ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಅನಾರೋಗ್ಯದ್ದೇ ನಿಮಗೆ ಚಿಂತೆ. ಆಪ್ತರ ಸಲಹೆಯಿಂದ ಶುಭವಾಗುತ್ತದೆ. ಪ್ರಶಂಸೆಗೆಂದು ಕಾಯುತ್ತಾ ಕೂರುವುದರಿಂದ ಸಮಯ ಹಾಳು. ಅನಿರೀಕ್ಷಿತ ಅತಿಥಿಯ ಆಗಮನದಿಂದ ಚಿಂತೆ ದೂರ.ವೃಷಭ : ಆಫೀಸ್‌ನಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಬಡ್ತಿ ಸಿಗಲೂ ಬಹುದು. ಆದರೆ, ಕೊಂಚ ಕಾಯಬೇಕಷ್ಟೇ. ಇಂದಿನ ಶ್ರಮಕ್ಕೆ ನಾಳೆ ಪ್ರತಿಫಲ ಸಿಗುವುದಲ್ಲವೇ ?
ಮಿಥುನ : ಕೊನೆಗೂ ನಿಮ್ಮ ಬಳಿ ನಿಷ್ಠುರವಾಗಿ ಹೇಳುವ, ಮಾತಾಡುವ ಧೈರ್ಯ ಕಡಿಮೆ ಎಂಬುದನ್ನು ಸಾಬೀತು ಮಾಡಿದಿರಿ. ಇವತ್ತಿನ ಆಗು ಹೋಗುಗಳಿಗೆ ನಿಮ್ಮ ನಿರ್ಧಾರಗಳೇ ಕಾರಣವಾಗಿರುತ್ತವೆ. ಸಂತೋಷವನ್ನೇ ನಿರೀಕ್ಷಿಸಿದರೆ ತಪ್ಪಿಲ್ಲ.
ಕಟಕ : ಜೀವನದ ಜಂಜಾಟದಿಂದ ಬೇಸತ್ತಿದ್ದೀರಿ. ಇರುಳ ನಂತರ ಹಗಲು ಬಂದೇ ಬರುತ್ತದೆ. ನಿಮ್ಮ ಬದುಕಲ್ಲೂ ಅಷ್ಟೇ. ಸುಖ ಬರುವ ಕಾಲ ಇದು.
ಸಿಂಹ : ಹೊಸ ಒಡಂಬಡಿಕೆಯ ಕಡೆ ಮನ ಮಿಡಿಯುತ್ತಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ. ಅಪಾಯದ ಭೀತಿ ಇದೆ. ಪ್ರೇಮಿಗಳಿಗೆ ಶುಭ ಸಂಜೆ ಎದುರಾಗಬಹುದು.
ಕನ್ಯಾ : ನಿಮ್ಮ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರಕುತ್ತದೆ. ಇಂದು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಿದರಂತೂ ಬಡ್ತಿ, ಪ್ರಶಸ್ತಿ ಎರಡೂ ನಿಮ್ಮದೆ. ಆರೋದ್ಯ ಕೈ ಕೊಟ್ಟಿದ್ದರೆ ಬಂಡೆ ಗುದ್ದಿ ನೀರು ತೆಗೆವ ಸಾಹಸ ಬೇಡ.
ತುಲಾ : ಕೀರ್ತಿ - ಅಪಕೀರ್ತಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಬೈಗುಳದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ತಪ್ಪು ಕೆಲಸ ಮಾಡಿದ್ದರೆ ಆ ಬಗ್ಗೆ ನೋವು ನಿಮ್ಮ ಬಳಿಯೇ ಇರುತ್ತದಲ್ಲವಾ ? ಎಲ್ಲ ನೀವು ಅಂದುಕೊಂಡತೇ ಆಗುತ್ತದೆ ಎನ್ನುವ ಭ್ರಮೆ ಬೇಡ.
ವೃಶ್ಚಿಕ : ಪ್ರಯಾಣ ಹೊರಡುವ ಗುಂಗಿನಲ್ಲಿದ್ದೀರಿ . ಸದ್ಯಕ್ಕೆ ಯಾವುದೇ ಅನುಕೂಲಗಳಿಲ್ಲ. ಮನೆಯಲ್ಲಿ ವಾತಾವರಣವನ್ನು ತಿಳಿಯಾಗಿಸುವ ಉಸಾಬರಿಗೇ ಕೈ ಹಾಕದೆ ಬೀದಿ ಸವೆಸಿದರೆ ಪ್ರಯೋಜನ ಏನು ?
ಧನಸ್ಸು : ಮನಸ್ಸಿದ್ದರೆ ತಾನೆ ಮಾರ್ಗ, ಗ್ರಹಗತಿಗಳೂ ಅನುಕೂಲಕರವಾಗಿವೆ. ಮನೆ, ಸೈಟು ಕೊಂಡರೆ ಲಾಭ. ಅನ್ಯರನ್ನು ಮೆಚ್ಚಿಸುವ ಹರ ಸಾಹಸ ಬೇಡ.
ಮಕರ : ನಿಮ್ಮ ನಿರಾಸಕ್ತಿಯಿಂದ ಆಗುವ ದೊಡ್ಡ ನಷ್ಟಕ್ಕೆ ನೀವೇ ಹೊಣೆಗಾರರಾಗಿರುತ್ತೀರಿ. ಸಂದಿಗ್ಧಗಳನ್ನು ಎದುರಿಸುವ ದಾರಿಯನ್ನು ಹೇಗೆ ಕಂಡುಕೊಳ್ಳುತ್ತೀರಿ ಎಂಬಲ್ಲಿ ನಿಮ್ಮ ಕೌಶಲ್ಯ ನಿರ್ಧಾರವಾಗುತ್ತದೆ.
ಕುಂಭ : ಆಕಾಶ ಏನೂ ಕಳಚಿ ತಲೆಯ ಮೇಲೆ ಬೀಳುವುದಿಲ್ಲ. ನಿರ್ಭೀತಿಯಿಂದ ಮುಂದಡಿ ಇಟ್ಟರೆ ಜಯ ಖಂಡಿತ. ನಿಮ್ಮ ಆತ್ಮತೃಪ್ತಿಗೆ ಕಾರ್ಯ ನಿರ್ವಹಿಸಿ.
ಮೀನ : ಹೊಸ ವಿಷಯಗಳ ಬಗ್ಗೆ ಚಿಂತಿಸಿ. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ಅಗತ್ಯ ಇಲ್ಲ. ಇಂದಂತೂ ನಿಮಗೆ ಎಲ್ಲ ವ್ಯತಿರಿಕ್ತವಾಗಿದೆ. ಕುಲದೇವರನ್ನು ನಂಬಿದರೆ, ಸಂಕಷ್ಟ ಪರಿಹಾರ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications