ಸಿಂಧೂ, ಬ್ರಹ್ಮಪುತ್ರ ದರ್ಶನ ಮಾದರಿಯಲ್ಲಿ ಕಾವೇರಿ ದರ್ಶನ
ಮಡಿಕೇರಿ : ಭಾರತ ಸರಕಾರ ಈ ಹಿಂದೆ ನಡೆಸಿದ್ದ ಸಿಂಧೂ ದರ್ಶನ, ಬ್ರಹ್ಮಪುತ್ರ ದರ್ಶನ ಕಾರ್ಯಕ್ರಮಗಳ ಮಾದರಿಯಲ್ಲೇ ಕಾವೇರಿ ದರ್ಶನ ಎಂಬ ಉತ್ಸವ ನಡೆಸಲು ಕೊಡಗು ಜಿಲ್ಲಾ ಪಂಚಾಯಿತಿ ನಿರ್ಧರಿಸಿದೆ. ಈ ಉತ್ಸವದ ಮೂಲಕ ಕನ್ನಡ ನಾಡಿನ ಜೀವನದಿ ಕಾವೇರಿಯ ಹಿರಿಮೆಯನ್ನು ರಾಷ್ಟ್ರಾದ್ಯಂತ ಸಾರುವುದಲ್ಲದೇ ಕೊಡಗಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸುವುದು ಪಂಚಾಯ್ತಿ ಉದ್ದೇಶ.
ಈ ಸಂಬಂಧ ಕಾವೇರಿ ದರ್ಶನ ಕಾರ್ಯಕ್ರಮ ನಡೆಸಲು 94 ಲಕ್ಷ ರುಪಾಯಿಗಳ ಪ್ರಸ್ತಾವನೆಯಾಂದನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಈ ವಿಷಯವನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ತಿಳಿಸಿದ್ದಾರೆ. ಪಂಚಾಯ್ತಿಯ ಆಯವ್ಯಯ ಭಾಷಣ ಮಾಡುತ್ತಿದ್ದ ಅವರು, ಇದಕ್ಕಾಗಿ ಪಂಚಾಯ್ತಿ ವತಿಯಿಂದ 2000-01ನೇ ಸಾಲಿನಲ್ಲಿ 5 ಲಕ್ಷ ರುಪಾಯಿ ಒದಗಿಸಲಾಗುವುದು ಎಂದರು.
ಕಾವೇರಿ ದರ್ಶನ ಉತ್ಸವವನ್ನು ಕಾವೇರಿ ಹರಿಯುವ 760 ಕಿ.ಮೀಟರ್ ಉದ್ದಕ್ಕೂ ವಿವಿಧ ಸ್ಥಳಗಳಲ್ಲಿ ನಡೆಸುವ ಉದ್ದೇಶವಿದೆ ಎಂದೂ ಅವರು ಹೇಳಿದರು. ಕರ್ನಾಟಕ ಉತ್ಸವ ಎಂಬ ಹೆಸರಿನಲ್ಲಿ ಮೂರು ದಿನಗಳ ಕಾಲ ಸಂಗೀತ, ನಾಟಕ, ನೃತ್ಯವೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಗುವುದು ಎಂದರು.
ಉತ್ಸವದ ಅಂಗವಾಗಿ ವಸ್ತು ಪ್ರದರ್ಶನ, ಸ್ಮರಣ ಸಂಚಿಕೆ, ವಿಚಾರಗೋಷ್ಠಿಗಳೇ ಅಲ್ಲದೆ ಉತ್ಸವದ ನೆನಪು ಸದಾ ಉಳಿಯುವಂತೆ ಮಾಡಲು 40 ಲಕ್ಷ ರುಪಾಯಿ ವೆಚ್ಚದಲ್ಲಿ ಮಡಿಕೇರಿಯಲ್ಲಿ ಕಲಾ ಭವನವೊಂದನ್ನು ನಿರ್ಮಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದೂ ಅವರು ತಿಳಿಸಿದರು.
ತಲಕಾವೇರಿಯೂ ಸೇರಿದಂತೆ, ಕೊಡಗಿನ ಸುತ್ತಮುತ್ತಲ ಪ್ರದೇಶಗಳಲ್ಲಿ, ಕೋಟೆ, ಅಭಯಾರಣ್ಯವೇ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿದ್ದು, ಈ ಎಲ್ಲ ಐತಿಹಾಸಿಕ ಹಾಗೂ ನೈಸರ್ಗಿಕ ಸಂಪತ್ತಿನಿಂದ ಕೂಡಿದ ಭವ್ಯ ಪ್ರವಾಸಿ ತಾಣಗಳತ್ತ ದೇಶ - ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುವುದು ಕಾವೇರಿ ದರ್ಶನದ ಮಹತ್ತರ ಉದ್ದೇಶವಾಗಿದೆ ಎಂದರು. ಇದರಿಂದಾಗಿ ಕೊಡಗು ವಿಶ್ವ ಭೂಪಟದಲ್ಲಿ ವಿಶಿಷ್ಟ ಸ್ಥಾನ ಪಡೆಯಲಿದೆ ಎಂಬ ಆಶಾಭಾವನೆಯನ್ನೂ ಅವರು ವ್ಯಕ್ತಪಡಿಸಿದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications