ಬೆಳಗಿನ ಪಾಳಿಯಲ್ಲಿ ಮಿಂಚಿದ ಹರ್ಭಜನ್, ದ್ವಿಶತಕದತ್ತ ಹೇಡನ್
ಚೆನ್ನೈ : ಭಾನುವಾರದ ಆಟದಲ್ಲಿ ಅಷ್ಟೇನೂ ಯಶಸ್ಸು ಕಾಣದೆ ಸಿಕ್ಸರ್ಗಳನ್ನು ಚಚ್ಚಿಸಿಕೊಂಡಿದ್ದ ಹರ್ಭಜನಸಿಂಗ್ ಸೋಮವಾರದ ಆಟದ ಬೆಳಗಿನ ಪಾಳಿಯಲ್ಲಿ ತಮ್ಮ ಎಂದಿನ ಲಯಕ್ಕೆ ಮರಳಿ, ಇಬ್ಬರು ಪ್ರಮುಖ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾದ ರನ್ ದಾಹಕ್ಕೆ ಕಡಿವಾಣ ಹಾಕಿದ್ದಾರೆ.
ಬೆಳಗಿನ ಮೊದಲ ಬಲಿ ಕಾಂಗರೂಗಳ ನಾಯಕ ಸ್ಟೀವ್ ವಾ. ಹರ್ಭಜನ್ ಎಸೆದ ಚೆಂಡನ್ನು ಗೊಂದಲದಲ್ಲಿ ಆಡಿದ ವಾ, ಚೆಂಡನ್ನು ಕೈನಲ್ಲಿ ದಬ್ಬುವ ಮೂಲಕ ಔಟಾದರು. ನಂತರ ಬಂದ ಪಾಂಟಿಂಗ್ ಹರ್ಭಜನ್ರ ಚೆಂಡನ್ನು ಮುಂದೆ ನುಗ್ಗಿ ಆಡಲು ಹೋಗಿ ಧಿಘ ಅವರ ಮಿಂಚಿನ ಸ್ಟಂಪಿಂಗ್ಗೆ ಬಲಿಯಾದರು. ಆ ಮೂಲಕ ಮತ್ತೊಂದು ಶೂನ್ಯ ಸಂಪಾದನೆಯ ಸಮ್ಮಾನ ಪಾಂಟಿಂಗ್ ಪಾಲಿಗೆ.
ಪಾಂಟಿಂಗ್ ನಂತರ ಬಂದ ಗಿಲ್ಕ್ರಿಸ್ಟ್ ಗಳಿಸಿದ್ದು ಒಂದು ರನ್ ಮಾತ್ರ. ಹರ್ಭಜನ್ ಚೆಂಡಿನ ಗತಿಯನ್ನು ಗುರ್ತಿಸಲು ವಿಫಲರಾದ ಅವರು ಎಲ್ಬಿ ಬಲೆಗೆ ಬಿದ್ದರು. ಇತ್ತೀಚಿನ ವರದಿಗಳು ಬಂದಾಗ ಆಸ್ಟ್ರೇಲಿಯಾ ತಂಡ 6 ವಿಕೆಟ್ ನಷ್ಟಕ್ಕೆ 354 ರನ್ ಗಳಿಸಿತ್ತು . 168 ರನ್ ಗಳಿಸಿರುವ ಮ್ಯಾಥ್ಯೂ ಹೇಡನ್ ಹಾಗೂ ಖಾತೆ ಶುರು ಮಾಡದಿರುವ ವಾರ್ನ್ ಕ್ರೀಸ್ನಲ್ಲಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications