Get Updates
Get notified of breaking news, exclusive insights, and must-see stories!

ಶಿವಮೊಗ್ಗ : ಜಾತ್ರೆಗೆ ಹೊರಟು ನೀರು ಪಾಲಾದ ಆರು ಯುವಕರು

ಬೆಂಗಳೂರು : ಶಿವಮೊಗ್ಗದ ಅಂಬಾಲಿಗೊಳ ಜಲಾಶಯದಲ್ಲಿ ಮೀನುಗಾರಿಕೆಗೆ ಬಳಸುವ ದೋಣಿಯಲ್ಲಿ ತೆರಳಿದ್ದ ಆರು ಯುವಕರು, ದೋಣಿ ತಲೆ ಕೆಳಗಾದ ಕಾರಣ ನೀರಿನಲ್ಲಿ ಮುಳುಗಿದ್ದಾರೆ.

ಪೊಲೀಸ್‌ ವರದಿಗಳು ತಿಳಿಸಿರುವಂತೆ, ಮಾರಿಕಾಂಬ ಜಾತ್ರೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಜನಾಪುರದಿಂದ ಬೀರಾಪುರಕ್ಕೆ ಏಳು ಯುವಕರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ಬುಧವಾರ ರಾತ್ರಿ ಈ ದುರಂತ ಸಂಭವಿಸಿದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರ ಬಿದ್ದ ಕಾರಣ ದೋಣಿ ಸಮತೋಲನ ಕಳೆದುಕೊಂಡಿದೆ ಎಂದು ನಂಬಲಾಗಿದೆ. ದೋಣಿಯಲ್ಲಿದ್ದ ಏಳು ಯುವಕರಲ್ಲಿ ಒಬ್ಬ ಮಾತ್ರ ಸುರಕ್ಷಿತವಾಗಿ ಪಾರಾಗಿದ್ದಾನೆ.

ಜಲಾಶಯದಲ್ಲಿ ಮುಳುಗಿದವರು 15 ರಿಂದ 20 ವರ್ಷದೊಳಗಿನ ಯುವಕರು. ಹಿರಿಯ ಪೊಲೀಸ್‌ ಅಧಿಕಾರಿಗಳು ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+