದ್ದಾರೆ.
ರಕ್ಷಣೆ ವಸ್ತುಗಳಿಗೂ ತೆರೆದ ಬಾಗಿಲು : ರಕ್ಷಣೆ, ಆರೋಗ್ಯ ಮತ್ತಿತರ ಸೂಕ್ಷ್ಮ ವಲಯಗಳ ವಸ್ತುಗಳ ಆಮದಿನ ಮೇಲಿನ ನಿರ್ಬಂಧವೂ ಇದರಿಂದ ರದ್ದಾಗಲಿದೆ. ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾ, ತನೀಸಿಯಾಗಳನ್ನು ಹೊರತುಪಡಿಸಿ ವಿಶ್ವದ ಎಲ್ಲಾ ರಾಷ್ಟ್ರಗಳು ಮುಕ್ತ ಆಮದು ನೀತಿಯನ್ನು ಒಪ್ಪಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಮುಕ್ತ ಆಮದು ನೀತಿ ಪ್ರಕಟಿಸಿದ್ದರೂ ರಾಗಿ, ಜೋಳ, ಸಜ್ಜೆ , ಹಳದಿ ಧಾನ್ಯಗಳು, ಮಸ್ಲಿನ್ ಬಟ್ಟೆ , ಚಿಕ್ಕಗೋಧಿ, ತೋಕೆ ಗೋಧಿ, ರಕ್ಷಿತ ಪ್ರಾಣಿಗಳ ಮಾಂಸದ ವಸ್ತುಗಳ ಮೇಲೆ ಪರಿಣಾಮಾತ್ಮಕತ ನಿರ್ಬಂಧವನ್ನು ಕೇಂದ್ರ ಸರ್ಕಾರ ಉಳಿಸಿಕೊಂಡಿದೆ.
ಕೇಂದ್ರ ಸರ್ಕಾರ ನಿರ್ಬಂಧ ಮುಕ್ತ ಗೊಳಿಸಿರುವ ಕೆಲವು ವಸ್ತುಗಳು ಇಂತಿವೆ -
ಕಾಫಿ, ವಿದ್ಯುದ್ದೀಪ, ಟೂಥ್‌ಬ್ರಷ್, ಷೇವಿಂಗ್ ಬ್ರಷ್, ಬಾಸುಮತಿ ಅಕ್ಕಿ , ಅಕ್ಕಿ ನುಚ್ಚು , ಕೆಂಪು ಅಕ್ಕಿ, ಬೆಣ್ಣೆ, ದ್ರವೀಕೃತ ಬೆಣ್ಣೆ , ತಾಜಾ ಗಿಣ್ಣು , ಘನೀಕೃತ ಗಿಣ್ಣು - ಮೊಸರು, ಡೈರಿ ಉತ್ಪನ್ನಗಳು, ಮಕ್ಕಳ ಬಳಕೆಯ ಕ್ಷೀರೋತ್ಪನ್ನಗಳು, ಕುರಿ ಮಾಂಸ, ಕೋಳಿ ಮಾಂಸ, ಟರ್ಕಿ ಕೋಳಿ ಮಾಂಸ, ಏಲಕ್ಕಿ , ಕೋಳಿ ಹಾಗೂ ವಿವಿಧ ಪಕ್ಷಿಗಳ ಮೊಟ್ಟೆ ಹಾಗೂ ಕೋಶ, ಆಲೂಗಡ್ಡೆ , ಹೂಕೋಸು, ಎಲೆ ಕೋಸು, ಮೂಲಂಗಿ, ತಾಜಾ ಹಾಗೂ ಒಣ ಕಿತ್ತಳೆ, ಕೊಬ್ಬರಿ ಎಣ್ಣೆ , ತೆಂಗಿನಕಾಯಿ, ಕೊಬ್ಬರಿ, ಗೋಟಡಕೆ, ಸುಲಿದ ಅಡಿಕೆ, ಲವಂಗ, ಚಕ್ಕೆ , ಪಲಾವು ಎಲೆ, ಮಾಲ್ಟ್ ಬೀರ್, ವೈಟ್ ವೈನ್, ಷೆರ್ರಿ, ಷಾಯಿ, ವಿಸ್ಕಿ, ರಮ್, ಓಡ್ಕಾ, ಫೌಂಟೆನ್ ಪೆನ್, ಮೇಣದ ಬತ್ತಿ , ಅಗರಬತ್ತಿ , ಡಿಸ್ಟೆಂಪರ್, ಬಣ್ಣ , ಗಡಿಯಾರ, ಮಕ್ಕಳ ಆಟಿಕೆ, ಶೌಚಾಲಯ ಸಾಮಗ್ರಿ, ಪೆಟ್ರೋಲ್, ಡೀಸೆಲ್, ವಿಮಾನ ಟರ್ಬೈನ್ ತೈಲ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications