ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಮಗ ಅಕ್ಷರಶಃ ಮುಗ್ಧ - ಅನ್ನುತ್ತಾರೆ ಜಡೇಜಾ ಅಪ್ಪ

By Staff
|
Google Oneindia Kannada News

*ಸುರೇಶ್‌ ಪಾರೇಕ್‌ಅಜಯ್‌ ಜಡೇಜ ಕ್ರಿಕೆಟ್‌ಗೆ ಇನ್ನು ಬಹುತೇಕ ಪೂರ್ಣ ವಿರಾಮ. ಆದರೆ ಅವರ ತಂದೆ ದೌಲತ್‌ ಸಿನ್ಹಜೀ ಜಡೇಜಾಗೆ ಮಗನ ಮೇಲೆ ಪೂರ್ಣ ವಿಶ್ವಾಸ. ಇಡೀ ಜಗತ್ತೇ ಈತನನ್ನು ಅನುಮಾನಿಸಿ ನೋಡಿದರೂ, ಅವರ ಪಾಲಿಗೆ ಈತ ಏನೂ ಅರಿಯದ ಮುಗ್ಧ. ಇತ್ತೀಚೆಗೆ ಅಪ್ಪ ಮಗ ಇಬ್ಬರೂ ಜಾಮ್‌ನಗರಕ್ಕೆ ಭೇಟಿ ನೀಡಿ, ಭೂಕಂಪದ ಹೊಡೆತಕ್ಕೆ ಸಿಲುಕಿ, ಬದುಕುಳಿದವರಿಗೆ ಸಾಂತ್ವನ ಹೇಳಿ ಬಂದಿದ್ದಾರೆ. ಕೈಲಾದ ಸಹಾಯ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಜಾಮ್‌ನಗರದ ತಮ್ಮ ಫ್ಲಾಟ್‌ನಲ್ಲಿ ದೌಲತ್‌ ಸಿನ್ಹಜೀ ಒಂದೆರಡು ತಾಸುಗಳ ಕಾಲ ಮನ ಬಿಚ್ಚಿ ಮಾತಾಡಿದರು...

  • ಮ್ಯಾಚ್‌ಫಿಕ್ಸಿಂಗ್‌ ಆರೋಪಿಗಳ ಪಟ್ಟಿಯಲ್ಲಿ ನಿಮ್ಮ ಮಗನ ಹೆಸರು ಸೇರಿಸಿರೋದು ನಿಮಗೆ ಬೇಸರವಾಗಿದೆಯೇ?
    ಸಿನ್ಹಜೀ - ಖಂಡಿತ ಬೇಸರವಾಗಿದೆ. ಯಾವ ತಪ್ಪೂ ಮಾಡದ ನನ್ನ ಮಗನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಆತ ಯಾವುದೇ ಕಳ್ಳಾಟದಲ್ಲೂ ಭಾಗಿಯಾಗಿಲ್ಲ ಎಂಬುದು ನನ್ನ ಬಲವಾದ ನಂಬುಗೆ.
  • ಆದರೆ, ನಿಮ್ಮ ಮಗನ ಮೊಬೈಲಿಗೆ ಒಂದೇ ದಿನ ಬುಕ್ಕಿಯಿಂದ 50- 60 ಕರೆಗಳು ಬಂದಿವೆ ಎಂದು ಸಿಬಿಐ ವರದಿ ಹೇಳಿದೆಯಲ್ಲಾ ?
    ಸಿನ್ಹಜೀ - ಬಂದಿರೋದು ನಿಜ. ಆದರೆ ನನ್ನ ಮಗ ಉತ್ತರ ಕೊಟ್ಟಿರೋದು ಎರಡೋ ಮೂರೋ ಕರೆಗಳಿಗೆ. ಅದೂ ತಾವು ರಾಂಗ್‌ ನಂಬರ್‌ಗೆ ಫೋನಾಯಿಸುತ್ತಿದ್ದೀರಿ ಎಂದು ತಿಳಿಸಲು. ಇಲ್ಲವಾದರೆ ಒಂದೇ ದಿನ 50- 60 ಕರೆಗಳು ಒಬ್ಬನೇ ವ್ಯಕ್ತಿಯಿಂದ ನನ್ನ ಮಗನ ಮೊಬೈಲಿಗೆ ಬರುವುದಾದರೂ ಏಕೆ ಹೇಳಿ?!
  • ಕ್ರಿಕೆಟಿಗರು ಯಾವ ಬುಕ್ಕಿಗಳೊಂದಿಗೂ ಸಂಪರ್ಕ ಇಟ್ಟುಕೊಂಡಿಲ್ಲ ಎಂಬುದು ನಿಮ್ಮ ವಾದವೇ?
    ಸಿನ್ಹಜೀ - ಇಲ್ಲ, ನಾನು ಹಾಗನ್ನಲಿಲ್ಲ. ಬುಕ್ಕಿಗಳಿಗೆ ಕ್ರಿಕೆಟಿಗರು ಗೊತ್ತು ಅನ್ನುವುದು ಈಗ ಜಗಜ್ಜಾಹೀರು.
  • ಅಜಯ್‌ ಮೇಲೆ ಬಿಸಿಸಿಐ ಹೇರಿರುವ ನಿಷೇಧದ ಬಗ್ಗೆ ನೀವೇನನ್ನುತ್ತೀರಿ?
    ಸಿನ್ಹಜೀ - ನನ್ನ ಮಗ ಮೋಸದಾಟ ಆಡಿಲ್ಲ ಅಂದ ಮೇಲೆ ನಿಷೇಧ ಹೇರಿರುವುದು ಸರಿಯಿಲ್ಲ. ಮಾಧವನ್‌ ವರದಿ ಕೂಡ ಸರಿಯಿಲ್ಲ. ಮಾಧವನ್‌ ಸಮಿತಿಯಲ್ಲಿ ಮೂವರು ಸದಸ್ಯರಿದ್ದರು. ಆದರೆ ವರದಿ ಸಿದ್ಧಪಡಿಸಿ, ಅದನ್ನು ಮಂಡಿಸಿದ್ದು ಇಬ್ಬರೇ. ಇನ್ನೊಬ್ಬರು ವರದಿಯ ಅಂಶಗಳಿಗೆ ಒಪ್ಪಿಗೆ ಕೊಟ್ಟರೋ ಇಲ್ಲವೋ ಎಂಬುದು ಇನ್ನೂ ಒಗಟಾಗೇ ಉಳಿದಿದೆ.
  • ತಮ್ಮ ಮೇಲಿನ ನಿಷೇಧ ಹೇರಿಕೆ ಪ್ರಶ್ನಿಸಿ ಅಜಯ್‌ ಕೋರ್ಟಿನ ಕಟಕಟೆ ಹತ್ತಿರುವುದಕ್ಕೆ ನೀವೇನಂತೀರಿ?
    ಸಿನ್ಹಜೀ - ತಾನು ತಪ್ಪಿತಸ್ಥ ಅಲ್ಲ ಅನ್ನೋದನ್ನ ರುಜುವಾತು ಮಾಡಿ, ಜಗತ್ತಿಗೆ ತೋರಿಸೋದಕ್ಕೆ ನನ್ನ ಮಗ ಹೊರಟಿದ್ದಾನೆ. ಕಾನೂನು ಯುದ್ಧದಲ್ಲಿ ಆತ ಗೆದ್ದೇ ಗೆಲ್ಲುತ್ತಾನೆ.
  • ಅಜಯ್‌ ಯಾವಾಗಲಾದರೂ ಬೇಕಂತ ವಿಕೆಟ್‌ ಒಪ್ಪಿಸಿದ್ದಾರಾ ?
    ಸಿನ್ಹಜೀ - ಎಂದಿಗೂ ಇಲ್ಲ. ಹಿರಿಯ ಆಟಗಾರರು ವಿಫಲರಾದ ಎಷ್ಟೋ ಪಂದ್ಯಗಳಲ್ಲಿ ಈತ ಮೆರೆದಿದ್ದಾನೆ. ಎಷ್ಟೋ ಬಾರಿ ತಂಡಕ್ಕೆ ಗೆಲುವನ್ನೂ ತಂದಿತ್ತಿದ್ದಾನೆ. ಚಿಕ್ಕಂದಿನಿಂದಲೂ ಕ್ರಿಕೆಟ್ಟು ಆತನ ನೆಚ್ಚು. ಇಂಥಾ ಆಟಕ್ಕೆ ಅವ ಕನಸಲ್ಲೂ ಮೋಸ ಮಾಡಲಾರ.
  • ಅದಿತಿ ಜೈಟ್ಲಿ ಜೊತೆ ಜಡೇಜಾ ಮದುವೆ ಬಗ್ಗೆ ಏನಂತೀರಿ?
    ಸಿನ್ಹಜೀ - ಈಗ ಅವನು ಜೀವನದ ಸಾಕಷ್ಟು ಏರಿಳಿತ ಹಾದು ಬಂದಿದ್ದಾನೆ. ಮದುವೆ ಆಗಿ ನೆಲೆಯೂರಲು ಇದು ಸುಸಮಯ ಎಂದಷ್ಟೇ ನಾನು ಹೇಳಬಲ್ಲೆ.
  • ಈ ಮದುವೆ ನಡೆಯುತ್ತದೆಯಾ?
    ಸಿನ್ಹಜೀ - ಹೌದು, ನನಗೆ ಹಾಗನ್ನಿಸುತ್ತದೆ.
ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X