Get Updates
Get notified of breaking news, exclusive insights, and must-see stories!

ಈಡನ್‌ಗಾರ್ಡನ್‌ನಲ್ಲಿ ಭಾರತಕ್ಕೆ ಮರುಹುಟ್ಟು, ಆಸೀಸ್‌ಗೆ ಮರೆಯಲಾಗದ ಪೆಟ್ಟು

(ಕೋಲ್ಕತ ಪ್ರತಿನಿಧಿಯಿಂದ)

V.V.S. Laxman - Man of the Matchಕೋಲ್ಕತ : ನಿಮಗೆ ಶ್ರೀರಾಮನ ಅಶ್ವ ಮೇಧ ಯಾಗ ಗೊತ್ತಲ್ಲ. ಎಲ್ಲಾ ಕಡೆ ಜಯ ಸಾಧಿಸಿದ ರಾಮನ ವಿಜಯಗುದುರೆಯನ್ನು ಲವ- ಕುಶ ಕಟ್ಟಿ ಹಾಕಿದ್ದು. ಹಾಗೆಯೇ ನಮ್ಮ ಭಾರತದ ಆಟಗಾರರು ಆಸ್ಟ್ರೇಲಿಯಾದ ಕುದುರೆಯ ಗೆಲುವಿನೋಟಕ್ಕೆ ಗುರುವಾರ ಕಡಿವಾಣ ಹಾಕಿದರು. ದಾಖಲೆ ಮೆರೆದ ಲಕ್ಷ್ಮಣ್‌, ದ್ರಾವಿಡ್‌, ಕುಂಬ್ಳೆ ಕೊರತೆ ನೀಗಿದ ಹುಡುಗ ಹರ್ಭಜನ್‌ ಸಿಂಗ್‌ ಹಾಗೂ ಆಪದ್ಬಾಂಧವ ಸಚಿನ್‌ ತೆಂಡೂಲ್ಕರ್‌ ಪಟ್ಟು-ಗ-ಳಿ-ಗೆ ಕಾಂಗ-ರೂ-ಗ-ಳ-ಲ್ಲಿ ಉತ್ತ-ರ-ವಿ-ರ-ಲಿ-ಲ್ಲ . ದಾಖ-ಲೆ-ಯ 281 ರನ್‌ ಚಚ್ಚಿ-ದ ಲಕ್ಷ್ಮ-ಣ್‌ ಪಂದ್ಯ ಪುರು-ಷೋ-ತ್ತ-ಮ ಎನಿ-ಸಿ-ದ-ರು.

ಗೆಲ್ಲಲು 384 ರನ್‌ಗಳ ಭಾರೀ ಸವಾಲನ್ನು ಎದುರಿಸಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ ಅದನ್ನು ಸಾಧಿಸುವ ಲಕ್ಷಣವನ್ನೂ ತೋರಿತು. ಮೊದಲ ವಿಕೆಟ್‌ಗೆ ಮ್ಯಾಥ್ಯೂ ಹೇಡನ್‌ ಹಾಗೂ ಮೈಕೆಲ್‌ ಸ್ಲೇಟರ್‌ (43, 7 ಬೌಂಡರಿ) 74 ರನ್‌ ಕಲೆಹಾಕಿದರು. ನಂತರ ಬಂದ ಜಸ್ಟಿನ್‌ಲ್ಯಾಂಗರ್‌ ಗೆಲ್ಲಬೇಕೆಂದೇ ಬ್ಯಾಟು ಬೀಸಲು ಶುರುವಿಟ್ಟರು. ಅವರು 21 ಎಸೆತಗಳಲ್ಲಿ ಒಂದು ಸಿಕ್ಸರ್‌ 3 ಬೌಂಡರಿ ಇದ್ದ 28 ರನ್‌ ದೋಚಿದರೂ, ಹರ್ಭಜನ್‌ ಅವರನ್ನು ಹೆಚ್ಚು ಹೊತ್ತು ನಿಲ್ಲಗೊಡದೆ ಪೆವಿಲಿಯನ್‌ಗೆ ಕಳಿಸಿದರು.

ಬ್ಯಾಟಿಂಗ್‌ ದಿಗ್ಗಜಗಳಾದ ಮಾರ್ಕ್‌ ವಾ, ಪಾಂಟಿಂಗ್‌, ಗಿಲ್‌ಕ್ರಿಸ್ಟ್‌ ಎಲ್ಲರೂ ಶೂನ್ಯ ಸಂಪಾದನೆ ಮಾಡಿದರು. ಈ ಪೈಕಿ ಪಾಂಟಿಂಗ್‌ ಹಾಗೂ ಗಿಲ್‌ಕ್ರಿಸ್ಟ್‌ ವಿಕೆಟ್‌ ಕಿತ್ತದ್ದು ಮಾಯಗಾರ ಸಚಿನ್‌. ನಡುವೆ ಸ್ಟೀವ್‌ ವಾ (24, 4 ಬೌಂಡರಿ) ಕೂಡ ಹರ್ಭಜನ್‌ ಮೋಡಿಗೆ ಕ್ಯಾಚ್‌ ಕೊಟ್ಟರು. ಒಂದು ಕಡೆ ಭದ್ರವಾಗಿ ನಿಂತಿದ್ದ ಹೇಡನ್‌ (67, 6 ಬೌಂಡರಿ), ಸಚಿನ್‌ಗೆ ಎಲ್‌ಬಿ ಆದರು. ಶೇನ್‌ ವಾರ್ನ್‌ ಕೂಡ ಹಾಗೆ ಬಂದು ಹೀಗೆ ಹೋದರು.

