Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಬೆಳಿಗ್ಗೆ ಲೇಟಾಗಿ ಎದ್ದು ಎಲ್ಲ ಕೆಲಸ ಕಾರ್ಯಗಳಲ್ಲೂ ಹಿಂದೆ ಬೀಳುತ್ತೀರಿ. ನೆಂಟರಿಷ್ಟರ ಆತ್ಮೀಯತೆಗಳೂ ಕಿರಿ ಎನಿಸಬಹುದು. ಕೈ ತುಂಬಾ ಕೆಲಸವಿರುವಾಗ ಹರಟೆ ಹೊಡೆಯುವುದು ಹೇಗೆ ಅಲ್ವೇ ?

ವೃಷಭ : ಸಂಗಾತಿಯಾಂದಿಗೆ ಹದಗೆಟ್ಟ ಸಂಬಂಧಗಳನ್ನು ಸರಿಪಡಿಸಿಕೊಳ್ಳಲು ಹೆಣಗಾಡಿದರೂ ಇವತ್ತು ನಿಮಗೆ ಅಂತಹ ಯಶಸ್ಸೇನೂ ಇಲ್ಲ. ಆದರೆ ಮಕ್ಕಳ ಸಹವಾಸದಿಂದ ಖುಷಿಯಾಗಿರುತ್ತೀರಿ.

ಮಿಥುನ : ಇತರರಿಗೆ ತೊಂದರೆ ಕೊಡುವುದೇ ನಿಮ್ಮ ಜನ್ಮ ಸಿದ್ಧ ಹಕ್ಕು ಎಂಬಂತೆ ವರ್ತಿಸುವುದು ತರವಲ್ಲ. ಸದ್ಯದಲ್ಲಿಯೇ ಪ್ರಯಾಣ ಯೋಗವಿದೆ.

ಕಟಕ : ಬರೀ ಮಾತುಗಳಿಂದ ಏನೂ ನಡೆಯುವುದಿಲ್ಲ. ಕನಸುಗಳೆಲ್ಲ ಮನಸ್ಸಿನಲ್ಲಿ ಇದ್ದರೇ ಚೆನ್ನ. ಕಿರುಚುವುದರಿಂದ ಕೆಟ್ಟವರೆನಿಸಿಕೊಳ್ಳುತ್ತೀರಿ.

ಸಿಂಹ : ಸಾಲಗಾರರ ಕಜ್ಞಟ ಎಂದು ಮುಖ ತಿರುಗಿಸಿದರೆ ನೆಮ್ಮದಿ ಸಿಗವುದಿಲ್ಲ ತಾನೇ ? ಆದ್ದರಿಂದ ಆಕಡೆ ಹೆಚ್ಚಿನ ಧ್ಯಾನವಿದ್ದರೆ ಸದ್ಯದಲ್ಲಿಯೇ ಮನೆಯವರೆಲ್ಲರೂ ನೆಮ್ಮದಿಯಾಗಿರುತ್ತೀರಿ.

ಕನ್ಯಾ : ಇವತ್ತು ಸಂಜೆ ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ ಅಂತ ಕಿಸೆಯ ಕಡೆಗೆ ಹೆಚ್ಚಿನ ಗಮನ ಬೇಡ. ಧನವಿಯೋಗವನ್ನು ತಪ್ಪಿಸುವಂತಿಲ್ಲ.

ತುಲಾ : ಗಂಟಲು ಬೇನೆಯ ತೊಂದರೆಯಿಂದ ಮುಕ್ತರಾಗಬೇಕಿದ್ದರೆ ಐಸ್‌ ಕ್ರೀಂ, ಖಾರಾಗಳನ್ನೆಲ್ಲ ದೂರವಿಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಚಿಕಿತ್ಸೆಗಿಂತ ಕಾಳಜಿ ಅಗತ್ಯ.

ವೃಶ್ಚಿಕ : ಇವತ್ತೆಲ್ಲಾ ಖುಷಿಯಾಗಿರುತ್ತೀರಿ. ಕೈ ತುಂಬಾ ಕೆಲಸವಿದ್ದರೂ ದಿನವೆಲ್ಲ ಚೆನ್ನಾಗಿರುತ್ತದೆ. ಮತ್ತೆ ತಿಂಗಳ ಕೊನೆಯ ಪಾಡು ಮುಗಿಯಿತಲ್ಲ ಎಂಬ ನೆಮ್ಮದಿ ಬೇರೆ.

ಧನಸ್ಸು :ಕ್ಷಣ ಚಿತ್ತ ಕ್ಷಣ ಪಿತ್ತ ಅನ್ನುವ ವರ್ತನೆಗಳಿರುವ ಸ್ನೇಹಿತರ ಹತ್ತಿರ ವ್ಯವಹರಿಸಲು ಕಷ್ಟಪಟ್ಟು ಸೋಲುತ್ತೀರಿ. ಅವರ ನಿರೀಕ್ಷೆಗಳನ್ನು ಪೂರೈಸುವುದು ನಿಮ್ಮಿಂದ ಸಾಧ್ಯವಾಗುವುದಿಲ್ಲ.

ಮಕರ : ಹಣ ಲೆಕ್ಕಾಚಾರಗಳ ಉಸಾಬಾರಿಯನ್ನು ಬಿಟ್ಟು ತುಂಬಾ ದಿನಗಳಾಗಿರುವುದರಿಂದ ಜೋಪಾನವಾಗಿರುವುದು ಅಗತ್ಯ. ಬಾಕಿ ಉಳಿಸಿಕೊಂಡಿರುವ ಕೆಲಸಗಳು ತುಂಬಾ ಇವೆಯಲ್ಲವೇ ?

ಕುಂಭ : ದುಂಧು ವೆಚ್ಚ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಮಕ್ಕಳು ನಿಮಗೆ ತುಂಬಾ ಇಷ್ಟವಾದ ಸುದ್ದಿ ಹೊತ್ತು ತರುತ್ತಾರೆ.

ಮೀನ : ತಾಂತ್ರಿಕ ಕ್ಷೇತ್ರದಲ್ಲಿ ನೀವು ಮುನ್ನಡೆಯುತ್ತೀರಿ. ಆದ್ದರಿಂದ ಇವತ್ತು ಸೃಜನ ಶೀಲ ಕೆಲಸಗಳತ್ತ ಗಮನ ಸ್ವಲ್ಪ ಕಡಿಮೆಯಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+