ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೀನ್‌ ಹೌಸ್‌ ಗ್ಯಾಸ್‌ಗಳ ಏರಿಕೆಯೂ ಈ ಅನುಭವಕ್ಕೆ ಕಾರಣ..

By Staff
|
Google Oneindia Kannada News

ವೈಜ್ಞಾನಿಕವಾಗಿ ಹೇಳಬೇಕೆಂದರೆ, ಗ್ರೀನ್‌ ಹೌಸ್‌ ಗ್ಯಾಸ್‌ಗಳ ಏರಿಕೆಯೂ ಈ ಅನುಭವಕ್ಕೆ ಕಾರಣವಾಗಿದೆ. ಅಲ್ಲದೆ ಇದು ಉಷ್ಣತೆಯ ಏರಿಕೆಯ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಕಾರ್ಬನ್‌ ಡೈ ಆಕ್ಸೈಡ್‌, ಮೀಥೇನ್‌, ನೈಟ್ರಸ್‌ ಆಕ್ಸೈಡ್‌ ಹೆಚ್ಚುವ ಕಾರಣ ಉಷ್ಣತೆ ಏರುತ್ತದೆ. ಈಗಿನ ಪ್ರಮಾಣದಲ್ಲೇ ಗ್ರೀನ್‌ಹೌಸ್‌ ಗ್ಯಾಸ್‌ಗಳ ಏರಿಕೆ ಆದ್ರೆ ಇನ್ನು 40 ವರ್ಷಗಳ ನಂತರ ಉಷ್ಣತೆಯ ಏರಿಕೆ ಪ್ರಮಾಣ 1.5 ಡಿಗ್ರಿ ಸೆಲ್ಸಿಯಸ್‌ ನಿಂದ 4.5 ಡಿಗ್ರಿ ಸೆಲ್ಸಿಯಸ್‌ ಏರುವ ಸಾಧ್ಯತೆಯೂ ಇದೆ. ಇದು ವಾಯುಗುಣದ ಅಧ್ಯಯನದಿಂದ ತಿಳಿದುಬಂದಿರುವ ಅಂಶ. ಒಂದು ನಿರ್ದಿಷ್ಟ ಪ್ರದೇಶದ ಅಲ್ಪಾವ-ಯ ವಾಯುಮಂಡಲದ ಪರಿಸ್ಥಿತಿಯನ್ನು ಅದರ ವಾಯು ಮಂಡಲದ ಮೂಲಾಂಶ, ಉಷ್ಣಾಂಶ, ಒತ್ತಡ, ಮಾರುತ, ಮೋಡಗಳು ಹಾಗೂ ಮಳೆಯ ಸರಾಸರಿಯ ಮೇಲೆ ನಿರ್ಧರಿಸುವುದೇ ಹವಾಮಾನ. ಈ ಹವಾಮಾನವನ್ನು ಒಂದು ಪ್ರದೇಶದಲ್ಲಿ ಒಂದು ದಿನ, ಒಂದು ವಾರ, ಹೆಚ್ಚೆಂದರೆ ಒಂದು ತಿಂಗಳ ಅವ-ಗೆ ನಿರ್ಧರಿಸಬಹುದು.

ಅಂತೆಯೇ ದೀರ್ಘಾವ-ಧಿಗೆ ಅಂದರೆ 30-35 ವರ್ಷಗಳ ಹವಾಮಾನದ ಸರಾಸರಿ ಅಥವಾ ಸಾಮಾನ್ಯ ಪರಿಸ್ಥಿತಿಯಿಂದ ನಿರ್ಧರಿಸುವುದನ್ನು ವಾಯುಗುಣ ಎನ್ನುತ್ತಾರೆ. ಒಂದು ಪ್ರದೇಶದ ವಾಯುಗುಣ ಸಮುದ್ರ ಮಟ್ಟದಿಂದ ಆ ಪ್ರದೇಶ ಇರುವ ಎತ್ತರ, ದೂರ, ಮಾರುತಗಳು ಬೀಸುವ ದಿಕ್ಕು - ವೇಗ, ಸಾಗರ ಪ್ರವಾಹ, ಭೂ ಮೇಲ್ಮೈಯನ್ನೆಲ್ಲ ಅವಲಂಬಿಸಿರುತ್ತದೆ. ಬಿಸಿಲ ಬೇಗೆ, ಸೆಕೆಯು ಹ್ಯುಮಿಡಿಟಿ ಅಂದರೆ ಆರ್ದ್ರತೆಯನ್ನೂ ಅವಲಂಬಿಸಿರುತ್ತದೆ.

ಸೂರ್ಯನ ಶಾಖದಿಂದ ನೀರು ಆವಿಯಾಗಿ ಮೋಡವಾಗಿ ಮಳೆ ಸುರಿಸುತ್ತದೆ ಅಲ್ಲವೆ? ಹಾಗೆ ಅನಿಲ ರೂಪದಲ್ಲಿ ವಾಯು ಮಂಡಲ ಹೊಂದಿದ ತೇವಾಂಶವೇ ಆರ್ದ್ರತೆ. ವಾಯು ಹೊಂದಿರುವ ವಾಸ್ತವ ನೀರಾವಿಗೆ ಸಮಗ್ರ ಆರ್ದ್ರತೆ ಎಂತಲೂ, ವಾಯು ಹೊಂದಿರುವ ಸಮಗ್ರ ಆರ್ದ್ರತೆ ಮತ್ತು ಅದೇ ಉಷ್ಣಾಂಶದಲ್ಲಿ ಹೊಂದಿರ ಬಹುದಾದ ಪರಮಾವ- ಆರ್ದ್ರತೆಯನ್ನು ಸಾಪೇಕ್ಷ ಆರ್ದ್ರತೆ ಎಂದೂ ಕರೆಯುತ್ತಾರೆ. ಅತಿಹೆಚ್ಚು ಉಷ್ಣತೆ ಅಳೆಯಲು ಪೈರೋ ಮೀಟರ್‌ ಎಂಬ ಉಪಕರಣ ಬಳಸುತ್ತಾರೆ. ಸಾಮಾನ್ಯ ಉಷ್ಣತೆಯನ್ನು ಅಳೆಯಲು ಥರ್ಮಾಮೀಟರ್‌ ಸಾಕು.

ಭೌಗೋಳಿಕವಾಗಿ ಬೆಂಗಳೂರು ಸಮುದ್ರ ಮಟ್ಟಕ್ಕಿಂತ 850ರಿಂದ 930 ಮೀಟರ್‌ ಎತ್ತರದಲ್ಲಿದ್ದು, ಬೆಟ್ಟ ಗುಡ್ಡಗಳಿಂದ ಕೂಡಿದೆ. ಕ್ರಿ.ಶ. 1600ರಿಂದ 1900ರ ಅವ-ಯಲ್ಲಿ ಈ ನಗರದ ನೀರಿನ ಬೇಡಿಕೆಯನ್ನು ಪೂರೈಸಲು ನೂರಾರು ಕೆರೆಗಳು ನಿರ್ಮಾಣವಾದವೆಂದು ಇತಿಹಾಸ ಹೇಳುತ್ತದೆ. 1960ರಲ್ಲಿ ಬೆಂಗಳೂರಿನಲ್ಲಿ ಇದ್ದ ಕೆರೆಗಳ ಸಂಖ್ಯೆ 282. ಆದರಿಂದು ಅವುಗಳ ಸಂಖ್ಯೆ 80ಕ್ಕಿಂತಲೂ ಕಡಿಮೆ. ಅವೂ ಕೂಡ ವಿನಾಶದ ಅಂಚಿನಲ್ಲಿವೆ. ಬೆಂಗಳೂರಿನ ಅಂತರ್ಜಲ ಮಲಿನಗೊಂಡಿದೆ. ಕ್ಷೀಣಿಸಿದೆ ಕೂಡ. ಗಿಡ ಮರಗಳನ್ನು ಕಡಿದು ಮನೆಗಳನ್ನು ನಿರ್ಮಿಸಲಾಗಿದೆ.

ಜನಸಂಖ್ಯೆಗನುಗುಣವಾಗಿ ಅವರ ಅಗತ್ಯಗಳನ್ನು ಪೂರೈಸಲು, ಮನೆಗಳ ನಿರ್ಮಾಣವಾಗಿದೆ. ಈ ನಿರ್ಮಾಣ ಕಾರ್ಯದಲ್ಲಿ, ಕಾಡುಗಳು, ತೋಟಗಳು, ಹೊಲ ಗದ್ದೆಗಳೂ ಬಡಾವಣೆಗಳಾಗಿ ಹೋಗಿವೆ. ಕೆರೆ- ಕಟ್ಟೆ - ಬಾವಿಗಳನ್ನು ಮುಚ್ಚಲಾಗಿದೆ. ಎಲ್ಲೆಂದರಲ್ಲಿ, ಲೆಕ್ಕವಿಲ್ಲದಷ್ಟು ಕೊಳವೆ ಬಾವಿ ಕೊರೆಯಲಾಗಿದೆ. ಸಾರಿಗೆಯ ಅಗತ್ಯಕ್ಕೆ ಅನುಗುಣವಾಗಿ ವಾಹನಗಳ ಸಂಖ್ಯೆಯೂ ಏರಿದೆ. ಇವುಗಳಿಂದ ಹೊರಬರುವ ಧೂಮ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಹಸಿರು ಇಲ್ಲದೆ ಉಸಿರು ಕಟ್ಟುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಎಲ್ಲ ಒತ್ತಡದಿಂದಾಗಿ ಶಿಶಿರದ ಚಳಿಯ ನಂತರ ನಿಧಾನವಾಗಿ ಏರುತ್ತಿದ್ದ ಬಿಸಿಲು - ಧಗೆ. ಬೇಸಿಗೆ ಕಾಲದ ತುಂಬೆಲ್ಲ ತನ್ನ ಪ್ರತಾಪವನ್ನು ಮೆರೆಯುವಂತಾಗಿದೆ. ಏಪ್ರಿಲ್‌ ಅಂತ್ಯ ಅಥವಾ ಮೇ ಒಳಗೆ ಮಳೆ ಬಾರದಿದ್ದರೆ, ಏನಪ್ಪ ಗತಿ ಎಂಬಂತಹ ವಾತಾವರಣ ಸೃಷ್ಟಿಸಿದೆ.
(ಇನ್‌ಫೋ ವಿಶೇಷ ವರದಿ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X