ಮೊದಲ ಇನ್ನಿಂಗ್ಸ್‌ನಲ್ಲಿ ಗೋಳುಹೊಯ್ದುಕೊಂಡಿದ್ದ ಗಿಲ್ಲೆಸ್ಪಿ ಹರ್ಭಜನ್‌ ಚೆಂಡಿನ ಗತಿಯನ್ನೇ ಅರಿಯದೆ ದಾಸ್‌ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಬಲಿಯಾದರು. ಅಂತಿಮವಾಗಿ ಸ್ವಲ್ಪ ಹೋರಾಟ ತೋರಿದರೂ, ಮೆಕ್‌ಗ್ರಾತ್‌ ವಿಕೆಟ್‌ ಒಪ್ಪಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಗಳಿಸಿದ ಹರ್ಭಜನ್‌ ಪಂದ್ಯದಲ್ಲಿ ಒಂದು ಹ್ಯಾಟ್ರಿಕ್‌ ಸೇರಿದಂತೆ ಒಟ್ಟಾರೆ 13 ವಿಕೆಟ್‌ ಬುಟ್ಟಿಗೆ ಹಾಕಿಕೊಂಡರು. ಆಪತ್ತಿಗಾಗುವ ನೆಂಟ ಸಚಿನ್‌ ಕೇವಲ ಓವರ್‌ಗಳಲ್ಲಿ 3 ವಿಕೆಟ್‌ ಕಿತ್ತು, ಗೆಲುವು ಕುಸಿಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಸ್ಟ್ರೇಲಿಯಾ 212 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು.

ಇದಕ್ಕೂ ಮುನ್ನ ಬುಧವಾರವಿಡೀ ಮಿಂಚಿದ್ದ ಲಕ್ಷ್ಮಣ್‌ ಗುರುವಾರ ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ. 300 ಗಳಿಸುವ ಆತುರದ ಹೆಜ್ಜೆಯಲ್ಲಿ ಅವರು ಎಡವೋ ಮುನ್ನ 281 (45 ಬೌಂಡರಿ) ರನ್‌ ಗಳಿಸಿದ್ದರು. ಮೊದಲಿನಿಂದ ಆಕ್ರಮಣಕ್ಕಿಳಿದ ದ್ರಾವಿಡ್‌ (180) ಡಿಕ್ಲೇರ್‌ ಮಾಡಿಕೊಳ್ಳುವ ಮುನ್ನ ರನ್‌ ಪೇರಿಸುವ ತರಾತುರಿಯಲ್ಲಿ ರನೌಟ್‌ ಆದರು. ಜಾಹಿರ್‌ ಖಾನ್‌ (15 ಎಸೆತಗಳಲ್ಲಿ 23) ಹಾಗೂ ಹರ್ಭಜನ್‌ ಸಿಂಗ್‌ (6 ಎಸೆತಗಳಲ್ಲಿ 8) ಬೌನ್ಸರ್‌ಗಳನ್ನೂ ಅಡ್ಡಾದಿಡ್ಡಿ ಬೌಂಡರಿಗಟ್ಟಿ ಭಾರತಕ್ಕೆ ಸಾಕಷ್ಟು ಮುನ್ನಡೆ ದೊರಕಿಸಿ ಕೊಟ್ಟರು. ಭಾರತದ ಸ್ಕೋರು 7 ವಿಕೆಟ್‌ ನಷ್ಟಕ್ಕೆ 657 ಆಗಿದ್ದಾಗ ಗಂಗೂಲಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡರು. ಕಾಂಗರೂ ಪರ ಮೆಕ್‌ಗ್ರಾತ್‌ 3 ಹಾಗೂ ಗಿಲ್ಲೆಸ್ಪಿ 2 ವಿಕೆಟ್‌ ಕಿತ್ತರು. ಸ್ಪಿನ್‌ ದಿಗ್ಗಜ ಶೇನ್‌ ವಾರ್ನ್‌ ಅಗ್ಗವಾದರು.

ಸತತ 16 ಟೆಸ್ಟ್‌ ಗೆದ್ದಿದ್ದ ಆಸ್ಟ್ರೇಲಿಯಾಗೆ ಇದು ಮರೆಯದ ಸೋಲು, ಭಾರತಕ್ಕೆ ಪವಾಡಸದೃಶ ಗೆಲುವು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+