ಗಲ್ಲ ಊದಿಸಿಕೊಂಡಿರುವ ದ್ರಾವಿಡ್ ಮೂರನೇಪಂದ್ಯಕ್ಕೆ ಅನುಮಾನ
ಪುಣೆ : ಗಲ್ಲಕ್ಕೆ ಪೆಟ್ಟು ಮಾಡಿಕೊಂಡಿರುವ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್, ಕಲಾತ್ಮಕ ಹೊಡೆತಗಳ ಆಟಗಾರ ರಾಹುಲ್ ದ್ರಾವಿಡ್ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಸೀಮಿತ ಓವರ್ಗಳ ಪಂದ್ಯದಲ್ಲಿ ಆಡುವುದು ಅನುಮಾನ .
ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾಕ್ಕೆ ಬಿಟ್ಟುಕೊಟ್ಟಿರುವ ಭಾರತ, ಮಾರ್ಚ್ 31 ರ ಶನಿವಾರ ಇಂದೋರ್ನಲ್ಲಿ ನಡೆಯುವ ಪಂದ್ಯದ ಮೂಲಕ ಮತ್ತೆ ಮುನ್ನಡೆ ಪಡೆಯಲು ತಹತಹಿಸುತ್ತಿದ್ದು , ಉತ್ತಮ ಫಾರ್ಮ್ನಲ್ಲಿರುವ ದ್ರಾವಿಡ್ ಆಡದಿದ್ದರೆ ತಂಡದ ಆತ್ಮ ವಿಶ್ವಾಸಕ್ಕೆ ಪೆಟ್ಟು ಬೀಳುವುದು ಖಚಿತ.
ಬುಧವಾರ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ದ್ರಾವಿಡ್ ಗಾಯಗೊಂಡಿದ್ದು ಅವರ ಗಲ್ಲ ಊದಿಕೊಂಡಿದೆ. ಅವರನ್ನು ತೀವ್ರ ನಿಗಾದಲ್ಲಿ ಇಡಲಾಗಿದ್ದು , ಊತ ಇಳಿಯದಿದ್ದಲ್ಲಿ ಶನಿವಾರದ ಪಂದ್ಯದಲ್ಲಿ ದ್ರಾವಿಡ್ ಕೇವಲ ಪ್ರೇಕ್ಷಕರಾಗಿರುತ್ತಾರೆ ಎಂದು ತಂಡದ ಕೋಚ್ ಜಾನ್ ರೈಟ್ ತಿಳಿಸಿದ್ದಾರೆ.
ಮೊದಲ ಪಂದ್ಯದ ಗೆಲುವಿನ ರೂವಾರಿ ವೀರೇಂದ್ರ ಶೆಹ್ವಾಗ್ ಸೇವೆಯನ್ನು ಕಳಕೊಂಡಿರುವ ಭಾರತ ತಂಡವೀಗ ದ್ರಾವಿಡ್ ಸೇವೆ ಕಳಕೊಳ್ಳುವ ಆತಂಕ ಎದುರಿಸುತ್ತಿರುವುದರಿಂದ, ದ್ರಾವಿಡ್ ಬದಲಿಗೆ ಯಾರನ್ನು ಆಡಿಸಬೇಕೆಂದು ತಂಡದ ಚಿಂತಕರ ಚಾವಡಿ ತಲೆ ಕೆಡಿಸಿಕೊಳ್ಳುತ್ತಿದೆ. ಬದಲಾಗಿ ಮತ್ತೆ ಗೆಲುವಿನ ಲಹರಿ ಕಂಡುಕೊಂಡಿರುವ ಕಾಂಗರೂಗಳು ತಮ್ಮ ವಿಜಯೋತ್ಸವ ಮುಂದುವರಿಸುವ ಹುಮ್ಮಸ್ಸಿನಲ್ಲಿದ್ದಾರೆ.
(ಪಿಟಿಐ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications