Get Updates
Get notified of breaking news, exclusive insights, and must-see stories!

ಮೈಸೂರು ಸೌಂದರ್ಯ ರಕ್ಷಣೆಗೆ ಫುಟ್‌ಪಾತ್‌ ಅಂಗಡಿಗಳ ನೆಲಸಮ

ನಾಗೇಂದ್ರಪ್ರಸಾದ್‌, ನಂಜನಗೂಡು

ಮೈಸೂರು : ಅರಮನೆಗಳ ಸುಂದರ ನಗರಿಯ ರಾಜಮಾರ್ಗಗಳ ಇಕ್ಕೆಲಗಳ ಪಾದಚಾರಿ ರಸ್ತೆಯನ್ನು ಫುಟ್‌ಪಾತ್‌ ಅಂಗಡಿಗಳು ಅಕ್ರಮಿಸಿಕೊಂಡು ನಗರದ ಸೌಂದರ್ಯವನ್ನೇ ಹಾಳು ಮಾಡಿವೆ. ಸಾಂಸ್ಕೃತಿಕ ರಾಜಧಾನಿಯ ಸೌಂದರ್ಯ ಕಾಪಾಡಲು ಈಗ ಮೈಸೂರು ನಗರ ಪಾಲಿಕೆ ಈ ಫುಟ್‌ಪಾತ್‌ ಅಂಗಡಿಗಳನ್ನು ನೆಲಸಮ ಮಾಡುವ ಕಾರ್ಯ ಆರಂಭಿಸಿದೆ.

ನಗರ ಸೌಂದರ್ಯಕ್ಕೆ ಫುಟ್‌ಪಾತ್‌ ಅಂಗಡಿಗಳು ಮಾರಕವಾಗಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಎಲ್ಲ ಫುಟ್‌ಪಾತ್‌ ಅಂಗಡಿ ಕೆಡವಲು ಪಾಲಿಕೆ ತೀರ್ಮಾನಿಸಿತ್ತು. ಭಾನುವಾರ ರಾತ್ರಿಯಿಂದಲೇ ಈ ಕಾರ್ಯಾಚರಣೆಯನ್ನು ಪಾಲಿಕೆ ಆರಂಭಿಸಿದೆ. ಈ ಕಾರ್ಯಚರಣೆಗೆ ಮೊದಲು ಬಲಿಯಾದದ್ದು ಟೈಟಾನಿಕ್‌ ಐಸ್‌ಕ್ರೀಮ್‌ ಪಾರ್ಲರ್‌.

ಹೇಳಿ ಕೇಳಿ ಅಂಗಡಿಯ ಹೆಸರೇ ಟೈಟಾನಿಕ್‌. ಇನ್ನು ಅದು ಮುಳುಗದಿರಲು ಸಾಧ್ಯವೇ? ಆಯುರ್ವೇದ ಕಾಲೇಜು ಮುಂಭಾಗದಿಂದ ಪಾದಚಾರಿ ರಸ್ತೆಗಳ ಆಕ್ರಮಿಸಿದ ಅಂಗಡಿ ನೆಲಸಮ ಕಾರ್ಯಾಚರಣೆ ಆರಂಭಿಸಿದ ಪಾಲಿಕೆ ಕಾಕತಾಳೀಯ ಎಂಬಂತೆ ಮೊದಲು ಆಯ್ಕೆ ಮಾಡಿದ್ದು, ಟೈಟಾನಿಕ್‌ ಐಸ್‌ಕ್ರೀಂ ಅಂಗಡಿಯನ್ನು.

ಭಾನುವಾರ ರಾತ್ರಿ 11-30ರ ಸುಮಾರಿನಲ್ಲಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಸ್ಥಳಕ್ಕೆ ಆಗಮಿಸಿದ ಪಾಲಿಕೆಯ ಕಾರ್ಯಪಡೆ ತಂಡ ಅಂಗಡಿಗಳ ನೆಲಸಮ ಕಾರ್ಯ ಆರಂಭಿಸಿತು. ಮೈಸೂರು ನಗರಕ್ಕೆ ದೇಶ - ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಅಂಗಡಿಗಳಿಂದ ನಗರದ ಸೌಂದರ್ಯ ಹಾಳಾಗುವುದೇ ಅಲ್ಲದೆ, ಮೈಸೂರು ಪರಂಪರೆಗೂ ದಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಎ.ಕೆ. ಸುರೇಶ್‌ ತಿಳಿಸಿದ್ದಾರೆ.

ದೇವರಾಜಾ ಮಾರ್ಕೆಟ್‌ ಬಂದ್‌ : ನಗರದ ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳಲ್ಲಿ ನಡೆಯುತ್ತಿರುವ ತರಕಾರಿ ಮಾರಾಟದಿಂದಾಗಿ, ಪಾಲಿಕೆಗೆ ಸುಂಕ ಕಟ್ಟುವ ತಾವು ಭಾರಿ ನಷ್ಟ ಅನುಭವಿಸುತ್ತಿದ್ದೇವೆ ಎಂದು ಆರೋಪಿಸಿರುವ ದೇವರಾಜಾ ಮಾರುಕಟ್ಟೆಯ ಮಳಿಗೆ ಮಾಲಿಕರು, ಸೋಮವಾರ, ಅಂಗಡಿ ಮುಚ್ಚಿ ಪ್ರತಿಭಟನೆ ನಡೆಸಿದರು.

ಈ ಸಂಬಂಧ ಕೆ.ಆರ್‌. ವೃತ್ತದಿಂದ ನಗರ ಪಾಲಿಕೆವರೆಗೆ ಭಾರಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಾನವ ಸರಪಳಿ ನಿರ್ಮಿಸಿ ಸಂಚಾರಕ್ಕೆ ಅಡ್ಡಿಪಡಿಸಿ, ನಾಕರಿಕರ ಗಮನ ಸೆಳೆದರು. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ, ಸೂಕ್ತ ಕ್ರಮದ ಭರವಸೆ ನೀಡಿ, ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+