Get Updates
Get notified of breaking news, exclusive insights, and must-see stories!

ಗುಜರಾತ್‌ ಸಂತ್ರಸ್ತರಿಗೆ ಮಂಡೇಲಾರಿಂದ ಗಾಂಧಿ ಪುರಸ್ಕಾರದ ಹಣ

ನವದೆಹಲಿ : ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಹಾಗೂ ಕರಿಯರ ನಾಯಕ ನೆಲ್ಸನ್‌ ಮಂಡೇಲಾ ತಾವು ಪಡೆದ 2000 ಸಾಲಿನ ಗಾಂಧಿ ಶಾಂತಿ ಪುರಸ್ಕಾರದ ಹಣವನ್ನು ಗುಜರಾತ್‌ ಭೂಕಂಪ ಸಂತ್ರಸ್ತರ ನೆರವಿಗೆ ಅರ್ಪಿಸಿದ್ದಾರೆ.

ಈ ಕುರಿತಾದ 1 ಲಕ್ಷ 6 ಸಾವಿರದ 698 ಡಾಲರ್‌ಗಳ ಚೆಕ್ಕನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ನೆಲ್ಸನ್‌ ಮಂಡೇಲ ಫೌಂಡೇಷನ್‌ ಸೋಮವಾರ ಪ್ರಕಟಿಸಿದೆ. ಗುಜರಾತ್‌ನ ಕಛ್‌ ಪ್ರದೇಶದ ಸಂತ್ರಸ್ತರ ನೆರವಿಗೆ ಈ ಹಣವನ್ನು ಬಳಸಬೇಕೆಂದು ಮಂಡೇಲಾ ಇಚ್ಛಿಸಿದ್ದಾರೆ.

ಮಾರ್ಚ್‌ 16 ರಂದು ದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಂಡೇಲಾ ಅವರಿಗೆ ಗಾಂಧಿ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಲಾಗಿತ್ತು . ಬಾಂಗ್ಲಾ ದೇಶ್‌ ಗ್ರಾಮೀಣ ಬ್ಯಾಂಕ್‌ನೊಂದಿಗೆ ಮಂಡೇಲಾ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+