ಶ್ರೀನಾಥ್ ಆಡೋದು ಅನುಮಾನ, ಮೊಂಗಿಯಾ ಬದಲಿಗೆ ದಿಘ
ಚೆನ್ನೈ: ಭಾನುವಾರದಿಂದ ಇಲ್ಲಿನ ಚೆಪಾಕ್ನಲ್ಲಿ ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ- ಭಾರತ 3ನೇ ಟೆಸ್ಟ್ ಪಂದ್ಯದಲ್ಲಿ ಮೈಸೂರು ಎಕ್ಸ್ಪ್ರೆಸ್ ಜಾವಗಲ್ ಶ್ರೀನಾಥ್ ಆಡುವುದು ಅನುಮಾನ. 2ನೇ ಟೆಸ್ಟ್ನಲ್ಲಿ ಮೂಗಿಗೆ ಪೆಟ್ಟು ತಿಂದಿರುವ ವಿಕೆಟ್ ಕೀಪರ್ ನಯನ್ ಮೊಂಗಿಯಾ ಬದಲು ಸಮೀರ್ ದಿಘ ಆಡುವ ಸಾಧ್ಯತೆ ನಿಚ್ಚಳವಾಗಿದೆ.
ಶುಕ್ರವಾರ ನಡೆದ ನೆಟ್ ಅಭ್ಯಾಸದಲ್ಲಿ ಶ್ರೀನಾಥ್ ಬೌಲಿಂಗ್ ಮಾಡಿದರಾದರೂ, ಕ್ಷೇತ್ರ ರಕ್ಷಣೆಯಲ್ಲಿ ಚುರುಕಾಗಿರಲಿಲ್ಲ. ಚೆಂಡನ್ನು ಎಸೆಯುವಾಗಂತೂ ತೀವ್ರ ಬಳಲಿದಂತೆ ಕಂಡುಬಂದರು. ಮುರಿದಿದ್ದ ಅವರ ಹೆಬ್ಬೆರಳು ಈಗ ಸರಿಹೋಗಿದೆ. ಆದರೆ ಅವರು ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿರುವ ಬಗ್ಗೆ ಅನುಮಾನಗಳಿದ್ದು, ಅಂತಿಮ ಟೆಸ್ಟ್ಗೆ ಆಡಲಿರುವ 11 ಮಂದಿ ತಂಡದಲ್ಲಿ ಸ್ಥಾನ ಪಡೆಯುವುದು ಇನ್ನೂ ಖಾತ್ರಿಯಾಗಿಲ್ಲ.
ಕೋಲ್ಕತಾ ಟೆಸ್ಟ್ನಲ್ಲಿ ಹರ್ಭಜನ್ ಬೌಲಿಂಗ್ನಲ್ಲಿ ಮೂಗಿಗೆ ಹೊಡೆತ ತಿಂದ ವಿಕೆಟ್ ಕೀಪರ್ ನಯನ್ ಮೊಂಗಿಯಾ ಬದಲಿಗೆ ಮುಂಬಯಿಯ ಸಮೀರ್ ದಿಘ ಆಡುವುದು ಹೆಚ್ಚೂ ಕಮ್ಮಿ ಖಚಿತವಾಗಿದೆ. ತಂಡವನ್ನು ಬಂದು ಸೇರುವಂತೆ ದಿಘಗೆ ತಂಡದ ಮ್ಯಾನೇಜರ್ ಚೇತನ್ ಚೌಹಾನ್ ಬುಲಾವು ನೀಡಿದ್ದಾರೆ. ಶ್ರೀನಾಥ್ ಬದಲಿಗೆ ಒರಿಸ್ಸಾದ ದೇಬಶಿಶ್ ಮೊಹಾಂತಿಯನ್ನು ಆಡಿಸುವ ಸಾಧ್ಯತೆಗಳೂ ಚೆನ್ನೈನಲ್ಲಿ ಕೇಳಿಬರುತ್ತಿವೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ 1-1ರಲ್ಲಿ ಸಮನಾಗಿದ್ದು, ಅಂತಿಮ ಟೆಸ್ಟ್ ಸರಣಿಯ ನಿರ್ಣಾಯಕ ಪಂದ್ಯವಾಗಲಿದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications