Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಬಹುದಿನಗಳಿಂದ ನೀವು ನಡೆಸಿರುವ ಕೆಲಸದ ಬೇಟೆ ಇವತ್ತು ಸಿಕ್ಕಲಿದೆ. ಅದು ನಿಮ್ಮ ಸ್ವಪ್ರತಿಭೆಯಿಂದಲ್ಲ, ಆಪ್ತರೊಬ್ಬರ ನೆರವಿನಿಂದ.

ವೃಷಭ :ನೀವು ಅಭ್ಯಾಗತರಾಗಿ ಎಲ್ಲಿಗೆ ಹೋದರೂ ಅಲ್ಲಿ ಭಾರೀ ಭೋಜನ ನಿಮಗಾಗಿ ಕಾದಿರುತ್ತದೆ. ಇವತ್ತು ಎರಡು ಮೂರು ಸರ್‌ಪ್ರೆೃಸ್‌ಗಳು ನಿಮಗೆ ಕಾದಿವೆ.

ಮಿಥುನ : ಕಲೆ- ಕುಸುರಿಯಲ್ಲಿ ನಿಮಗಿರುವ ಅತೀವ ಆಸಕ್ತಿ ಇಂದು ಕೃತಿಯಾಗಿ ಹೊಮ್ಮಲಿದೆ. ಇದೇ ಟಚ್ಚನ್ನು ಎಡಬಿಡದೆ ಇಟ್ಟುಕೊಂಡಲ್ಲಿ ಮುಂದೆ ಪ್ರಶಸ್ತಿ ದಕ್ಕಿಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆಯುತ್ತೀರಿ.

ಕಟಕ : ಬಹು ದಿನಗಳಿಂದ ಗೆಳೆಯರನ್ನು ಭೇಟಿಯಾಗದೆ ಅವರ ಬೈಗುಳಕ್ಕೆ ತುತ್ತಾಗಿದ್ದ ನೀವು ಇವತ್ತು ಅವರೊಡನೆ ಕಳೆಯುವ ಕ್ಷಣಗಳು ಮಧುರ.

ಸಿಂಹ : ಮನದಲ್ಲಿ ತುಡಿಯುತ್ತಿರುವ ಯಾವುದೋ ಯೋಜನೆಗೆ ಇಂದು ಚಾಲನೆ. ಹಲವು ದಿನಗಳಿಂದ ಕಥೆ ಬರೆಯಲು ತಡಕಾಡುತ್ತಿರುವ ನೀವು ಇವತ್ತು ಒಂದೇ ಉಸಿರಲ್ಲಿ ಕಥೆ ಹೆಣೆಯುತ್ತೀರಿ.

ಕನ್ಯಾ : ಸಂಶೋಧನೆಯಲ್ಲಿ ಹೊಸ ಮಜಲನ್ನು ಕಾಣುವ ದಿನವದು. ಆಕಾಶಕ್ಕಿನ್ನು ಮೂರೇ ಗೇಣು. ಶುಭಾಶಯಗಳು.

ತುಲಾ : ಕ್ರೀಡೆಯಲ್ಲಿ ನಿಮಗೆ ಅದೃಷ್ಟ ಖುಲಾಯಿಸಲಿದೆ. ಮೊದಲ ಮೆಟ್ಟಿಲೇರಲು ಇಷ್ಟು ದಿನಬೇಕಾಯಿತು. ಮುಂದಿನ ದಿನಗಳು ನಿಮ್ಮವೇ, ಚಿಂತೆಬೇಡ.

ವೃಶ್ಚಿಕ : ನೌಕರಿಯಲ್ಲಿ ಈಗಲೋ ಆಗಲೋ ಬಡ್ತಿ ಸಿಕ್ಕೇ ಸಿಗುತ್ತದೆ. ಹಾಗಂತ ಈಗಿನ ಆಲಸ್ಯವನ್ನೇ ಮುಂದುವರೆಸಬೇಡಿ. ಕೆಲಸದಲ್ಲಿ ತದೇಕಚಿತ್ತತೆ ಕಾಪಿಟ್ಟುಕೊಳ್ಳಿ.

ಧನಸ್ಸು : ಸೃಜನಶೀಲತೆ ಲೀಲಾಜಾಲವಾಗಿ ಹೊಮ್ಮಲಿದೆ. ನೃತ್ಯದ ಪರೀಕ್ಷೆಯಲ್ಲಿ ನೀವು ಫಸ್ಟ್‌ಕ್ಲಾಸಲ್ಲಿ ಪಾಸು. ಈ ಹಾದಿಯಲ್ಲಿ ಕೆಲವು ಎಡರುಗಳಿವೆ. ಗಮನಿಸಿ, ಹೆಜ್ಜೆ ಹಾಕಿ.

ಮಕರ : ಮನಸ್ಸಿನ ಪೆಂಡ್ಯುಲಮ್‌ ಚಲನೆ ನಿಯಮಿತವಾಗಲಿದೆ. ಪರಿಣಾಮ ನಿಮ್ಮ ವ್ಯಾಪಾರದಲ್ಲಿ ಸಾಕಷ್ಟು ಹಣ ಕೈಹತ್ತಲಿದೆ.

ಕುಂಭ : ನಿಮ್ಮ ರಚನಾತ್ಮಕ ಕೆಲಸಕ್ಕೆ ಪ್ರತಿಭಾನ್ವಿತ ಹಿರೀಕರೊಬ್ಬರಿಂದ ಶಹಭಾಸ್‌ಗಿರಿ. ಉತ್ತಮ ಸಲಹೆಗಳು, ಆರೋಗ್ಯಕರ ಹರಟೆ.

ಮೀನ : ಇಂದಿನ ಸಂಜೆ ನಿಮ್ಮದೇ. ಪಾರ್ಕು, ಹರಟೆ, ಡ್ಯಾನ್ಸು, ಐಸ್‌ ಕ್ರೀಮು, ತರಲೆ, ಪುಂಡಾಟ ದಿನವಿಡೀ ಮಜವೋ ಮಜ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+