ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಡಿಎ ಸರ್ಕಾರ ಕೆಡವುದು ಕಾಂಗ್ರೆಸ್‌ ಉದ್ದೇಶವಲ್ಲ - ಅರ್ಜುನ್‌ ಸಿಂಗ್‌

By Staff
|
Google Oneindia Kannada News

ಬೆಂಗಳೂರು : ಎಂಭತ್ತೊಂದನೆಯ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಪೂರ್ಣಾಧಿವೇಶನ ರಂಗೇರುತ್ತಿದ್ದಂತೆ ಕಾರ್ಯಕರ್ತರು ವಾಜಪೇಯಿ ಡೌನ್‌ ಡೌನ್‌ ಕೂಗತೊಡಗಿದರು. ಧುರೀಣರು ಕೊಟ್ಟ ಕರೆ ಈ ಕೂಗನ್ನು ತಾರಕಕ್ಕೇರಿಸಿತು. ಕಾಂಗ್ರೆಸ್‌ನ ಗೊತ್ತುವಳಿಗಳು ಧುರೀಣರ ಬಾಯಿಂದ ಒಂದೊಂದಾಗಿ ಬಿಚ್ಚಿಕೊಂಡವು....

  • ಎನ್‌ಡಿಎ ಸರ್ಕಾರ ಉರುಳಿಸುವುದೇ ನಮ್ಮ ಏಕಮಾತ್ರ ಧ್ಯೇಯವಲ್ಲ. ಜಾತ್ಯತೀತ ತತ್ತ್ವಗಳಿಗೆ ಬದ್ಧವಾದ ಸರ್ಕಾರವನ್ನು ದೇಶಕ್ಕೆ ಕೊಡುವುದು ನಮ್ಮ ಉದ್ದಿಶ್ಯ- ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಅರ್ಜುನ್‌ ಸಿಂಗ್‌
  • ಜಾತ್ಯತೀತ ತತ್ತ್ವಗಳಿಗೆ ಬದ್ಧವಾಗಿರುವ ಕಾಂಗ್ರೆಸ್‌ ತನ್ನ ಧ್ಯೇಯಗಳಿಗೆ ಸರಿ ಹೊಂದುವ ಪಕ್ಷಗಳೊಡನೆ ಮಾತ್ರ ಚುನಾವಣಾ ಒಡಂಬಡಿಕೆ ಮಾಡಿಕೊಳ್ಳುತ್ತದೆ
  • ಪಚ್ಮಾರಿ ಅಧಿವೇಶನದ ಗೊತ್ತುವಳಿಗಳ ಬಗ್ಗೆ ಎದ್ದಿರುವ ಗೊಂದಲಗಳು ಸುಖಾ ಸುಮ್ಮನೆ ತಲೆಕೆಡಿಸಿವೆ. ಆದರೆ ಕಾಂಗ್ರೆಸ್‌ ಒಡಂಬಡಿಕೆ ವೇಳೆ ತನ್ನ ತತ್ತ್ವಗಳನ್ನು ಬಲಿಕೊಡುವುದಿಲ್ಲ.
  • ಅಲ್ಪ ಸಂಖ್ಯಾಕರು ಮತ್ತಿತರ ದುರ್ಬಲರ ಹಿತಾಸಕ್ತಿ ಕಾಪಿಡಲು ಕಾಂಗ್ರೆಸ್‌ ಸದಾ ಸಿದ್ಧ
  • ನೈತಿಕ ಹೊಣೆ ಹೊತ್ತು ವಾಜಪೇಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ
  • ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದಕ್ಕೆ ಕಾಂಗ್ರೆಸ್‌ ವಿರೋಧವಿಲ್ಲ. ಆದರೆ ಅಲ್ಲಿನ ಮಸೀದಿ ಒಡೆದದ್ದಕ್ಕೆ ಧಿಕ್ಕಾರ. ಇಂಥಾ ಕ್ಷುಲ್ಲಕ ವರ್ತನೆಗೆ ಬಿಜೆಪಿ ಈಗಾಗಲೇ ಹೊಡೆತ ತಿಂದಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ರಾಜಾಸ್ಥಾನಗಳಲ್ಲಿ ಅದರ ಸರ್ಕಾರ ಉರುಳಿ ಬಿದ್ದದ್ದು ಮಸೀದಿ ಒಡೆದದ್ದಕ್ಕೇ
  • ಕೋಮುವಾದಿ ಪಕ್ಷಗಳನ್ನು ಮಡಿಲಿಗೆ ಕಟ್ಟಿಕೊಂಡು, ಎನ್‌ಡಿಎ ಅನ್ನುವ ಬೋರ್ಡು ಹಾಕಿಕೊಂಡಿರುವ ಸರ್ಕಾರದಿಂದ ಜನಹಿತ ಕಾಪಾಡುವುದು ಅಸಾಧ್ಯ
  • ಎನ್‌ಡಿಎ ಆರ್ಥಿಕ ನೀತಿಯಂತೂ ಶ್ರೀಸಾಮಾನ್ಯನನ್ನು ತುಳಿಯುವಂತಿದೆ. ರೈತರನ್ನು ದೇವರೇ ಕಾಪಾಡಬೇಕು. ಅಂಥಾದರಲ್ಲೂ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ
(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X