Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ನಿಮ್ಮ ಮಕ್ಕಳು ಇವ್ತತು ಪ್ರೆೃಸ್‌ ಸಿಕ್ಕಿದ ಸುದ್ದಿ ತರಬಹುದು. ನಿಮ್ಮ ಪ್ರೋತ್ಸಾಹ ಇರಬೇಕೇ ಹೊರತು, ಇನ್ನಷ್ಟು ತಾ ಎಂದು ಹೇಳಬೇಡಿ.

ವೃಷಭ : ಇವತ್ತು ನಿಮ್ಮ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ. ಹಾಗಂತ ದುಂದು ವೆಚ್ಚ ಬೇಡ. ಮುಂದಿನ ದಿನಗಳಲ್ಲಿ ಮನೆಯಲ್ಲಿ ನಡೆಯುವ ಕೆಲಸಗಳ ಜವಾಬ್ದಾರಿ ನಿಮ್ಮ ಹೆಗಲ ಮೇಲೆಯೇ ಇದೆ.

ಮಿಥುನ : ಉದ್ಯೋಗದಲ್ಲಿ ಅನುಕೂಲ, ಸ್ನೇಹಿತರೊಂದಿಗೆ ಪುಟ್ಟ ಪುಟ್ಟ ಜಗಳ. ಆರೋಗ್ಯದತ್ತ ಗಮನ ಕೊಡುವಂತೆ ಸ್ನೇಹಿತರು ಮಾಡುವ ಸಲಹೆಯನ್ನು ತಿರಸ್ಕರಿಸಬೇಡಿ.

ಕಟಕ : ಅನಿರೀಕ್ಷಿತ ಅಪಘಾತದ ಸುದ್ದಿ ಬಂದರೆ ಹೆದರಬೇಡಿ. ಕಾಸು ಖರ್ಚಾದರೂ ಅಂತಹ ತೊಂದರೆಯೇನೂ ಸಂಭವಿಸುವುದಿಲ್ಲ.

ಸಿಂಹ : ಕಂಪೆನಿ, ಕಚೇರಿ ಅಂತೆಲ್ಲಾ ತಲೆ ಕೆಡಿಸಿಕೊಂಡು ನೀವು ಮನಸ್ಸು ಹಾಳು ಮಾಡಿಕೊಳ್ಳುತ್ತೀರಿ. ದಿನ ಬೇಜಾರಾಗಿದ್ದರೆ ಸಂಜೆ ಮನೆಯಲ್ಲಿ ಹೆಚ್ಚಿನ ವಾಗ್ವಾದ ಬೇಡ.

ಕನ್ಯಾ : ಷೇರು ವ್ಯವಹಾರಗಳಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ಸಂಗಾತಿಯಾಂದಿಗಿನ ವಿರಸ ಇಂದಿಗೆ ಮುಕ್ತಾಯವಾಗುತ್ತದೆ. ಸಂಜೆ ಒಂದು ಸಣ್ಣ ಪಾರ್ಟಿ ಇರಬಹುದು.

ತುಲಾ : ಬುದ್ಧಿ ಚಾಂಚಲ್ಯದಿಂದಾಗಿ ಕೆಲಸದಲ್ಲಿ ಸ್ವಲ್ಪ ಹಿಂದೆ ಬೀಳುತ್ತೀರಿ. ಆದರೆ ಮನೆಯಲ್ಲಿ ಸಂಭ್ರಮ ನಿಮ್ಮನ್ನು ಕಾಯುತ್ತಿರುತ್ತದೆ. ಆಲ್‌ ದ ಬೆಸ್ಟ್‌.

ವೃಶ್ಚಿಕ : ಸನ್ಮಾನ ಪ್ರಶಸ್ತಿಗಳು ಬಂದರೆ ಸ್ನೇಹಿತರಿಗೆ, ಬಂಧುಗಳಿಗೆ ಸಿಹಿ ಕೊಡಿಸುವುದು ಕ್ರಮ ಅಲ್ವೇ ? ಜೇಬು ಹಗುರಾಗುವ ಯೋಚನೆಯನ್ನೇ ತಿರಸ್ಕರಿಸಲಾಗುತ್ತದೆಯೇ ?

ಧನಸ್ಸು : ಅನಾರೋಗ್ಯದತ್ತ ಸ್ವಲ್ಪ ಜಾಸ್ತಿ ಗಮನಕೊಡಬೇಕು. ಪಿತ್ತ ದೋಷದಂತಹ ಕಿರಿಕ್‌ಗಳು ನಿಮ್ಮ ನಿರಾಳತೆಯನ್ನು ಕದಡುತ್ತವೆ.

ಮಕರ : ಸರಕಾರಿ ಕೆಲಸಗಳಿಗಾಗಿ ಅಲೆದಾಡಿ ಸುಸ್ತಾಗಿದ್ದೀರಿ ಅಂತ ಗೊತ್ತು. ಆದರೆ ಇವತ್ತು ಎಂದಿನ ಸೋಲು ನಿಮ್ಮನ್ನು ನೋಯಿಸುವುದಿಲ್ಲ. ಸ್ನೇಹಿತರ ಸಹಕಾರ ಭಾಗ್ಯ ಇದೆ.

ಕುಂಭ : ರಿಲ್ಯಾಕ್ಸ್‌ ,ರೆಸ್ಟ್‌ ಅಂತ ಯಾವಾಗಲೂ ಹೇಳುತ್ತಿರುವ ನಿಮ್ಮನ್ನು ನೋಡಿ ಸ್ನೇಹಿತರು ಅಚ್ಚರಿ ಪಡುತ್ತಿರುತ್ತಾರೆ. ಯಾವ ಶ್ರಮದ ಕೆಲಸಕ್ಕಾಗಿ ರಿಲ್ಯಾಕ್ಸ್‌ ತೆಗೊಳುತ್ತಿರೋ ಅಂತ ಕಕ್ಕಾಬಿಕ್ಕಿಯಾಗುತ್ತಾರೆ.

ಮೀನ : ವ್ಯವಹಾರಗಳಲ್ಲಿ ನಿರಾಸೆ ಕಾದಿದೆ. ನೀವು ಹೇಳಿರುವ ಸುಳ್ಳುಗಳು ನಿಮ್ಮತ್ತಲೇ ತಿರುಗಿ ನಿಲ್ಲುತ್ತವೆ. ಆದ್ದರಿಂದ ಸುಳ್ಳು ಹೇಳುವುದನ್ನು ಕಡಿಮೆ ಮಾಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+