Get Updates
Get notified of breaking news, exclusive insights, and must-see stories!

ಶೇ.4ರಷ್ಟು ತೆರಿಗೆ ವಿರೋಧಿಸಿ ಶುಕ್ರವಾರ ಪುಸ್ತಕ ಮಳಿಗೆ ಬಂದ್‌

ಬೆಂಗಳೂರು : ಪುಸ್ತಕಗಳಿಗೆ ಶೇ. 4 ರಷ್ಟು ತೆರಿಗೆ ವಿಧಿಸುವ ಸರ್ಕಾರದ ನಿರ್ಧಾರವನ್ನು

ಕೆಟ್ಟ ಸಂಸ್ಕೃತಿ ಎಂದು ಕನ್ನಡ ಸಾಹಿತಿಗಳು ಟೀಕಿಸಿದ್ದರೆ, ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ಸಾಹಿತಿಗಳು, ಲೇಖಕರು, ಪುಸ್ತಕ ಮಾರಾಟಗಾರರ ಹಾಗೂ ಪ್ರಕಾಶಕರ ಸಂಘಟನೆಗಳು ಶುಕ್ರವಾರ ರಾಜ್ಯಾದ್ಯಂತ ಪುಸ್ತಕ ಮಳಿಗೆ ಬಂದ್‌ ಮಾಡುವ ನಿರ್ಧಾರ ಕೈಗೊಂಡಿವೆ.

ಈ ಸಂಬಂಧ ರಾಜ್ಯದ ಎಲ್ಲ ಪುಸ್ತಕ ಅಂಗಡಿಗಳನ್ನು ಶುಕ್ರವಾರ ಮುಚ್ಚುವಂತೆ ಕರೆ ನೀಡಿವೆ. ಜಿಲ್ಲಾ ಕೇಂದ್ರಗಳಲ್ಲಿ ಪುಸ್ತಕ ಮುದ್ರಣ, ಮಾರಾಟ ಚಟುವಟಿಕೆ ನಿಲ್ಲಿಸಿ, ಪ್ರತಿಭಟನಾ ಸಭೆ ಹಾಗೂ ಮೆರವಣಿಗೆ ನಡೆಸುವಂತೆ ಸಹ ಕರೆ ನೀಡಲಾಗಿದೆ.

ಹಿರಿಯ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ, ಕೊ. ಚನ್ನಬಸಪ್ಪ, ಜಿ. ನಾರಾಯಣ, ಪ್ರೊ. ಜಿ. ವೆಂಕಟಸುಬ್ಬಯ್ಯ, ಡಾ. ಎಲ್‌.ಎಸ್‌. ಶೇಷಗಿರಿರಾವ್‌, ಡಾ. ಸುಮತೀಂದ್ರ ನಾಡಿಗ, ಡಾ. ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್‌ ಮೊದಲಾದವರು ಈ ವಿಷಯವನ್ನು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನಲ್ಲೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಭೆ ನಡೆಯಲಿದೆ. ಆನಂತರ ಬೃಹತ್‌ ಮೆರವಣಿಗೆಯಲ್ಲಿ ತೆರಳಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮವೂ ಇದೆ. ಮುಖ್ಯಮಂತ್ರಿಗಳು ತಮ್ಮ ನಿಲವು ಬದಲಿಸದಿದ್ದರೆ, ಪುಸ್ತಕೋದ್ಯಮ ನೆರೆರಾಜ್ಯಕ್ಕೆ ವಲಸೆ ಹೋಗುವ ಅಪಾಯವೂ ಇದೆ ಎಂದು ಸಾಹಿತಿಗಳು ಅಭಿಪ್ರಾಯಪಟ್ಟರು.

(ಇನ್‌ಫೊ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+