ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ಮನಿಯ ಗ್ರೀನ್‌ಕಾರ್ಡ್‌ ಗಾಳಕ್ಕೆ 8ತಿಂಗಳಲ್ಲಿ 1135 ಭಾರತೀಯರು

By Staff
|
Google Oneindia Kannada News

ಬರ್ಲಿನ್‌: ವಿದೇಶಿ ಐಟಿ ಪರಿಣತರನ್ನು , ಮುಖ್ಯವಾಗಿ ಭಾರತೀಯರನ್ನು ಆಕರ್ಷಿಸುವ ಉದ್ದೇಶದಿಂದ ಜರ್ಮನಿ ಪ್ರಾರಂಭಿಸಿರುವ ಗ್ರೀನ್‌ಕಾರ್ಡ್‌ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗ್ರೀನ್‌ಕಾರ್ಡ್‌ ಯೋಜನೆ ಪ್ರಾರಂಭವಾದ ಎಂಟೇ ತಿಂಗಳಲ್ಲಿ 1135 ಭಾರತೀಯ ಕಂಪ್ಯೂಟರ್‌ ಪರಿಣತರು ಜರ್ಮನಿಯಲ್ಲಿ ಹುದ್ದೆ ಗಿಟ್ಟಿಸಿದ್ದಾರೆ. ಈ ಎಂಟು ತಿಂಗಳಲ್ಲಿ 17 ಸಾವಿರದ 500 ಹುದ್ದೆಗಳು ಸೃಷ್ಟಿಯಾಗಿದ್ದು ಅದರಲ್ಲಿ 6 ಸಾವಿರ ಹುದ್ದೆಗಳು ಗ್ರೀನ್‌ಕಾರ್ಡ್‌ದಾರರ ಕೈನಲ್ಲಿವೆ. ಯೋಜನೆಯ ಫಲಶ್ರುತಿಯ ಬಗ್ಗೆ ನಡೆದ ಸಮೀಕ್ಷೆಯಾಂದು ಈ ವಿವರಗಳನ್ನು ಕಲೆಹಾಕಿದೆ.

ಗ್ರೀನ್‌ಕಾರ್ಡ್‌ ಯೋಜನೆಯಡಿ ಜರ್ಮನಿಗೆ ಆಗಮಿಸಿರುವ ಭಾರತ ಮತ್ತು ಯುರೋಪ್‌ ಒಕ್ಕೂಟ ಹೊರತಪಡಿಸಿದ ಇತರ ರಾಷ್ಟ್ರಗಳ ಐಟಿ ತಂತ್ರಜ್ಞರು ರಾಷ್ಟ್ರದ ಕಾರ್ಮಿಕ ಮಾರುಕಟ್ಟೆಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದೂ ಸಮೀಕ್ಷೆ ತಿಳಿಸಿದೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X