ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಉತ್ತಮಗೊಳ್ಳುತ್ತಿರುವ ಆರೋಗ್ಯದಿಂದಾಗಿ ಖುಷಿಪಡುತ್ತೀರಿ. ಬಂಧುಗಳೂ ನಿಮ್ಮ ಏಳಿಗೆಯನ್ನು ಕಂಡು ಆನಂದಪಡುತ್ತಾರೆ. ಮತ್ತೆ ನಿಮ್ಮ ನಿಶ್ಚಲ ಗುರಿಯತ್ತ ಪಯಣ ಆರಂಭಿಸಿ.ವೃಷಭ : ವಿದೇಶ ವ್ಯವಹಾರಗಳಲ್ಲಿ ಇವತ್ತು ನಿಮ್ಮ ದಾರಿ ಸುಗಮವಾಗಿರುತ್ತದೆ. ಖರ್ಚು ವಿಪರೀತವಾದಾಗ ನಷ್ಟ ಅನುಭವಿಸಿದ ಹಾಗನಿಸುತ್ತದೆ. ಆದರೆ ಪರೋಕ್ಷವಾಗಿ ಗೆಲುವು ನಿಮ್ಮದೇ.
ಮಿಥುನ : ನಿಮ್ಮ ಬಾಂಧವರು ಪ್ರಯಾಣ ಹೊರಟಾಗ ಶುಭ ಹಾರೈಸಬೇಕೇ ಹೊರತು ಅಳುವುದು ಉಚಿತವಲ್ಲ. ಆರೋಗ್ಯದತ್ತ ವಹಿಸುತ್ತಿರುವ ಕಾಳಜಿ ಸಾಲದು.
ಕಟಕ : ಆರ್ಥಿಕ ಕ್ಷೇತ್ರದಲ್ಲಿ ಆಗುವ ಸುಧಾರಣೆಯಿಂದ ಮನೆಯಲ್ಲಿ ಉಲ್ಲಾಸದ ವಾತಾವರಣ ಇರುತ್ತದೆ. ಹಾಗೆಂದು ನಿಮ್ಮ ಮನೆಯವರು ದುಡ್ಡೇ ದೊಡ್ಡಪ್ಪ ಎನ್ನುವವರಲ್ಲ.
ಸಿಂಹ : ಸಂಸಾರಕ್ಕಿಳಿದ ಮೇಲೆ ಏಗುವುದೊಂದೇ ದಾರಿ. ಸುಸ್ತು, ನಿರಾಸೆಗಳೊಂದಿಗೆ ಬರುವ ಖುಷಿಗೆ ಮನ್ನಣೆ ನೀಡುವುದನ್ನು ಕಲಿತ ನಿಮಗೆ ಬೇನೆ ಬೇಸರಗಳು ಹೊಸದಲ್ಲ.
ಕನ್ಯಾ : ನೌಕರಿಯಲ್ಲಿ ಬಡ್ತಿ ಸಿಕ್ಕುವ ಖುಷಿಯಲ್ಲಿ ನಿಮ್ಮ ಪ್ರೊಜೆಕ್ಟ್‌ಗಳನ್ನು ಮರೆತುಬಿಟ್ಟೀರಾ ಜೋಕೆ. ವರ್ಗಾವಣೆ ಬೇಕಿದ್ದರೆ ಇದು ಉತ್ತಮ ಅವಕಾಶ.
ತುಲಾ : ಆಫೀಸಿನಲ್ಲಿ ಅನುಕೂಲಕರ ವಾತಾವರಣ ಇರುವುದರಿಂದ ಸ್ನೇಹಿತರೊಂದಿಗೆ ಮಜಾದ ಕ್ಷಣಗಳು ಪವಿತ್ರ ಎನಿಸುತ್ತವೆ. ನಿಮ್ಮ ಮೂಡ್ ಕೆಡಿಸಿಕೊಂಡರೆ ನಂತರ ಪಶ್ಚಾತ್ತಾಪ ಪಡುತ್ತೀರಿ.
ವೃಶ್ಚಿಕ : ಮನೆಯವರ ಸಂಗಡ ನಿಮ್ಮ ಮಾತುಕತೆಗಳು, ಮನೆಯ ಸಂಭ್ರಮ ಎಲ್ಲದರಲ್ಲೂ ಕಳೆದುಹೋಗಲಿದ್ದೀರಿ. ಕೊನೆಗೂ ನಿಮ್ಮ ನಿರ್ಧಾರದಿಂದ ಹಿರಿಯರು ಸಂತೋಷ ಪಡುತ್ತಾರೆ.
ಧನಸ್ಸು : ಆಸ್ತಿ ವಿವಾದಗಳಿಗೆಲ್ಲಾ ಸದ್ಯಕ್ಕೆ ಪೂರ್ಣ ವಿರಾಮ ಹಾಕಿ. ಕಮರ್ಷಿಯಲ್ ವ್ಯವಹಾರಗಳಿಗೆ ಸದ್ಯ ಗೆಲುವಿನ ಲಕ್ಷಣ ಇಲ್ಲ. ಆರ್ಥಿಕ ಸುಧಾರಣೆಯಾಂದೇ ಸದ್ಯದ ಲಾಭ.
ಮಕರ : ಹೊಸ ಕೆಲಸಗಳನ್ನು ಆರಂಭಿಸಿ, ಸುಂದರವಾಗಿ ಕೆತ್ತಿಟ್ಟ ನಂತರ ಅದನ್ನು ಹಾಳು ಮಾಡಲೆತ್ನಿಸುವವರನ್ನು ಶಿಕ್ಷಿಸುವ ಸಾಮರ್ಥ್ಯ ನಿಮಗಿರಬೇಕು.
ಕುಂಭ : ದೂರ ಪ್ರಯಾಣ ಹೊರಡುವಾದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸ್ನೇಹಿತರಾಗಲಿ, ಬಂಧುಗಳಾಗಲೀ ನಿಮ್ಮ ನೋವುಗಳನ್ನು ಶಮನ ಮಾಡಬಲ್ಲರಷ್ಟೇ. ಆಗಿರುವ ನಷ್ಟವನ್ನು ತುಂಬಿಕೊಡಲಾರರು.
ಮೀನ : ಮನೆಯಲ್ಲಿ ಅಶಾಂತಿ, ವಿಪರೀತ ಖರ್ಚುಗಳಿಂದ ನಲುಗಿರುವ ನಿಮಗೆ ಕೊಂಕು ಬುದ್ಧಿಯನ್ನು ಇನ್ನಾದರೂ ಬಿಡಬೇಕು ಎನ್ನುವ ಪ್ರಜ್ಞೆ ಬಾರದಿದ್ದರೆ ಕಷ್ಟವಾಗುತ್ತದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications